ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಣೆ ವಿಮಾನ ನಿಲ್ದಾಣ 14 ದಿನಗಳ ಕಾಲ ಬಂದ್

|
Google Oneindia Kannada News

ಪುಣೆ, ಅಕ್ಟೋಬರ್ 06; ಪುಣೆ ವಿಮಾನ ನಿಲ್ದಾಣ 14 ದಿನಗಳ ಕಾಲ ಬಂದ್ ಆಗಲಿದೆ. ಅಕ್ಟೋಬರ್ 16ರಿಂದ ಎಲ್ಲಾ ವಿಮಾನಗಳ ಸಂಚಾರವನ್ನು ಬಂದ್ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಎಲ್ಲಾ ವಾಣಿಜ್ಯ ವಿಮಾನಗಳ ಸಂಚಾರವನ್ನು ಅಕ್ಟೋಬರ್ 16 ರಿಂದ 29ರ ತನಕ ಬಂದ್ ಮಾಡಲಾಗುತ್ತದೆ ಎಂದು ಮಾಹಿತಿ ನೀಡಲಾಗಿದೆ. ರನ್‌ ವೇ ಕೆಲಸಗಳ ಹಿನ್ನಲೆಯಲ್ಲಿ ವಿಮಾನ ಹಾರಾಟ ಬಂದ್ ಮಾಡಲಾಗುತ್ತಿದೆ.

ಮಂಗಳೂರು; ಟೇಕಾಫ್ ಆಗದ ವಿಮಾನ, ಪ್ರಯಾಣಿಕರ ಪರದಾಟ! ಮಂಗಳೂರು; ಟೇಕಾಫ್ ಆಗದ ವಿಮಾನ, ಪ್ರಯಾಣಿಕರ ಪರದಾಟ!

ಭಾರತೀಯ ವಾಯುಪಡೆ ರನ್ ವೇ ಕಾಮಗಾರಿಯನ್ನು ಕೈಗೊಳ್ಳಲಿದೆ. ವಾಯುಪಡೆಯ ಸೂಚನೆ ಹಿನ್ನಲೆಯಲ್ಲಿ ವಿಮಾನ ಹಾರಾಟವನ್ನು ಬಂದ್ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.

ಕಾಬೂಲ್‌ನಿಂದ ವಿಮಾನ ಸಂಚಾರಕ್ಕೆ ಅನುಮತಿ ನೀಡಲಿದೆ ಭಾರತ ಕಾಬೂಲ್‌ನಿಂದ ವಿಮಾನ ಸಂಚಾರಕ್ಕೆ ಅನುಮತಿ ನೀಡಲಿದೆ ಭಾರತ

Pune Airport Will Remain Closed For 14 Days From October 16

ಪುಣೆಯ ಲೋಹೆಗಾನ್ ವಾಯುನೆಲೆಗೆ ಸಹ ವಿಮಾನ ನಿಲ್ದಾಣ ಸೇರಿದೆ. ಆದ್ದರಿಂದ ರನ್ ವೇ ಕಾಮಗಾರಿಯನ್ನು ವಾಯುಪಡೆಯೇ ನೋಡಿಕೊಳ್ಳಲಿದೆ. ಏಪ್ರಿಲ್‌ನಲ್ಲಿಯೇ ಕಾಮಗಾರಿ ಕೈಗೊಳ್ಳಬೇಕಿತ್ತು. ಆದರೆ ಅದನ್ನು ಮುಂದೂಡಲಾಗಿತ್ತು.

ಭಾರತೀಯ ವಾಯುಪಡೆ ಈ ಕುರಿತು ಮಾಹಿತಿ ನೀಡಿದೆ. ರನ್ ವೇ ಕಾಮಗಾರಿಯನ್ನು ಕೈಗೊಳ್ಳಲಿದ್ದೇವೆ. ಈ ಕುರಿತು ವಿಮಾನ ನಿಲ್ದಾಣಕ್ಕೆ ಮಾಹಿತಿ ನೀಡಲಾಗಿದೆ. ಅದರ ಅನ್ವಯ ವಿಮಾನಗಳ ಸಂಚಾರ ರದ್ದುಗೊಳಿಸಲಾಗಿದೆ ಎಂದು ಹೇಳಿದೆ.

ಉಡಾನ್‌ಗೆ ಶಿವಮೊಗ್ಗ ವಿಮಾನ ನಿಲ್ದಾಣ; ಎಲ್ಲೆಲ್ಲಿಗೆ ವಿಮಾನ ಹಾರಾಟ? ಉಡಾನ್‌ಗೆ ಶಿವಮೊಗ್ಗ ವಿಮಾನ ನಿಲ್ದಾಣ; ಎಲ್ಲೆಲ್ಲಿಗೆ ವಿಮಾನ ಹಾರಾಟ?

ವಾಯುಪಡೆಗೆ ವಿಮಾನ ನಿಲ್ದಾಣ ಸೇರಿದ್ದರೂ ವಾಣಿಜ್ಯ ವಿಮಾನಗಳ ಸಂಚಾರಕ್ಕೆ ಅವಕಾಶವಿದೆ. ಅಕ್ಟೋಬರ್ 4ರಂದು 52 ವಿಮಾನಗಳು ಹಾರಾಟ ನಡೆಸಿದ್ದು, 6068 ಜನರು ಆಗಮಿಸಿದ್ದರು, 6,136 ಜನರು ವಿಮಾನ ನಿಲ್ದಾಣದಿಂದ ಪ್ರಯಾಣ ಆರಂಭಿಸಿದ್ದರು.

ಟರ್ಮಿನಲ್ 1 ಆರಂಭ; ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಇದರಿಂದಾಗಿ ಹೆಚ್ಚು ಜನರು ಸಂಚಾರ ನಡೆಸುತ್ತಿದ್ದಾರೆ. ಮುಂಬೈನ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1 ಕಾರ್ಯಾರಂಭ ಮಾಡಲು ತೀರ್ಮಾನ ಮಾಡಲಾಗಿದೆ.

ಟರ್ಮಿನಲ್ 1ರಿಂದ ಪ್ರತಿದಿನ ಸುಮಾರು 156 ವಿಮಾನಗಳು ಹಾರಾಟ ನಡೆಸುತ್ತಿದ್ದವು. ಕೋವಿಡ್ ಪರಿಸ್ಥಿತಿಯ ಕಾರಣ 2021ರ ಮಾರ್ಚ್‌ನಲ್ಲಿ ಟರ್ಮಿನಲ್ ಮುಚ್ಚಲಾಗಿತ್ತು. ಅಕ್ಟೋಬರ್ 20ರಿಂದ ಗೋ ಫಸ್ಟ್, ಸ್ಟಾರ್ ಏರ್, ಏರ್ ಏಷ್ಯಾ, ಟ್ರೂ ಜೆಟ್ ಈ ಟರ್ಮಿನಲ್‌ನಿಂದ ಕಾರ್ಯಾರಂಭ ಮಾಡಲಿವೆ.

ಟರ್ಮಿನಲ್ 1ರಿಂದ ವಿಮಾನ ಹಾರಾಟ ಆರಂಭ ಮಾಡುವುದರಿಂದ ವಿಮಾನ ನಿಲ್ದಾಣದಲ್ಲಿ ಸಾಮಾಜಿಕ ಅಂತರ ಕಾಪಾಡಲು ಅನುಕೂಲವಾಗಲಿದೆ. ಇಂಡಿಗೋ ಅಕ್ಟೋಬರ್ 31ರಿಂದ ಟರ್ಮಿನಲ್ 1ರಿಂದ ಕಾರ್ಯಾಚರಂಭ ಮಾಡಲಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.

English summary
Pune airport will remain closed for 14 days from October 16. Indian Air Force will be undertaking runway resurfacing work. Aerodrome is part of the IAF's airbase at Lohegaon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X