ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರೆಂಡ್ ಸೆಟ್ಟರ್ : ಪುಣೆಯ ಚಹಾವಾಲ ನವನಾಥ್ ಯವ್ಲೆ

By Mahesh
|
Google Oneindia Kannada News

ಪುಣೆ, ಮಾರ್ಚ್ 04: ಇಲ್ಲಿನ ಟೀ ಮಾರಾಟಗಾರ ನವನಾಥ್ ಯವ್ಲೆ ಹೊಸ ಟ್ರೆಂಡ್ ಸೆಟ್ಟರ್ ಆಗಿ ಹೊರ ಹೊಮ್ಮಿದ್ದಾರೆ. ಯವ್ಲೆ ಟೀ ಹೌಸ್ ಸಹ ಸ್ಥಾಪಕರಾದ ನವನಾಥ್ ಅವರು ಟೀ ಮಾರಾಟದಿಂದ ತಿಂಗಳಿಗೆ 12 ಲಕ್ಷ ರುಪಾಯಿ ದುಡಿಯುತ್ತಿದ್ದಾರೆ.

ಪುಣೆಯ ಮೂರು ಸ್ಥಳಗಳಲ್ಲಿ ಈ ಟೀ ಹೌಸ್ ಸದ್ಯಕ್ಕೆ ಕಾರ್ಯ ನಿರ್ವಹಿಸುತ್ತಿದ್ದು, ದಿನದಿಂದ ದಿನಕ್ಕೆ ಜನಪ್ರಿಯತೆ ಗಳಿಸುತ್ತಿದೆ. ಪ್ರತಿ ಟೀ ಹೌಸ್ ನಲ್ಲೂ 10 ರಿಂದ 12 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಯವ್ಲೆ ಟೀಯನ್ನು ಅಂತಾರಾಷ್ಟ್ರೀಯ ಮಟ್ಟದ ಬ್ರ್ಯಾಂಡ್ ಆಗಿ ರೂಪಿಸುವುದು ನನ್ನ ಗುರಿ ಎಂದು ನವನಾಥ್ ಹೇಳಿದ್ದಾರೆ.

Pune chaiwala Navnath Yewle makes Rs 12 lakh a month

ಟೀ ಉದ್ಯಮಕ್ಕೆ ಬೆಲೆ ಇದೆ: 'ಪಕೋಡಾ ಮಾರಾಟದ ಬಗ್ಗೆ ನನಗೆ ಗೊತ್ತಿಲ್ಲ, ಚಹಾ ಮಾರಾಟದಿಂದ ಉದ್ಯೋಗ ಸೃಷ್ಟಿ ಸಾಧ್ಯತೆಯಿದೆ. 2011ರಲ್ಲಿ ಚಹಾ ಅಂಗಡಿ ತೆರೆಯುವ ಆಲೋಚನೆ ಬಂದಿತು. ಪುಣೆಯಲ್ಲಿ ಜೋಶಿ ವಡೇವಾಲೆ, ರೋಹಿತ್ ವಡೇವಾಲೆ ಜನಪ್ರಿಯತೆ ಗಳಿಸಿವೆ. ಆದರೆ, ಚಹಾ ಹೌಸ್ ಕೊರತೆ ಇತ್ತು.

ಚಹಾ ತಯಾರಿಕೆ ಬಗ್ಗೆ ನಾಲ್ಕು ವರ್ಷಗಳ ಕಾಲ ಸಂಶೋಧನೆ ಮಾಡಿ, ಗ್ರಾಹಕರಿಗೆ ಯಾವ ಗುಣಮಟ್ಟದ ಸ್ವಾದಿಷ್ಟ ಚಹಾ ನೀಡಬೇಕು ಎಂಬುದನ್ನು ಅರಿತು ವ್ಯಾಪಾರ ಆರಂಭಿಸಿದೆವು. ಈಗ ಅದರ ಫಲ ಸಿಕ್ಕಿದೆ' ಎಂದು ನವನಾಥ್ ಹೇಳಿದರು.

ದಿನವೊಂದಕ್ಕೆ 3,000 ದಿಂದ 4,000 ಕಪ್ ಚಹಾ ಮಾರಾಟ ಮಾಡುವ ಯವ್ಲೆ ಟೀ ಹೌಸ್ ಔಟ್ ಲೆಟ್ ಗಳ ಸಂಖ್ಯೆಯನ್ನು ನೂರಕ್ಕೆ ಏರಿಸುವ ಗುರಿಯನ್ನು ನವನಾಥ್ ಹೊಂದಿದ್ದಾರೆ.

English summary
Pune chaiwala Navnath Yewle makes Rs 12 lakh a month which is more than an average person's salary in India. Yewle Tea House has become famous and has three centers in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X