ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

14 ದಿನ ಪುಣೆ ಏರ್ ಪೋರ್ಟ್ ಬಂದ್: ವಿಮಾನಗಳ ಸಂಚಾರ ಸ್ಥಗಿತ

|
Google Oneindia Kannada News

ಪುಣೆ, ಫೆಬ್ರವರಿ.01: ಮಹಾರಾಷ್ಟ್ರದ ಪುಣೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏಪ್ರಿಲ್.26 ರಿಂದ ಮೇ.9ರವರಗೆ ಯಾವುದೇ ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳ ಹಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ವಾಯುಸೇನಾ ಪಡೆ ನೀಡಿರುವ ಮಾಹಿತಿ ಪ್ರಕಾರ, ಏಪ್ರಿಲ್ ತಿಂಗಳಾಂತ್ಯದಲ್ಲಿ ರನ್ ವೇ ಪುನರುಜ್ಜೀವನಗೊಳಿಸುವ ಕಾರ್ಯಾಚರಣೆ ನಡೆಸಲಾಗುತ್ತದೆ. ಈ ಹಿನ್ನೆಲೆ 14 ದಿನಗಳವರೆಗೂ ವಿಮಾನ ಹಾರಾಟವನ್ನು ರದ್ದುಗೊಳಿಸಲಾಗುತ್ತಿದೆ.

ಫೆ.28ರವರೆಗೂ ಅಂತಾರಾಷ್ಟ್ರೀಯ ಪ್ರಯಾಣಿಕರ ವಿಮಾನ ಸಂಚಾರಕ್ಕೆ ನಿರ್ಬಂಧಫೆ.28ರವರೆಗೂ ಅಂತಾರಾಷ್ಟ್ರೀಯ ಪ್ರಯಾಣಿಕರ ವಿಮಾನ ಸಂಚಾರಕ್ಕೆ ನಿರ್ಬಂಧ

ಕೇಂದ್ರ ವಾಯುಪಡೆ ಅಧಿಕಾರಿಗಳ ಜೊತೆಗಿನ ಚರ್ಚೆ ಬಳಿಕ 14 ದಿನಗಳ ವರೆಗೂ ಪುಣೆ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟವನ್ನು ನಿರ್ಬಂಧಿಸುವ ಬಗ್ಗೆ ನಿರ್ಧರಿಸಲಾಗಿದೆ ಎಂದು ಪುಣೆ ವಿಮಾನ ನಿಲ್ದಾಣದ ನಿರ್ದೇಶಕ ಕುಲ್ದೀಪ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

Pune Airport To Shut For 14 Days: Check Reason And Dates Here

ರಾತ್ರಿ ವೇಳೆಯಲ್ಲಿ ರನ್ ವೇ ಕಾರ್ಯಾಚರಣೆ:

ಪುಣೆ ವಿಮಾನ ನಿಲ್ದಾಣದಿಂದ ಹಗಲು ವೇಳೆಯಲ್ಲಿ ಮಾತ್ರ ವಿಮಾನಗಳ ಸಂಚಾರ ನಡೆಯುತ್ತಿದೆ. ರಾತ್ರಿ 8 ಗಂಟೆಯಿಂದ ಬೆಳಗ್ಗೆ 8 ಗಂಟೆವರೆಗೂ ರನ್ ವೇ ಪುನರುಜ್ಜೀವನಗೊಳಿಸುವ ಕಾರ್ಯಾಚರಣೆ ನಡೆಸಲಾಗುತ್ತಿದೆ. ರಾತ್ರಿ ಸಂದರ್ಭದಲ್ಲಿ ಪುಣೆಗೆ ಆಗಮಿಸುವ ಮತ್ತು ಪುಣೆ ಏರ್ ಪೋರ್ಟ್ ನಿಂದ ಹೊರಡುವ ವಿಮಾನಗಳ ಸಮಯವನ್ನು ಬದಲಾವಣೆ ಮಾಡಲಾಗಿದೆ. 10 ವಿಮಾನಗಳ ಸಂಚಾರವನ್ನು ರಾತ್ರಿ ಬದಲಿಗೆ ಹಗಲು ವೇಳೆಯಲ್ಲಿ ನಿಗದಿಪಡಿಸಲಾಗಿದೆ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.

ಪುಣೆ ವಿಮಾನ ನಿಲ್ದಾಣದಲ್ಲಿ ಪ್ರತಿನಿತ್ಯ ಸರಿ ಸುಮಾರು 10,000 ಪ್ರಯಾಣಿಕರು ಸಂಚರಿಸುತ್ತಾರೆ. ಭಾರತ ಲಾಕ್ ಡೌನ್ ಗಿಂತ ಮೊದಲು ಕೇವಲ ಒಂದು ರನ್ ಇದ್ದು 170 ವಿಮಾನಗಳು ಈ ಏರ್ ಪೋರ್ಟ್ ನಿಂದ ಸಂಚರಿಸುತ್ತಿದ್ದವು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

English summary
Pune Airport To Shut For 14 Days: Check Reason And Dates Here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X