ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾವೋವಾದಿಗಳಿಗೆ ಬೆಂಬಲ, ದಿಗ್ವಿಜಯ್ ಸಿಂಗ್ ವಿಚಾರಣೆ ಸಾಧ್ಯತೆ!

|
Google Oneindia Kannada News

ನವದೆಹಲಿ, ನವೆಂಬರ್ 19: ಮಾವೋವಾದಿಗಳಿಗೆ ಬೆಂಬಲ ನೀಡಿರುವ ಶಂಕೆ ಮೇರೆಗೆ ಹಿರಿಯ ಕಾಂಗ್ರೆಸ್ ನಾಯಕ, ಮಧ್ಯಪ್ರದೇಶದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ಅವರನ್ನು ಪುಣೆ ಪೊಲೀಸರು ವಿಚಾರಣೆಗೊಳಪಡಿಸುವ ಸಾಧ್ಯತೆ ಕಂಡು ಬಂದಿದೆ.

ವಿವಾದಿತ ಸ್ಥಳದಲ್ಲಿಯೇ ರಾಮಮಂದಿರ ಕಟ್ಟಲು ಬಿಜೆಪಿ ಏಕೆ ಬಯಸುತ್ತಿದೆ?ವಿವಾದಿತ ಸ್ಥಳದಲ್ಲಿಯೇ ರಾಮಮಂದಿರ ಕಟ್ಟಲು ಬಿಜೆಪಿ ಏಕೆ ಬಯಸುತ್ತಿದೆ?

ಮೋದಿ ಹತ್ಯೆ ಸಂಚು, ಭೀಮಾ ಕೊರೆಂಗಾವ್ ಪ್ರಕರಣ, ಎಲ್ಗಾರ್ ಪರಿಷತ್ ಘೋಷಣೆ ಇತ್ಯಾದಿ ಪ್ರಕರಣಗಳಲ್ಲಿ ಭಾಗಿಯಾಗಿರುವ ಮಾವೋವಾದಿಗಳ ಕುರಿತಂತೆ ನಡೆದಿರುವ ತನಿಖೆಗೆ ಸಂಬಂಧಿಸಿದಂತೆ ಪುಣೆ ಪೊಲೀಸರು ತೀವ್ರ ತನಿಖೆ ನಡೆಸಿದ್ದಾರೆ.

ಮಧ್ಯಪ್ರದೇಶ ಚುನಾವಣೆ: ಕೂಸು ಹುಟ್ಟುವ ಮುನ್ನವೇ ಕುಲಾವಿ ಹೆಣೆದ ಕಾಂಗ್ರೆಸ್ಮಧ್ಯಪ್ರದೇಶ ಚುನಾವಣೆ: ಕೂಸು ಹುಟ್ಟುವ ಮುನ್ನವೇ ಕುಲಾವಿ ಹೆಣೆದ ಕಾಂಗ್ರೆಸ್

ಇತ್ತೀಚೆಗೆ ಜಪ್ತಿ ಮಾಡಲಾದ ಪತ್ರಗಳಲ್ಲಿ ಮಾವೋವಾದಿಗಳು 'ಗೆಳೆಯ' ಎಂದು ಸಂಬೋಧಿಸಿ ಫೋನ್ ನಂಬರ್ ನಮೂದಿಸಿದ್ದಾರೆ. ಆ ಫೋನ್ ನಂಬರ್ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಅದು ದಿಗ್ವಿಜಯ್ ಸಿಂಗ್ ಅವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಹೀಗಾಗಿ, ಈ ಬಗ್ಗೆ ಪ್ರಶ್ನಿಸಲು ಪುಣೆ ಪೊಲೀಸರು ಮುಂದಾಗಿದ್ದಾರೆ ಎಂದು ಡಿಸಿಪಿ ಸುಹಾಸ್ ಭಾವ್ಚೆ ಅವರ ಹೇಳಿಕೆಯನ್ನು ಉಲ್ಲೇಖಿಸಿ ಜೀ ನ್ಯೂಸ್ ವರದಿ ಮಾಡಿದೆ.

ನಾನು ಪ್ರಚಾರ ಮಾಡಿದರೆ ಮ.ಪ್ರ.ದಲ್ಲಿ ಕಾಂಗ್ರೆಸ್ ಸೋಲುತ್ತದೆ: ದಿಗ್ವಿಜಯ್ ಸಿಂಗ್ ನಾನು ಪ್ರಚಾರ ಮಾಡಿದರೆ ಮ.ಪ್ರ.ದಲ್ಲಿ ಕಾಂಗ್ರೆಸ್ ಸೋಲುತ್ತದೆ: ದಿಗ್ವಿಜಯ್ ಸಿಂಗ್

Pune police likely to question Digvijaya Singh in Maoist probe

'ಕಾಮ್ ಪ್ರಕಾಶ್' ಅವರು 'ಕಾಮ್ ಸುರೇಂದ್ರ' ಅವರಿಗೆ ಪತ್ರ ಬರೆದಿದ್ದು, ರಾಷ್ಟ್ರವ್ಯಾಪಿ ಪ್ರತಿಭಟನೆ ಬಗ್ಗೆ ಮಾತುಕತೆ ನಡೆದಿದೆ. ಈ ಪತ್ರವನ್ನು ಕೋರ್ಟಿಗೂ ಸಲ್ಲಿಸಲಾಗಿದೆ. ಮಾವೋವಾದಿಗಳ ಹಿತೈಷಿಗಳನ್ನು ಹುಡುಕಿ, ವಿಚಾರಣೆ ನಡೆಸಲಾಗುತ್ತಿದೆ. ವಿಚಾರವಾದಿ ವರವರರಾವ್ ಅವರನ್ನು ಬಂಧಿಸಿ, ವಿಚಾರಣೆ ನಡೆಸಿರುವುದನ್ನು ಇಲ್ಲಿ ಸ್ಮರಿಸಬಹುದು.

English summary
Senior Congress leader Digvijaya Singh could soon be questioned by Pune police officials in connection with a probe into activities of certain Maoists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X