ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್‌ಡೌನ್‌ ಮಧ್ಯೆ ಭೇಟಿ ಮಾಡೋಣ ಎಂದ ಸ್ನೇಹಿತರಿಗೆ ಪಂಚ್ ಕೊಟ್ಟ ಪುಣೆ ಪೊಲೀಸ್

|
Google Oneindia Kannada News

ಪುಣೆ, ಏಪ್ರಿಲ್ 14: ಮೊದಲ ಹಂತದ ಲಾಕ್‌ಡೌನ್‌ ಪೂರ್ತಿಯಾದ ಬೆನ್ನಲ್ಲೆ ಎರಡನೇ ಹಂತದ ಲಾಕ್‌ಡೌನ್‌ ಘೋಷಣೆಯಾಗಿದ್ದು, ಮೇ 3ರ ತನಕ ಸಾರ್ವಜನಿಕರು ಮನೆಯೊಂದ ಹೊರಗೆ ಬರುವಂತಿಲ್ಲ. ಏಪ್ರಿಲ್ 14ರಂದು ಲಾಕ್‌ಡೌನ್‌ ಮುಗಿದು ಹೋಗುತ್ತೆ ಎಂಬ ನಿರೀಕ್ಷೆಯಲ್ಲಿದ್ದವರಿಗೆಲ್ಲ ಈ ನಿರ್ಧಾರ ನಿರಾಸೆ ತಂದಿದೆ.

ಲಾಕ್‌ಡೌನ್‌ ಜಾರಿಯಲ್ಲಿರುವ ಈ ಕಠಿಣ ಸಂದರ್ಭದಲ್ಲೂ ಸ್ನೇಹಿತರಿಬ್ಬರು ಭೇಟಿ ಮಾಡೋಣ ಎಂದು ಟ್ವಿಟ್ಟರ್‌ನಲ್ಲಿ ಚರ್ಚೆ ಮಾಡಿರುವುದು ಕಂಡು ಬಂದಿದೆ. ಈ ಚರ್ಚೆಗೆ ಪೊಲೀಸರು ಮಧ್ಯಪ್ರವೇಶಿಸಿ ಆ ಸ್ನೇಹಿತರಿಗೆ ಭರ್ಜರಿ ಪಂಚ್ ಕೊಟ್ಟಿದ್ದಾರೆ.

ಕೊರೊನಾಗೆ ಲಸಿಕೆ: ಮನುಷ್ಯರ ಮೇಲೆಯೇ ವೈದ್ಯಕೀಯ ಪ್ರಯೋಗ!ಕೊರೊನಾಗೆ ಲಸಿಕೆ: ಮನುಷ್ಯರ ಮೇಲೆಯೇ ವೈದ್ಯಕೀಯ ಪ್ರಯೋಗ!

ಇಂದು ಬೆಳಿಗ್ಗೆ ಪ್ರಧಾನಿ ಮೋದಿ ಲಾಕ್‌ಡೌನ್‌ ವಿಸ್ತರಣೆ ಕುರಿತು ಪ್ರಕಟಣೆ ಮಾಡಿದ ಬಳಿಕ, ಸ್ನೇಹಿತನೊಬ್ಬ, 'ಮೇ 3ರವರೆಗೂ ಕಾಯಲು ಆಗಲ್ಲ, ಸಾರಿ' ಎಂದು ಸ್ನೇಹಿತನಿಗೆ ಟ್ವೀಟ್‌ನಲ್ಲಿ ಕೇಳುತ್ತಾನೆ. ಅದಕ್ಕೆ 'ಹೇ ಅದಕ್ಕೆ ಮುಂಚೆಯೇ ಭೇಟಿ ಮಾಡೋಣ' ಎಂದು ಪ್ರತಿಕ್ರಿಯೆ ನೀಡುತ್ತಾನೆ.

Pune Police Reply To Friends Who Planning To Meet

ಇವರಿಬ್ಬರು ಈ ಚಾಟ್‌ ಪುಣೆ ಪೊಲೀಸರ ಕಣ್ಣಿಗೆ ಬಿದ್ದಿದೆ. ಈ ಮಾತುಕತೆ ಮಧ್ಯೆ ಪುಣೆ ಪೊಲೀಸ್ ಅಧಿಕೃತ ಟ್ವಿಟ್ಟರ್ ಖಾತೆಯ ಪ್ರವೇಶವಾಗಿ, ''ಹೇ, ನಾವು ಕೂಡ ನಿಮ್ಮೊಂದಿಗೆ ಬರುತ್ತೇವೆ ಮತ್ತು ನಿಮಗೆ ಜೊತೆಯಾಗುತ್ತೇವೆ. ಯಾವಾಗ ಮತ್ತು ಎಲ್ಲಿ ಎಂದು ಹೇಳಿ' ಎಂದು ಟ್ವೀಟ್ ಮಾಡಲಾಗಿದೆ.

ಪುಣೆ ಪೊಲೀಸರ ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಎಂಜಾಯ್ ಮಾಡ್ತಿದ್ದಾರೆ. ''ಈ ಟ್ವಿಟ್ಟರ್ ಖಾತೆ ನಿಭಾಯಿಸುತ್ತಿರುವವರಿಗೆ ಒಂದು ಸಲ್ಯೂಟ್'' ಎಂದು ಕಾಮೆಂಟ್ ಮಾಡಿದ್ದರೆ, ಮತ್ತೊಬ್ಬ ''ಪುಣೆ ಪೊಲೀಸರು ಈಗ ಇಫ್ ಯೂ ಆರ್ ಬ್ಯಾಡ್, ಐ ಯಾಮ್ ಯೂ ಆರ್ ಡ್ಯಾಡ್' ಎಂದು ಹೇಳಿದ್ದಾರೆ.

Pune Police Reply To Friends Who Planning To Meet

ಇದಕ್ಕೆ ಮತ್ತೆ ಪ್ರತಿಕ್ರಿಯೆ ನೀಡಿರುವ ಯುವಕ 'ಇದು ಬಹಳ ಚೆನ್ನಾಗಿದೆ, ಆದರೆ ಆಗಲ್ಲ' ಎಂದು ಉತ್ತರಿಸಿದ್ದಾನೆ. ಅಂದ್ಹಾಗೆ, ಏಪ್ರಿಲ್ 14ರ ಸಂಜೆಯೊತ್ತಿಗೆ ದೇಶದಲ್ಲಿ 10 ಸಾವಿರ ಕೊರೊನಾ ಸೋಂಕಿತರು ವರದಿಯಾಗಿದ್ದಾರೆ.

English summary
Pune Police gave a befitting reply to friends who were planning to meet during the lockdown. this tweet went to viral on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X