ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯರು ಬೆಚ್ಚುವ ಕೊರೊನಾ ಪ್ರಕರಣವೊಂದು ಪುಣೆಯಲ್ಲಿ ದಾಖಲು!

|
Google Oneindia Kannada News

ವಿಶ್ವದಲ್ಲಿ ಆತಂಕ ಹುಟ್ಟಿಸಿರುವ ಮಹಾಮಾರಿ ಕೊರೊನಾ ವೈರಸ್ ಸೋಂಕು ಭಾರತದಲ್ಲಿ 258 ಮಂದಿಗೆ ತಗುಲಿದೆ. ವಿದೇಶಗಳಿಂದ ಭಾರತಕ್ಕೆ ವಾಪಸ್ ಆದ ಮಂದಿಯಲ್ಲಿ ಇಲ್ಲಿಯವರೆಗೂ ಕೋವಿಡ್-19 ಪಾಸಿಟಿವ್ ಕಂಡು ಬಂದಿತ್ತು. ಆದ್ರೀಗ, ಭಾರತೀಯರನ್ನು ಬೆಚ್ಚಿಬೀಳಿಸುವ ಸುದ್ದಿಯೊಂದು ಪುಣೆಯಿಂದ ವರದಿಯಾಗಿದೆ.

Coronavirus Janta Curfew Live Updates: ಭಾರತದಲ್ಲಿ ಕೊರೊನಾ ಸಾವಿನ ಸಂಖ್ಯೆ 7ಕ್ಕೆ ಏರಿಕೆCoronavirus Janta Curfew Live Updates: ಭಾರತದಲ್ಲಿ ಕೊರೊನಾ ಸಾವಿನ ಸಂಖ್ಯೆ 7ಕ್ಕೆ ಏರಿಕೆ

ವಿದೇಶದ ಟ್ರಾವೆಲ್ ಹಿಸ್ಟರಿ ಹೊಂದಿರದೆ ಇದ್ದರೂ, ಪುಣೆಯ ಮಹಿಳೆಗೆ ಇಂದು ಕೊರೊನಾ ವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿದೆ. ಇದು ಸಮಸ್ತ ಭಾರತೀಯರನ್ನು ಆತಂಕಕ್ಕೀಡಾಗುವಂತೆ ಮಾಡಿದೆ.

ಚೀನಾ ಎಸಗಿದ ಒಂದು ಮಹಾ ಪ್ರಮಾದಕ್ಕೆ ಇಂದು ಜಗತ್ತಿಗೆ ಘೋರ ಶಿಕ್ಷೆ!ಚೀನಾ ಎಸಗಿದ ಒಂದು ಮಹಾ ಪ್ರಮಾದಕ್ಕೆ ಇಂದು ಜಗತ್ತಿಗೆ ಘೋರ ಶಿಕ್ಷೆ!

ಹಂದಿ ಜ್ವರದ ಶಂಕೆ ಹಿನ್ನಲೆಯಲ್ಲಿ ಪುಣೆಯ ಭಾರತಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ 40 ವರ್ಷದ ಮಹಿಳೆಯ ಗಂಟಲಿನ ದ್ರವ ಮಾದರಿಯನ್ನು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲಾಗಿತ್ತು. ಅದರ ರಿಪೋರ್ಟ್ ಲಭ್ಯವಾಗಿದ್ದು, ಮಹಿಳೆಗೆ ಕೋವಿಡ್-19 ಪಾಸಿಟಿವ್ ಇರುವುದು ಇಂದು ದೃಢಪಟ್ಟಿದೆ.

Pune Woman With No Travel History Tests Covid 19 Positive

ವಿದೇಶಿ ಪ್ರಯಾಣ ಮಾಡದ ಪುಣೆಯ ಮಹಿಳೆ ಮಾರ್ಚ್ 3 ರಂದು ನವಿ ಮುಂಬೈನಲ್ಲಿ ನಡೆದ ಮದುವೆಯೊಂದರಲ್ಲಿ ಪಾಲ್ಗೊಂಡಿದ್ದರು ಎಂಬ ಮಾಹಿತಿ ತಿಳಿದುಬಂದಿದೆ. ಮದುವೆಯಲ್ಲಿ ಕೊರೊನಾ ಸೋಂಕು ತಗುಲಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

''ಈ ಪ್ರಕರಣವನ್ನು ತನಿಖೆ ಮಾಡುತ್ತಿದ್ದೇವೆ. ಆಕೆ ವಿದೇಶಿ ಪ್ರಯಾಣ ಮಾಡಿಲ್ಲ. ಬಹುಶಃ ವಿದೇಶದಿಂದ ಬಂದವರಿಂದಾಗಿ ಆಕೆಗೆ ಸೋಂಕು ತಗುಲಿರಬಹುದು. ಮದುವೆಗಾಗಿ ನವಿ ಮುಂಬೈಗೆ ಆಕೆ ಕ್ಯಾಬ್ ನಲ್ಲಿ ಹೋಗಿದ್ದಾರೆ'' ಎಂದು ಡಿಸಿ ನವಲ್ ಕಿಶೋರ್ ರಾಮ್ ತಿಳಿಸಿದ್ದಾರೆ.

'ನಾವು ಮಾಡಿದ ಮೂರ್ಖತನವನ್ನು ನೀವು ಮಾಡ್ಬೇಡಿ'-ಇಟಲಿ ಪ್ರಜೆಯ ಭಾವುಕ ಪತ್ರ'ನಾವು ಮಾಡಿದ ಮೂರ್ಖತನವನ್ನು ನೀವು ಮಾಡ್ಬೇಡಿ'-ಇಟಲಿ ಪ್ರಜೆಯ ಭಾವುಕ ಪತ್ರ

ಒಂದು ವೇಳೆ ಮದುವೆಯಲ್ಲೇ ಆಕೆಗೆ ಕೊರೊನಾ ಸೋಂಕು ತಗುಲಿದ್ದರೆ, ಮದುವೆಯಲ್ಲಿ ಪಾಲ್ಗೊಂಡಿದ್ದ ಇತರರಿಗೂ ಗಂಡಾಂತರ ಕಾದಿದೆ ಅಂತಲೇ ಅರ್ಥ.

English summary
Pune Woman with no travel history tests Covid 19 positive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X