ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಾರೋಗ್ಯಕ್ಕೊಳಗಾದ ಮಾಜಿ ಉದ್ಯೋಗಿಯನ್ನು ನೋಡಲು 150 ಕಿ.ಮೀ ದೂರದಿಂದ ಬಂದ ರತನ್ ಟಾಟಾ

|
Google Oneindia Kannada News

ಪುಣೆ, ಜನವರಿ 06: ಅನಾರೋಗ್ಯಕ್ಕೊಳಗಾಗಿದ್ದ ಮಾಜಿ ಉದ್ಯೋಗಿಯನ್ನು ನೋಡಲು 150 ಕಿ.ಮೀನಿಂದ ಬಂದ ಉದ್ಯಮಿ ರತನ್ ಟಾಟಾ ಅವರ ಈ ನಡೆಗೆ ಭಾರಿ ಶ್ಲಾಘನೆ ವ್ಯಕ್ತವಾಗಿದೆ.

ಕಳೆದ 2 ವರ್ಷಗಳಿಂದ ಉದ್ಯೋಗಿಗೆ ಆರೋಗ್ಯ ಸರಿ ಇಲ್ಲ ಎಂಬ ಮಾಹಿತಿ ರತನ್ ಟಾಟಾಗೆ ತಲುಪಿದ್ದು, ತಕ್ಷಣವೇ ಉದ್ಯೋಗಿ ವಾಸಿಸುತ್ತಿದ್ದ ಪುಣೆಯಲ್ಲಿರುವ ಫ್ರೆಂಡ್ಸ್ ಸೊಸೈಟಿಗೆ ಭೇಟಿ ನೀಡಿ ಉದ್ಯೋಗಿಯ ಆರೋಗ್ಯ ವಿಚಾರಿಸಿದ್ದಾರೆ.

ರತನ್ ಟಾಟಾ ಕಾರಿನ ನಂಬರ್ ಪ್ಲೇಟ್ ದುರ್ಬಳಕೆ, ಮಹಿಳೆ ವಿರುದ್ಧ ಎಫ್‌ಐಆರ್ ದಾಖಲುರತನ್ ಟಾಟಾ ಕಾರಿನ ನಂಬರ್ ಪ್ಲೇಟ್ ದುರ್ಬಳಕೆ, ಮಹಿಳೆ ವಿರುದ್ಧ ಎಫ್‌ಐಆರ್ ದಾಖಲು

ಯೋಗೇಶ್ ದೇಸಾಯಿ ಎಂಬುವವರು ಲಿಂಕ್ಡ್ ಇನ್ ನಲ್ಲಿ ಈ ಘಟನೆಯನ್ನು ಹಂಚಿಕೊಂಡಿದ್ದು, ಈ ಘಟನೆ ವೈರಲ್ ಆಗತೊಡಗಿದೆ.

Ratan Tata Travels To Pune To Visit Ailing Former Employee, Wins Hearts

ಯೋಗೀಶ್ ಅವರು ರತನ್ ಟಾಟಾ ಉದ್ಯೋಗಿಯೊಂದಿಗೆ ಮಾತನಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಇಂಟರ್ ನೆಟ್ ನಲ್ಲಿ ವೈರಲ್ ಆಗತೊಡಗಿದ್ದು ರತನ್ ಟಾಟಾ ಅವರ ನಡೆಯ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತವಾಗತೊಡಗಿದೆ.

ಟಾಟಾ ಸಮೂಹದ ಮಾಜಿ ಅಧ್ಯಕ್ಷ ರತನ್‌ ಟಾಟಾ ಅವರು ಕಂಪನಿಯ ಮಾಜಿ ಉದ್ಯೋಗಿಯೊಬ್ಬರ ಯೋಗಕ್ಷೇಮವನ್ನು ವಿಚಾರಿಸಲು ಮುಂಬಯಿನಿಂದ ಪುಣೆಗೆ ತೆರಳಿರುವ ಹೃದಯಸ್ಪರ್ಶಿ ಘಟನೆ ಜಾಲತಾಣಗಳಲ್ಲಿ ಎಲ್ಲರ ಗಮನ ಸೆಳೆದಿದೆ.

ರತನ್‌ ಟಾಟಾ ಅವರಿಗೆ ಈಗ 83 ವರ್ಷ ವಯಸ್ಸು. ಈ ಇಳಿ ವಯಸ್ಸಿನಲ್ಲಿ ಮಾಜಿ ಉದ್ಯೋಗಿಯ ಸೌಖ್ಯ ವಿಚಾರಿಸಲು ತೆರಳಿದ ಅವರ ಹೃದಯ ವೈಶಾಲ್ಯತೆಯನ್ನು ನೆಟ್ಟಿಗರು ಪ್ರಶಂಸಿಸಿದ್ದಾರೆ.

English summary
Social media users are full of praise for Ratan Tata after it emerged that the Mumbai-based industrialist quietly travelled to Pune to visit an ailing former employee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X