ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಳಿಯಿಂದ ಕೊರೊನಾ ವೈರಸ್: ಸುಳ್ಳು ಸುದ್ದಿ ಹರಡುವವರ ವಿರುದ್ಧ ದೂರು

|
Google Oneindia Kannada News

ಪುಣೆ, ಫೆಬ್ರವರಿ 8: ಕೊರೊನಾ ವೈರಸ್ ಭೀತಿ ವ್ಯಾಪಕವಾಗಿರುವಂತೆಯೇ, ಅದರ ಕುರಿತು ಭೀತಿ ಹೆಚ್ಚಿಸುವ ಅನೇಕ ಸುಳ್ಳು ಸುದ್ದಿಗಳನ್ನು ಹರಿಬಿಡಲಾಗುತ್ತಿದೆ. ಕೋಳಿಗಳ ಮೂಲಕ ಕೊರೊನಾ ವೈರಸ್ ಹರಡುತ್ತಿದೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಮಾಧ್ಯಮಗಳ ಮೂಲಕ ಹರಿದಾಡುತ್ತಿದ್ದು, ಇದು ಕುಕ್ಕಟೋದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಹೀಗಾಗಿ ಸುಳ್ಳು ಸುದ್ದಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.

ಚಿಕನ್ ಮತ್ತು ಮೊಟ್ಟೆ ತಿನ್ನುವುದರಿಂದ ಕೊರೊನಾ ವೈರಸ್ ಹರಡುತ್ತಿದೆ ಎಂಬ ಸುಳ್ಳು ಸುದ್ದಿ ವಾಟ್ಸಾಪ್ ಮತ್ತು ಫೇಸ್‌ಬುಕ್‌ಗಳಲ್ಲಿ ಹರಿದಾಡುತ್ತಿದೆ. ದೇಶದಾದ್ಯಂತ ಈ ವದಂತಿ ಕಾಳ್ಗಿಚ್ಚಿನಂತೆ ಹರಡಿದ್ದು, ಇದರಿಂದ ನಮ್ಮ ವ್ಯಾಪಾರ ಚಟುವಟಿಕೆಗೆ ತೀವ್ರ ಹೊಡೆತ ಬಿದ್ದಿದೆ ಎಂದು ಮಹಾರಾಷ್ಟ್ರದ ಕೋಳಿ ಸಾಕಾಣಿಕೆದಾರರು ಅಲವತ್ತುಕೊಂಡಿದ್ದಾರೆ.

ಕೊರೊನಾ ವೈರಸ್: ನಿಮಗೆ ಈ ಮಹತ್ವದ ಅಂಶಗಳು ಗೊತ್ತಿರಲಿಕೊರೊನಾ ವೈರಸ್: ನಿಮಗೆ ಈ ಮಹತ್ವದ ಅಂಶಗಳು ಗೊತ್ತಿರಲಿ

ಕೆಲವು ಜನರು ವಾಟ್ಸಾಪ್ ಮತ್ತು ಫೇಸ್‌ಬುಕ್‌ಗಳ ಮೂಲಕ ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವುದರಿಂದ ಜನರು ಕೋಳಿ ಹಾಗೂ ಮೊಟ್ಟೆಗಳನ್ನು ಖರೀದಿಸುವುದನ್ನು ನಿಲ್ಲಿಸಿದ್ದಾರೆ. ಇದರಿಂದಾಗಿ ಅದರ ಸೇವನೆ ಕುಸಿದಿದ್ದು, ನಮ್ಮ ವ್ಯಾಪಾರಕ್ಕೆ ತೀವ್ರ ಹೊಡೆತ ಬಿದ್ದಿರುವುದರಿಂದ ಭಾರಿ ನಷ್ಟ ಉಂಟಾಗುತ್ತಿದೆ ಎಂದು ತಿಳಿಸಿದ್ದಾರೆ.

ತನಿಖೆ ನಡೆಸುವಂತೆ ಮನವಿ

ತನಿಖೆ ನಡೆಸುವಂತೆ ಮನವಿ

ಸುಳ್ಳು ಸುದ್ದಿಗಳು ಜನರಲ್ಲಿ ಭೀತಿ ಮೂಡಿಸುತ್ತಿದೆ. ಇದರಿಂದಾಗಿ ಜನರು ಕೋಳಿ ಮಾಂಸದ ಬಳಕೆಗೆ ಹಿಂದೇಟು ಹಾಕುತ್ತಿದ್ದಾರೆ. ಈ ಉದ್ಯಮವನ್ನು ನಂಬಿಕೊಂಡಿರುವ ಲಕ್ಷಾಂತರ ಮಂದಿಯ ಬದುಕೂ ಸಂಕಷ್ಟಕ್ಕೆ ಸಿಲುಕಿದೆ.

ಕೊರೊನಾ ವೈರಸ್‌ ಹರಡಲು ಪ್ಯಾಂಗೋಲಿನ್ ಕಾರಣ?ಕೊರೊನಾ ವೈರಸ್‌ ಹರಡಲು ಪ್ಯಾಂಗೋಲಿನ್ ಕಾರಣ?

ನೀವು ಈ ವಿಚಾರದಲ್ಲಿ ತನಿಖೆ ಮಾಡುವಂತೆ ಹಾಗೂ ಈ ಸುಳ್ಳು ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡದಂತೆ ತಡೆಯಬೇಕು ಎಂದು ಮಹಾರಾಷ್ಟ್ರದ ಪುಣೆಯ ಕೋಳಿ ಸಾಕಾಣಿಕೆದಾರರ ಸಂಘವು ಅಲ್ಲಿನ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಶೇ 10ರಷ್ಟು ಬೆಲೆ ಕುಸಿತ

ಶೇ 10ರಷ್ಟು ಬೆಲೆ ಕುಸಿತ

ಕೊರೊನಾ ವೈರಸ್ ಪಕ್ಷಿಗಳಿಂದ ಪಸರಿಸುತ್ತದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವದಂತಿಗಳಿಂದಾಗಿ ಕುಕ್ಕುಟೋದ್ಯಮಕ್ಕೆ ಭಾರಿ ಪೆಟ್ಟು ಬಿದ್ದಿದೆ. ಜನರು ಕೋಳಿ ಮತ್ತು ಮೊಟ್ಟೆಗಳ ಖರೀದಿಗೆ ಹಿಂದೇಟು ಹಾಕುತ್ತಿದ್ದು, ಕೋಳಿ ಮಾಂಸದ ಬೇಡಿಕೆ ತೀವ್ರವಾಗಿ ಕುಸಿದಿದೆ. ಈ ಸುಳ್ಳು ಸಂದೇಶಗಳಿಂದಾಗಿ ದೇಶದಲ್ಲಿ ಕಳೆದ ಎರಡು ಮೂರು ದಿನಗಳಲ್ಲಿ ಕೋಳಿ ಮಾಂಸದ ಬೆಲೆ ಶೇ 10ರಷ್ಟು ಇಳಿಕೆಯಾಗಿದೆ.

Fact Check: 20,000 ಕೊರೊನಾ ವೈರಸ್ ರೋಗಿಗಳ ಹತ್ಯೆಗೆ ಚೀನಾ ನಿರ್ಧಾರ ಸತ್ಯವೇ?Fact Check: 20,000 ಕೊರೊನಾ ವೈರಸ್ ರೋಗಿಗಳ ಹತ್ಯೆಗೆ ಚೀನಾ ನಿರ್ಧಾರ ಸತ್ಯವೇ?

ಏಳೆಂಟು ರೂಪಾಯಿ ಇಳಿಕೆ

ಏಳೆಂಟು ರೂಪಾಯಿ ಇಳಿಕೆ

ಕಳೆದ ವಾರ ದೆಹಲಿಯಲ್ಲಿ ಪ್ರತಿ ಕೆ.ಜಿಗೆ 80 ರೂ. ನಂತೆ ಇದ್ದರೆ, ಪುಣೆಯಲ್ಲಿ 73 ರೂ.ಗೆ ಮಾರಾಟವಾಗುತ್ತಿತ್ತು. ಅದರ ಬೆಲೆ ಈಗ ಪ್ರತಿ ಕೆ.ಜಿಗೆ 72 ರೂ. ಮತ್ತು 65 ರೂ.ಗೆ ಕುಸಿದಿದೆ. ಹಾಗೆಯೇ ಮೊಟ್ಟೆಗಳ ಬೆಲೆ ಕೂಡ ಕುಸಿದಿದ್ದು, ಒಂದು ಮೊಟ್ಟೆ 3.75 ರೂ.ಗೆ ಮಾರಾಟವಾಗುತ್ತಿದೆ ಎಂದು ಬಿಜಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ.

ಕೊರೊನಾ ವೈರಸ್ ಮೊದಲು ಪತ್ತೆಹಚ್ಚಿದ ವೈದ್ಯ ವೈರಸ್‌ನಿಂದ ಸಾವು: ಹೀಗೊಂದು ಆಘಾತಕಾರಿ ಕಥೆಕೊರೊನಾ ವೈರಸ್ ಮೊದಲು ಪತ್ತೆಹಚ್ಚಿದ ವೈದ್ಯ ವೈರಸ್‌ನಿಂದ ಸಾವು: ಹೀಗೊಂದು ಆಘಾತಕಾರಿ ಕಥೆ

ಶೇ 10-15ರಷ್ಟು ಬೇಡಿಕೆ ಕುಸಿತ

ಶೇ 10-15ರಷ್ಟು ಬೇಡಿಕೆ ಕುಸಿತ

'ಕಳೆದ ಎರಡು ದಿನಗಳಲ್ಲಿ ಕೋಳಿ ಮಾಂಸದ ಬೇಡಿಕೆ ಶೇ 10-15ರಷ್ಟು ಇಳಿಕೆಯಾಗಿದೆ. ಕೊರೊನಾ ವೈರಸ್ ಹರಡಲು ಪ್ರಾಣಿಗಳು ಮತ್ತು ಕೋಳಿಗಳು ಕಾರಣವಾಗಿರಬಹುದು ಎಂಬ ಊಹಾಪೋಹ ಹರಿದಾಡುತ್ತಿದೆ. ಇದರಿಂದ ಎಲ್ಲ ವರ್ಗಗಳಲ್ಲಿಯೂ ಬ್ರಾಯ್ಲರ್ ಚಿಕನ್ ಬೆಲೆಗಳು ಶೇ 10ರಷ್ಟು ಕುಸಿದಿದೆ' ಎಂದು ಗೋದ್ರೇಜ್ ಅಗ್ರೋವೆಟ್‌ ವ್ಯವಸ್ಥಾಪಕ ನಿರ್ದೇಶಕ ಬಲರಾಮ್ ಯಾದವ್ ತಿಳಿಸಿದ್ದಾರೆ.

ಕೊರೊನಾ ವೈರಸ್: ಪಾಕಿಸ್ತಾನದ ವಿದ್ಯಾರ್ಥಿಗಳನ್ನೂ ರಕ್ಷಿಸುತ್ತಾ ಭಾರತ?ಕೊರೊನಾ ವೈರಸ್: ಪಾಕಿಸ್ತಾನದ ವಿದ್ಯಾರ್ಥಿಗಳನ್ನೂ ರಕ್ಷಿಸುತ್ತಾ ಭಾರತ?

English summary
Poultry association in Pune has lodged a complaint against the fake news spread in social media as Coronavirus is in chicken.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X