ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತಿನ್ ಗಡ್ಕರಿ-RSS ಭೇಟಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ಬದಲಾವಣೆ?

|
Google Oneindia Kannada News

ನಾಗ್ಪುರ, ಮೇ 20: ಲೋಕಸಭೆ ಚುನಾವಣೆ ಫಲಿತಾಂಶ ಎರಡು ದಿನ ಇದ್ದಂತೆ ಬಿಜೆಪಿ ಪಾಳಯದಲ್ಲಿಯೇ ಕುತೂಹಲ ಮೂಡಿಸುವ ಘಟನೆ ನಡೆದಿದೆ. ಪ್ರಧಾನಿ ಅಭ್ಯರ್ಥಿ ಬಗೆಗೆ ಅನುಮಾನ ಏಳುವಂತೆ ಇದು ಮಾಡಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಬಿಜೆಪಿಯ ರಿಮೋಟ್‌ ಕಂಟ್ರೋಲ್ ಎನ್ನಲಾಗುವ ಆರ್‌ಎಸ್‌ಎಸ್‌ನ ಮುಖ್ಯ ಕಾರ್ಯದರ್ಶಿ ಭಯ್ಯಾಜಿ ಜೋಶಿ ಅವರು ಇಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಆಗಿ ಮಾತುಕತೆ ನಡೆಸಿದ್ದಾರೆ.

ಬಿಜೆಪಿ ಎಂದಿಗೂ ಮೋದಿ, ಅಮಿತ್ ಶಾ ಪಕ್ಷ ಆಗಲಾರದು: ನಿತಿನ್ ಗಡ್ಕರಿಬಿಜೆಪಿ ಎಂದಿಗೂ ಮೋದಿ, ಅಮಿತ್ ಶಾ ಪಕ್ಷ ಆಗಲಾರದು: ನಿತಿನ್ ಗಡ್ಕರಿ

ನಿತಿನ್ ಗಡ್ಕರಿ ಅವರನ್ನು ಪ್ರಧಾನಿ ಅಭ್ಯರ್ಥಿಗೆ ಮೋದಿಗೆ ಪರ್ಯಾಯ ಎಂಬಂತೆ ಕೆಲ ತಿಂಗಳುಗಳ ಹಿಂದಷ್ಟೆ ಬಿಂಬಿಸಲಾಗಿತ್ತು. ಆರ್‌ಎಸ್‌ಎಸ್‌ ನಿತಿನ್ ಗಡ್ಕರಿ ಬೆನ್ನಿಗಿದೆ ಎಂದು ಭಾರಿ ಸುದ್ದಿ ಹರಿದಾಡಿತ್ತು, ಮಹಾರಾಷ್ಟ್ರ ಸಿಎಂ ಸಹ ನಿತಿನ್ ಗಡ್ಕರಿ ಯೋಗ್ಯರು ಎಂದು ಹೇಳಿದ್ದರು, ಆದರೆ ಆ ನಂತರ ನಿತಿನ್ ಗಡ್ಕರಿ ಅವರೇ ಸುದ್ದಿಯನ್ನು ತಳ್ಳಿ ಹಾಕಿದ್ದರು.

ಪ್ರಧಾನಿ ಹುದ್ದೆ ಬಗ್ಗೆ ಚರ್ಚೆ?

ಪ್ರಧಾನಿ ಹುದ್ದೆ ಬಗ್ಗೆ ಚರ್ಚೆ?

ಆದರೆ ಇಂದು ಆರ್‌ಎಸ್‌ಎಸ್‌ ಮುಖ್ಯ ಕಾರ್ಯದರ್ಶಿ ಅವರು ನಾಗ್ಪುರದಲ್ಲಿ ನಿತಿನ್ ಗಡ್ಕರಿ ಅವರನ್ನು ಭೇಟಿ ಆಗಿರುವುದು ಪ್ರಧಾನಿ ಹುದ್ದೆ ಚರ್ಚೆಗೆ ಮತ್ತೆ ಜೀವ ತುಂಬಿದ್ದು, ನಿತಿನ್ ಗಡ್ಕರಿಗೆ ಪ್ರಧಾನಿ ಆಗುವ ಯೋಗವನ್ನೇನಾದರೂ ಆರ್‌ಎಸ್‌ಎಸ್ ಕರುಣಿಸಲಿದೆಯೇ ಎಂಬ ಅನುಮಾನ ಪ್ರಾರಂಭವಾಗಿದೆ.

ನನಗೆ ಕಾಂಗ್ರೆಸ್ ಬೆಂಬಲವಿದೆ ಎಂದ ಬಿಜೆಪಿಯ ನಿತಿನ್ ಗಡ್ಕರಿ ನನಗೆ ಕಾಂಗ್ರೆಸ್ ಬೆಂಬಲವಿದೆ ಎಂದ ಬಿಜೆಪಿಯ ನಿತಿನ್ ಗಡ್ಕರಿ

'ಮೋದಿಯೇ ಪ್ರಧಾನಿ ಅಭ್ಯರ್ಥಿ'

'ಮೋದಿಯೇ ಪ್ರಧಾನಿ ಅಭ್ಯರ್ಥಿ'

ಇದೇ ಸುದ್ದಿಯು ಈ ಹಿಂದೆ ಹಬ್ಬಿದ್ದಾಗ ಪ್ರತಿಕ್ರಿಯಿಸಿದ್ದ ನಿತಿನ್ ಗಡ್ಕರಿ, ಈ ಚುನಾವಣೆಯನ್ನು ಮೋದಿ ಅವರ ನೇತೃತ್ವದಲ್ಲಿ ಎದುರಸಲಿದ್ದು, ನಮ್ಮ ಪ್ರಧಾನಿ ಅಭ್ಯರ್ಥಿ ಮೋದಿ ಅವರೇ ಎಂದು ಹೇಳಿದ್ದರು.

ಪಿಎಂ ಕನಸಿಲ್ಲ, ಆರ್‌ಎಸ್‌ಎಸ್‌ಗೆ ಹಾಗೊಂದು ಯೋಜನೆಯೂ ಇಲ್ಲ: ಗಡ್ಕರಿಪಿಎಂ ಕನಸಿಲ್ಲ, ಆರ್‌ಎಸ್‌ಎಸ್‌ಗೆ ಹಾಗೊಂದು ಯೋಜನೆಯೂ ಇಲ್ಲ: ಗಡ್ಕರಿ

ಬಿಜೆಪಿಯು ಮೋದಿ-ಶಾ ಪಕ್ಷ ಅಲ್ಲ

ಬಿಜೆಪಿಯು ಮೋದಿ-ಶಾ ಪಕ್ಷ ಅಲ್ಲ

ಆದರೆ ಕೆಲವು ದಿನಗಳ ಹಿಂದೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಬಿಜೆಪಿಯು ಮೋದಿ ಮತ್ತು ಅಮಿತ್ ಶಾ ಪಕ್ಷ ಎಂದಿಗೂ ಆಗುವುದಿಲ್ಲ, ಎಲ್ಲ ನಾಯಕರು ಪಕ್ಷದ ನಂತರವೇ ಎಂಬರ್ಥದ ಹೇಳಿಕೆ ನೀಡಿದ್ದರು.

ಆರ್‌ಎಸ್‌ಎಸ್‌ ಮೆಚ್ಚಿನ ನಾಯಕ ನಿತಿನ್ ಗಡ್ಕರಿ

ಆರ್‌ಎಸ್‌ಎಸ್‌ ಮೆಚ್ಚಿನ ನಾಯಕ ನಿತಿನ್ ಗಡ್ಕರಿ

ನಿತಿನ್ ಗಡ್ಕರಿ ಅವರು ಆರ್‌ಎಸ್‌ಎಸ್‌ ಮೆಚ್ಚಿನವರಾಗಿದ್ದು, ಈ ಹಿಂದಿನಿಂದಲೂ ಗಡ್ಕರಿ ಅವರ ಮೇಲೆ ಆರ್‌ಎಸ್‌ಎಸ್‌ಗೆ ಹೆಚ್ಚಿನ ಒಲವಿದೆ. ಹಾಗಾಗಿ ಆರ್‌ಎಸ್‌ಎಸ್‌ ನಿತಿನ್ ಗಡ್ಕರಿ ಅವರನ್ನು ಪ್ರಧಾನಿ ಹುದ್ದೆಗೆ ಬೆಂಬಲಿಸುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಲಾಗಿದೆ.

English summary
RSS general secratory Bhayyaji Joshi met central minister Nitin Gadkari today. It creat some doubts about RSS backing Nitin Gadkari for PM post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X