ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಈ ಜಿಲ್ಲೆಯಲ್ಲಿ 2 ಲಕ್ಷ ಕೋವಿಡ್ ಸೋಂಕಿತರು!

|
Google Oneindia Kannada News

ಪುಣೆ, ಸೆಪ್ಟೆಂಬರ್ 09: ಭಾರತದಲ್ಲಿಯೇ ಅತಿ ಹೆಚ್ಚು ಕೋವಿಡ್ ಸೋಂಕಿತರು ಇರುವ ರಾಜ್ಯ ಮಹಾರಾಷ್ಟ್ರ. ರಾಜ್ಯದ ಜಿಲ್ಲೆಯೊಂದರಲ್ಲಿ 2 ಲಕ್ಷಕ್ಕೂ ಅಧಿಕ ಕೋವಿಡ್ ಸೋಂಕಿತರು ಇದ್ದಾರೆ. ಹೆಚ್ಚು ಸೋಂಕಿತರು ಇರುವ ದೇಶದ ಮೊದಲ ಜಿಲ್ಲೆ ಇದಾಗಿದೆ.

Recommended Video

ವಿಶ್ವದ ಅತಿ ದೊಡ್ಡ Covid Centre ಮುಚ್ಚಲು ಅಸಲಿ ಕಾರಣವೇನು | Oneindia Kannada

ಪುಣೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 2,07,435ಕ್ಕೆ ಏರಿಕೆಯಾಗಿದೆ. ಈ ಮೂಲಕ ದೇಶದಲ್ಲಿ 2 ಲಕ್ಷಕ್ಕೂ ಅಧಿಕ ಸೋಂಕಿತರು ಇರುವ ಮೊದಲ ಜಿಲ್ಲೆ ಪುಣೆಯಾಗಿದೆ.

ಪುಣೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 62,859. ಇದುವರೆಗೂ 1,40,038 ಜನರು ಜಿಲ್ಲೆಯಲ್ಲಿ ಗುಣಮುಖರಾಗಿದ್ದಾರೆ. 4,538 ಜನರು ಮೃತಪಟ್ಟಿದ್ದಾರೆ ಎಂದು ಮಹಾರಾಷ್ಟ್ರದ ಆರೋಗ್ಯ ಇಲಾಖೆ ಹೇಳಿದೆ.

ದೇಶದಲ್ಲಿಯೇ ಅತಿ ಹೆಚ್ಚು ಕೋವಿಡ್ ಸೋಂಕಿತರು ಇರುವ ರಾಜ್ಯ ಮಹಾರಾಷ್ಟ್ರ. ಒಟ್ಟು ಸೋಂಕಿತರ ಸಂಖ್ಯೆ 9,43,772. ಮುಂಬೈ ನಗರದಲ್ಲಿ 1,58,756 ಸೋಂಕಿತರು ಇದ್ದಾರೆ. ಮುಂಬೈಗಿಂತ ಹೆಚ್ಚು ಸೋಂಕಿತರು ಪುಣೆಯಲ್ಲಿದ್ದಾರೆ.

ದೇಶದ ಮೊದಲ ಜಿಲ್ಲೆ

ದೇಶದ ಮೊದಲ ಜಿಲ್ಲೆ

ಪುಣೆಯಲ್ಲಿ ಕೆಲವು ದಿನಗಳಿಂದ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಕೋವಿಡ್ ಪರೀಕ್ಷೆಗಳನ್ನು ಹೆಚ್ಚು ಮಾಡಲಾಗುತ್ತಿದೆ. ಆದ್ದರಿಂದ, ಹೆಚ್ಚಿನ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಭಾರತದಲ್ಲಿ 2 ಲಕ್ಷ ಕೋವಿಡ್ ಪ್ರಕರಣಗಳಿರುವ ಮೊದಲ ಜಿಲ್ಲೆ ಪುಣೆ.

ಒಂದೇ ತಿಂಗಳಿನಲ್ಲಿ 1 ಲಕ್ಷ ಹೆಚ್ಚಳ

ಒಂದೇ ತಿಂಗಳಿನಲ್ಲಿ 1 ಲಕ್ಷ ಹೆಚ್ಚಳ

ಪುಣೆ ಜಿಲ್ಲಾಧಿಕಾರಿ ರಾಜೇಶ್ ದೇಶ್‌ಮುಖ್ ಕೋವಿಡ್ ಪರಿಸ್ಥಿತಿ ಬಗ್ಗೆ ಮಾತನಾಡಿದ್ದಾರೆ. "ಆಗಸ್ಟ್5ರಂದು ಪುಣೆಯಲ್ಲಿ 1 ಲಕ್ಷ ಕೋವಿಡ್ ಪ್ರಕರಣಗಳಿದ್ದವು. ಒಂದೇ ತಿಂಗಳ ಅಂತರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಜಿಲ್ಲೆಯಲ್ಲಿನ ಪಾಸಿಟಿವ್ ಪ್ರಮಾಣ ಶೇ 22" ಎಂದು ಹೇಳಿದರು.

ಗುಣಮುಖ ಪ್ರಮಾಣ ಶೇ 78

ಗುಣಮುಖ ಪ್ರಮಾಣ ಶೇ 78

ಪುಣೆಯಲ್ಲಿ ಗುಣಮುಖರಾಗುವವರ ಪ್ರಮಾಣ ಶೇ 78ರಷ್ಟಿದೆ. ದೇಶದ ಯಾವುದೇ ಇತರೆ ಜಿಲ್ಲೆಯಲ್ಲಿಯೂ ಇಷ್ಟು ಪ್ರಮಾಣದ ಕೋವಿಡ್ ಪರೀಕ್ಷೆ ನಡೆದಿಲ್ಲ. ಪರೀಕ್ಷೆ ಸಂಖ್ಯೆ ಹೆಚ್ಚಳ ಮಾಡಿ ಸೋಂಕಿತರ ಸಂಪರ್ಕದಲ್ಲಿರುವವರನ್ನು ಪತ್ತೆ ಹಚ್ಚಲಾಗುತ್ತಿದೆ. ಆದ್ದರಿಂದ, ಸಂಖ್ಯೆ ಹೆಚ್ಚಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಳ್ಳಿಗಳಲ್ಲಿ ಪರೀಕ್ಷೆ ಕ್ಯಾಂಪ್

ಹಳ್ಳಿಗಳಲ್ಲಿ ಪರೀಕ್ಷೆ ಕ್ಯಾಂಪ್

ಪುಣೆಯಲ್ಲಿ ಹಳ್ಳಿಹಳ್ಳಿಗಳಲ್ಲಿ ಕೋವಿಡ್ ಪರೀಕ್ಷೆ ಕ್ಯಾಂಪ್ ಮಾಡಲಾಗುತ್ತಿದೆ. 15ಕ್ಕೂ ಹೆಚ್ಚು ಕೋವಿಡ್ ಪ್ರಕರಣ ದಾಖಲಾಗಿರುವ ಹಳ್ಳಿಗಳಲ್ಲಿ ರ‍್ಯಾಪಿಡ್ ಆಂಟಿಜನ್‌ ಟೆಸ್ಟ್‌ಗಳನ್ನು ಮಾಡಲಾಗುತ್ತಿದೆ.

English summary
Maharashtra's Pune is the first district of India which crossed 2 lakh COVID cases. Total number of COVID 19 cases in district 2,07,435.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X