ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಹೆಸರಲ್ಲಿ ದೇವಾಲಯ: ಹಲವರ ಆಕ್ಷೇಪದ ಬಳಿಕ ಮೋದಿ ಪ್ರತಿಮೆ ಕಣ್ಮರೆ

|
Google Oneindia Kannada News

ಪುಣೆ, ಆ. 19: ಮಹಾರಾಷ್ಟ್ರದ ಪುಣೆಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತಿಮೆಯನ್ನು ದೇವಾಲಯದಲ್ಲಿ ಇರಿಸಿದ್ದಾರೆ. ಆದರೆ ಪ್ರಧಾನ ಮಂತ್ರಿ ಕಚೇರಿಯಿಂದ ಇದಕ್ಕೆ ವಿರೋಧ ವ್ಯಕ್ತವಾಗುತ್ತಿದ್ದಂತೆ ರಾತ್ರೋ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಪ್ರತಿಮೆಯನ್ನು ದೇವಾಲಯದಿಂದ ತೆರವುಗೊಳಿಸಲಾಗಿದೆ.

ಭಾರತ ದೇಶವು ನಂಬಿಕೆಗಳ ತವರೂರು. ಹಲವಾರು ದೇವರುಗಳನ್ನು ನಂಬುವ ಈ ದೇಶದಲ್ಲಿ ಜನರು ತಮ್ಮ ನೆಚ್ಚಿನ ನಟರು, ರಾಜಕಾರಣಿಗಳ ಪ್ರತಿಮೆಗೆ ಪೂಜೆ ಸಲ್ಲಿಸುವುದನ್ನು ನೋಡಿದ್ದೇವೆ. ಹಾಗೆಯೇ ಅವರ ಹೆಸರಿನಲ್ಲಿ ದೇವಾಲಯ ನಿರ್ಮಾಣ ಮಾಡುವುದನ್ನು ನಾವು ನೋಡಿದ್ದೇವೆ. ಈ ನಡುವೆ ಬಿಜೆಪಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿಯ ಪ್ರತಿಮೆಯನ್ನು ಹೊಂದಿರುವ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ.

'ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸುವತ್ತ ನಮ್ಮ ಚಿತ್ತ': ಕೆಂಪು ಕೋಟೆಯಲ್ಲಿ ಪ್ರಧಾನಿ'ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸುವತ್ತ ನಮ್ಮ ಚಿತ್ತ': ಕೆಂಪು ಕೋಟೆಯಲ್ಲಿ ಪ್ರಧಾನಿ

ವರದಿಗಳ ಪ್ರಕಾರ 37 ವರ್ಷದ ಬಿಜೆಪಿ ಕಾರ್ಯಕರ್ತ, ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಬೆಂಬಲಿಗ ಮಯೂರ್‌ ಮುಂಡೆ ಈ ಪ್ರಧಾನಿ ನರೇಂದ್ರ ಮೋದಿಯ ದೇವಾಲಯವನ್ನು ಸುಮಾರು 1,60,000 ರೂಪಾಯಿ ವೆಚ್ಚದಲ್ಲಿ ನಿರ್ಮಾರ್ಣ ಮಾಡಿದ್ದಾನೆ ಎಂದು ವರದಿಯಾಗಿದೆ. ಈ ದೇವಾಲಯ ಹಾಗೂ ಪ್ರಧಾನಿ ಮೋದಿ ಪ್ರತಿಮೆ ನಿರ್ಮಾಣಕ್ಕೆ ಜೈಪುರದಿಂದ ತಂದ ಅಮೃತ ಶಿಲೆಯನ್ನು ಬಳಸಲಾಗಿದೆ ಎಂದು ಹೇಳಲಾಗಿದೆ.

 ರಾಮ ಮಂದಿರ ನಿರ್ಮಿಸಿದ ಮೋದಿಗೆ ಮಂದಿರ!

ರಾಮ ಮಂದಿರ ನಿರ್ಮಿಸಿದ ಮೋದಿಗೆ ಮಂದಿರ!

ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ರಿಯಲ್‌ ಎಸ್ಟೇಟ್‌ ಉದ್ಯಮಿಯೂ ಆಗಿರುವ ಮಯೂರ್‌ ಮುಂಡೆ, "ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಿದ ವ್ಯಕ್ತಿಗಾಗಿ ಒಂದು ದೇವಾಲಯ ಇರಬೇಕು ಎಂದು ನನಗೆ ಅನಿಸಿತು. ಆದ್ದರಿಂದ ನಾನು ನನ್ನ ಜಾಗದಲ್ಲಿ ಪ್ರಧಾನಿ ನರೇಂದ್ರ ಮೋದಿಯ ದೇವಾಲಯ ನಿರ್ಮಾಣ ಮಾಡಲು ನಿರ್ಧರಿಸಿದೆ," ಎಂದು ತಿಳಿಸಿದ್ದಾರೆ.

'ಜಾಗೃತಿ ಸಂದೇಶ': ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಸಮರ್ಥಿಸಿಕೊಂಡ ಕೇಂದ್ರ'ಜಾಗೃತಿ ಸಂದೇಶ': ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಸಮರ್ಥಿಸಿಕೊಂಡ ಕೇಂದ್ರ

ಸ್ಥಳೀಯ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಸಂದರ್ಭದಲ್ಲಿ ಮಯೂರ್‌ ಮುಂಡೆ, ''ತ್ರಿವಳಿ ತಲಾಖ್‌ ನಿಷೇಧ, ಜಮ್ಮು ಕಾಶ್ಮೀರ ವಿಚಾರ 370 ವಿಧಿ ರದ್ದತಿ ಸೇರಿದಂತೆ ಹಲವಾರು ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯ ನಿರ್ಧಾರಗಳನ್ನು ನಾನು ಮೆಚ್ಚಿ ಈ ದೇವಾಲಯವನ್ನು ನಿರ್ಮಾಣ ಮಾಡಿದ್ದೇನೆ," ಎಂದು ಕೂಡಾ ಹೇಳಿದ್ದಾರೆ. ಹಾಗೆಯೇ ಈ ಪ್ರಧಾನಿ ನರೇಂದ್ರ ಮೋದಿ ಪ್ರತಿಮೆಯ ಸಮೀಪದಲ್ಲೇ ಅವರಿಗಾಗಿ ಅರ್ಪಿಸಲಾದ ಕವಿತೆ ಕೂಡಾ ಕೆತ್ತಿಸಲಾಗಿದೆ ಎಂದಿದ್ದಾರೆ.

 ದೇವಾಲಯದಲ್ಲಿನ ಪ್ರಧಾನಿ ಪ್ರತಿಮೆ ಹೇಗಿತ್ತು?

ದೇವಾಲಯದಲ್ಲಿನ ಪ್ರಧಾನಿ ಪ್ರತಿಮೆ ಹೇಗಿತ್ತು?

ರಿಯಲ್‌ ಎಸ್ಟೇಟ್‌ ಉದ್ಯಮಿಯೂ ಆಗಿರುವ ಬಿಜೆಪಿ ಕಾರ್ಯಕರ್ತ ಮಯೂರ್‌ ಮುಂಡೆ, ನಿರ್ಮಿಸಿದ ಪ್ರಧಾನಿ ನರೇಂದ್ರ ಮೋದಿಯ ದೇವಾಲಯವು ಮಹಾರಾಷ್ಟ್ರದ ಪುಣೆಯ ಔಂದ್‌ ಪ್ರದೇಶದ ರಸ್ತೆ ಬದಿಯಲ್ಲಿದೆ. ಈಗಾಗಲೇ ಮಯೂರ್‌ ಮುಂಡೆ ಈ ಪ್ರತಿಮೆಯು ತನಗೆ ಸೇರಿದ ಜಾಗದಲ್ಲಿ ನಿರ್ಮಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಪ್ರತಿಮೆಯನ್ನು ಜೈಪುರದಿಂದ ತರಿಸಲಾದ ಅಮೃತ ಶಿಲೆಯಿಂದ ಮಾಡಲಾಗಿದೆ. ಹಾಗೆಯೇ ಈ ಪ್ರಧಾನಿ ನರೇಂದ್ರ ಮೋದಿ ಪ್ರತಿಮೆಯು 6 ಅಡಿ x 2.5 ಅಡಿ x 7.5 ಅಡಿ ಇದೆ ಎಂದು ಹೇಳಲಾಗಿದೆ. ಈ ದೇವಾಲಯ ನಿರ್ಮಾಣಕ್ಕೆ ಸುಮಾರು ಆರು ತಿಂಗಳು ತಗುಲಿದೆ ಎಂದು ಹೇಳಲಾಗಿದೆ.

 ಎನ್‌ಸಿಪಿ, ಪ್ರಧಾನಿ ಕಚೇರಿಯಿಂದ ಪ್ರತಿಮೆ ಸ್ಥಾಪನೆಗೆ ಆಕ್ಷೇಪ

ಎನ್‌ಸಿಪಿ, ಪ್ರಧಾನಿ ಕಚೇರಿಯಿಂದ ಪ್ರತಿಮೆ ಸ್ಥಾಪನೆಗೆ ಆಕ್ಷೇಪ

ಈ ನಡುವೆ ಪ್ರಧಾನಿ ನರೇಂದ್ರ ಮೋದಿಯ ದೇವಾಲಯ ನಿರ್ಮಾಣ ಹಾಗೂ ಪ್ರತಿಮೆ ಸ್ಥಾಪನೆಗೆ ವಿರೋಧ ಪಕ್ಷ ಎನ್‌ಸಿಪಿ ಸೇರಿದಂತೆ ಪ್ರಧಾನಿ ಕಚೇರಿಯೂ ವಿರೋಧ ವ್ಯಕ್ತಪಡಿಸಿತ್ತು. ಈ ಬಗ್ಗೆ ಮಾತನಾಡಿದ್ದ ಎನ್‌ಸಿಪಿ ನಾಯಕ ಆನಂದ ಗದ್ಗಿಲ್‌, "ಧರ್ಮಾಂಧತೆಯ ಅತೀರೇಕ ಅಂದರೆ ಇದು. ಸರ್ಕಾರದ ಯೋಜನೆಗಳಲ್ಲಿನ ಮಾಜಿ ಪ್ರಧಾನಿಗಳ ಹೆಸರುಗಳನ್ನು ಮೋದಿ ಸರ್ಕಾರವು ತೆಗೆಯುತ್ತಿದೆ. ಇನ್ನೊಂದೆಡೆ ಬಿಜೆಪಿ ಪಕ್ಷದ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ದೇವಾಲಯ ನಿರ್ಮಾಣ ಮಾಡುತ್ತಿದ್ದಾರೆ," ಎಂದು ಹೇಳಿದ್ದಾರೆ. ಇನ್ನು ಎನ್‌ಸಿಪಿ ನಗರ ಅಧ್ಯಕ್ಷ ಪ್ರಶಾಂತ್‌ ಜಗ್‌ದೀಪ್‌ ಮಾತನಾಡಿ, "ಹಾಗೇ ದೇವಾಲಯ ನಿರ್ಮಾಣ ಮಾಡುವುದ ಯಾವುದೇ ನಾಯಕನಿಗೆ ನಿಷ್ಠೆ ಎಂದು ಆಗಿರಬಹುದು. ಆದರೆ ಪುಣೆಯಂತಹ ನಗರದಲ್ಲಿ ಇಂತಹ ಕೃತ್ಯಗಳನ್ನು ಸಹಿಸಲಾಗದು," ಎಂದು ಹೇಳಿದ್ದಾರೆ. ಹಾಗೆಯೇ ಪ್ರಧಾನ ಮಂತ್ರಿ ಕಚೇರಿಯೂ ಹೀಗೆ ದೇವಾಲಯ ನಿರ್ಮಾಣ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಈ ಬೆನ್ನಲ್ಲೇ ಈ ದೇವಾಲಯದಿಂದ ಪ್ರಧಾನಿ ನರೇಂದ್ರ ಮೋದಿಯ ಪ್ರತಿಮೆಯನ್ನು ತೆರವು ಮಾಡಲಾಗಿದೆ ಎಂದು ವರದಿ ತಿಳಿಸಿದೆ.

ಅಪಘಾತದಲ್ಲಿ ಮೃತಪಟ್ಟ ಗಂಡನ ನೆನಪಿಗಾಗಿ ದೇವಾಲಯ ಕಟ್ಟಿದ ಪತ್ನಿಅಪಘಾತದಲ್ಲಿ ಮೃತಪಟ್ಟ ಗಂಡನ ನೆನಪಿಗಾಗಿ ದೇವಾಲಯ ಕಟ್ಟಿದ ಪತ್ನಿ

 ಪ್ರಧಾನಿ ಪ್ರತಿಮೆಗೆ ಕೈ ಮುಗಿದು ಹೋಗುತ್ತಿದ್ದ ಜನರು!

ಪ್ರಧಾನಿ ಪ್ರತಿಮೆಗೆ ಕೈ ಮುಗಿದು ಹೋಗುತ್ತಿದ್ದ ಜನರು!

ಇನ್ನು ಆ ದಾರಿಯಲ್ಲಿ ಹೋಗುತ್ತಿದ್ದ ಜನರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತಿಮೆಗೆ ಕೈ ಮುಗಿದು ಹೋಗುತ್ತಿದ್ದರು ಎಂದು ಹೇಳಲಾಗಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಪತ್ರಕರ್ತ ಅಲಿ ಶೇಖ್‌, "ಮಯೂರ್‌ ಮುಂಡೆ ಸುಮಾರು 1.5 ಲಕ್ಷ ರೂಪಾಯಿ ಖರ್ಚು ಮಾಡಿ ಪ್ರಧಾನಿ ನರೇಂದ್ರ ಮೋದಿಯ ದೇವಾಲಯವನ್ನು ನಿರ್ಮಾಣ ಮಾಡಿದ್ದಾರೆ. ಈ ದೇವಾಲಯ ನಿರ್ಮಾಣಕ್ಕೆ ಸುಮಾರು ಆರು ತಿಂಗಳುಗಳು ತಗುಲಿದೆ. ಮಯೂರ್‌ ಮುಂಡೆ ಈ ದೇವಾಲಯವನ್ನು ಸ್ವಾತಂತ್ಯ್ರ ದಿನದಂದು ಉದ್ಘಾಟನೆ ಮಾಡಿದ್ದಾರೆ. ಈಗ ಸಮೀಪದ ಜನರು ಈ ದೇವಾಲಯಕ್ಕೆ ಬಂದು ಪ್ರಧಾನಿ ನರೇಂದ್ರ ಮೋದಿಯ ಪ್ರತಿಮೆಗೆ ಕೈ ಮುಗಿದು ಹೋಗುತ್ತಿದ್ದಾರೆ," ಎಂದು ತಿಳಿಸಿದ್ದಾರೆ.

(ಒನ್‌ ಇಂಡಿಯಾ)

English summary
Prime Minister Narendra Modi's Statue in Pune 'Temple' Disappears Overnight Amid Objections by Prime Minister Office, NCP Dig.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X