ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್‌ ಬಗ್ಗೆ ಫೇಕ್ ಪ್ರಚಾರ ಮಾಡುತ್ತಿದ್ದ ವ್ಯಕ್ತಿ ಬಂಧನ

|
Google Oneindia Kannada News

ಪುಣೆ, ಮಾರ್ಚ್ 16: ಕೊರೊನಾ ವೈರಸ್ ಹೇಗೆ ಹರಡುತ್ತಿದೆ, ಅದನ್ನು ಹೇಗೆ ನಿಯಂತ್ರಿಸಬೇಕು ಎಂಬ ಮಾಹಿತಿಯನ್ನು ಸರ್ಕಾರದ ವತಿಯಿಂದ ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದೆ.

ಕೊರೊನಾ ಸೋಂಕಿನಿಂದ ತಪ್ಪಿಸಿಕೊಳ್ಳಲು ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಹಾಗಿದ್ದರೂ, ಕೆಲವರು ಕೊರೊನಾ ಬಗ್ಗೆ ತಪ್ಪು ಮಾಹಿತಿಗಳನ್ನು ಪ್ರಚಾರ ಮಾಡುತ್ತಿದ್ದಾರೆ.

ಮಹಾರಾಷ್ಟ್ರದಲ್ಲಿ ಮತ್ತೆ 5 ಕೊರೊನಾ ವೈರಸ್ ಪ್ರಕರಣಗಳು ಪತ್ತೆಮಹಾರಾಷ್ಟ್ರದಲ್ಲಿ ಮತ್ತೆ 5 ಕೊರೊನಾ ವೈರಸ್ ಪ್ರಕರಣಗಳು ಪತ್ತೆ

ತಪ್ಪಾದ ವಿಡಿಯೋ, ಫೋಟೋಗಳನ್ನು ಪ್ರಚಾರ ಮಾಡಿ ಜನರಲ್ಲಿ ಆತಂಕ ಮೂಡಿಸುತ್ತಿದ್ದಾರೆ. ಈ ವಿಡಿಯೋಗಳನ್ನು ನೋಡಿದ ಜನರು ಭಯಪಡುವಂತಾಗಿದೆ. ಇದರಿಂದ ನಗರಗಳಲ್ಲಿ ಭೀತಿ ಹೆಚ್ಚಾಗುತ್ತಿದೆ. ಹೀಗೆ, ತಪ್ಪಾದ ವಿಡಿಯೋ ಪ್ರಚಾರ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. ಮುಂದೆ ಓದಿ....

ಕೊರೊನಾ ಶಂಕಿತರ ಬಗ್ಗೆ ಮಾಹಿತಿ

ಕೊರೊನಾ ಶಂಕಿತರ ಬಗ್ಗೆ ಮಾಹಿತಿ

ಪುಣೆಯ ಪ್ರತಿ‍ಷ್ಠಿತ ಹೋಟೇಲ್‌ನಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿರುವ ವ್ಯಕ್ತಿಗಳು ಉಳಿದುಕೊಂಡಿದ್ದಾರೆ ಎಂಬ ಮಾಹಿತಿನ್ನು ಪುಣೆ ವಿಭಾಗದ ಆಯುಕ್ತರ ಮೊಬೈಲ್ ವಾಟ್ಸಾಪ್ ನಂಬರ್ ಗೆ ಕಳುಹಿಸಿದ್ದ. ಇದೇ ಮಾಹಿತಿಯನ್ನು ಬೇರೆ ಬೇರೆ ವ್ಯಕ್ತಿಗಳಿಗೂ ಕಳುಹಿಸಿದ್ದ. ಪದೇ ಪದೇ ಸಂದೇಶ ಬಂದಿದ್ದರಿಂದ ಗಂಭೀರವಾಗಿ ಪರಿಗಣಿಸಿದ ಆಯುಕ್ತರು, ಯಂತ್ರೋಪಕರಣಗಳೊಂದಿಗೆ ಆ ಹೋಟೆಲ್‌ಗೆ ಹೋಗಿ ಪರೀಕ್ಷಿಸಿದ್ದಾರೆ.

ಸುಳ್ಳು ಮಾಹಿತಿ ನೀಡಿದ ವ್ಯಕ್ತಿ

ಸುಳ್ಳು ಮಾಹಿತಿ ನೀಡಿದ ವ್ಯಕ್ತಿ

ಆ ಹೋಟೆಲ್‌ನಲ್ಲಿ ಯಾವುದೇ ಸೋಂಕಿತರು ಮತ್ತು ವಿದೇಶಿಗರು ಇರುವ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಹಾಗಾಗಿ, ಅದೊಂದು ಸುಳ್ಳು ಎಂದು ತಿಳಿದಿದೆ. ಬಳಿಕ ಆಯುಕ್ತ ಪುಣೆ ನಗರದ ದೀಪಕ್ ಮೈಶೇಕರ್ ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಈ ಕುರಿತು ದೂರು ಕೂಡ ದಾಖಲಿಸಿ, ಎಫ್ ಐ ಆರ್ ದಾಖಲಾಗಿದೆ. ಆಯುಕ್ತರ ದೂರಿನ ಅನ್ವಯ ಅಪರಿಚಿತ ವ್ಯಕ್ತಿಯ ಬಂಧನಕ್ಕೆ ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ.

ಕೊರೊನಾ ಸೋಂಕಿತರಿಗೆ Antidote, ಸುಳಿವು ಕೊಟ್ಟ ಪುಣೆ ವೈದ್ಯಕೊರೊನಾ ಸೋಂಕಿತರಿಗೆ Antidote, ಸುಳಿವು ಕೊಟ್ಟ ಪುಣೆ ವೈದ್ಯ

ವ್ಯಕ್ತಿ ಬಂಧನ

ವ್ಯಕ್ತಿ ಬಂಧನ

''ಶನಿವಾರ (ಮಾರ್ಚ್ 14) ರಾತ್ರಿ 9.39 ರಿಂದ 9.58ರ ಸಮಯದಲ್ಲಿ ಬಂದಿದೆ. ಭಾನುವಾರ ಸಂಜೆ ಈ ಕುರಿತು ದೂರು ದಾಖಲಾಗಿದೆ. ಆಯುಕ್ತರ ದೂರಿನ ಅನ್ವಯ ಐಪಿಸಿ ಸೆಕ್ಷನ್ 182, 290, 51 (b), 51 ಅಡಿಯಲ್ಲಿ ಕೇಸ್ ಸ್ವೀಕರಿಸಲಾಗಿದೆ'' ಎಂದು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಣೇಶ್ ಮನೆ ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಫೇಕ್ ವಿಡಿಯೋ ತಪ್ಪು ಸಂದೇಶ ರವಾನಿಸಿದ್ದ ವ್ಯಕ್ತಿಯ ಬಂಧನವಾಗಿದೆ ಎಂದು ತಿಳಿದುಬಂದಿದೆ.

ಮಹಾರಾಷ್ಟ್ರದಲ್ಲಿ ಕೊರೊನಾ ಕೇಸ್ ಹೆಚ್ಚಳ

ಮಹಾರಾಷ್ಟ್ರದಲ್ಲಿ ಕೊರೊನಾ ಕೇಸ್ ಹೆಚ್ಚಳ

ಭಾರತದಲ್ಲಿ 100ಕ್ಕೂ ಕೊರೊನಾ ಕೇಸ್ ಗಳು ದಾಖಲಾಗಿದ್ದು, ಮಹಾರಾಷ್ಟ್ರ ಒಂದರಲ್ಲಿಯೇ 38 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಮಹಾರಾಷ್ಟ್ರದ ಪುಣೆಯಲ್ಲಿ 16 ಪಾಸಿಟೀವ್ ಕೇಸ್ ಬೆಳಕಿಗೆ ಬಂದಿದೆ.

English summary
Maharashtra: Pune Police have arrested one person for spreading fake video message about Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X