ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊನೆಗೂ ಸಾಕುನಾಯಿ ಪತ್ತೆ! ಸಂಬಂಧವಿಲ್ಲ ಎಂದ ಜೊಮ್ಯಾಟೋ

|
Google Oneindia Kannada News

ಪುಣೆ, ಅಕ್ಟೋಬರ್ 11: ಪುಣೆಯಲ್ಲಿ ಜೊಮ್ಯಾಟೊದಿಂದ ಫುಡ್ ಡೆಲಿವರಿ ಮಾಡಲು ಬಂದ ವ್ಯಕ್ತಿಯೊಬ್ಬ ಸಾಕುನಾಯಿಯನ್ನು ಅಪಹರಿಸಿದ್ದಾನೆ ಎಂಬ ವರದಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಫುಡ್ ಡೆಲಿವರಿ app ಜೊಮ್ಯಾಟೊ ಈ ಸುದ್ದಿಯನ್ನು ತಳ್ಳಿಹಾಕಿದೆ.

ಈಗಾಗಲೇ ಸಾಕುನಾಯಿ 'ಡೊಟ್ಟು'ವನ್ನು ಅದರ ಮಾಲೀಕರಿಗೆ ಹಿಂದಿರುಗಿಸಲಾಗಿದ್ದು, ಈ ಘಟನೆಯಲ್ಲಿ ತನ್ನ ಯಾವುದೇ ಸಿಬ್ಬಂದಿಯ ಪಾತ್ರವಿಲ್ಲ ಎಂದು ಜೊಮ್ಯಾಟೋ ಹೇಳಿದೆ. ನಾಪತ್ತೆಯಾಗಿದ್ದ 52 ಗಂಟೆಗಳ ನಂತರ ಕೊನೆಗೂ ನಾಯಿ ತನ್ನ ಮಾಲೀಕರನ್ನು ಸೇರಿದೆ.

ಫುಡ್ ಡೆಲಿವರಿಗೆಂದು ಬಂದು ಮುದ್ದಿನ ನಾಯಿಯನ್ನೇ ಕದ್ದ ಜೊಮ್ಯಾಟೋ ಸಿಬ್ಬಂದಿ!ಫುಡ್ ಡೆಲಿವರಿಗೆಂದು ಬಂದು ಮುದ್ದಿನ ನಾಯಿಯನ್ನೇ ಕದ್ದ ಜೊಮ್ಯಾಟೋ ಸಿಬ್ಬಂದಿ!

ಅಕ್ಟೋಬರ್ 7 ರಂದು ಪುಣೆಯ ವಂದನಾ ಶಾ ಅವರ ಮನೆಯ ಸಾಕು ನಾಯಿ ನಾಪತ್ತೆಯಾಗಿತ್ತು. ಆ ನಾಯಿಯನ್ನು ಜೊಮ್ಯಾಟೋ ಸಿಬ್ಬಂದಿಯೊಬ್ಬ ಕದ್ದೊಯ್ದಿದ್ದನ್ನು ನೋಡಿದ್ದಾಗಿ ಇನ್ನೊಬ್ಬ ಸಿಬ್ಬದಿಯೇ ಹೇಳಿದ್ದ.

Pet Dog returned, Zomato Denies Involvement Of Staff

ನಂತರ ನಾಯಿಯನ್ನು ಕದ್ದಿದ್ದಾನೆ ಎನ್ನಲಾದ ಜೊಮ್ಯಾಟೋ ಸಿಬ್ಬಂದಿಗೆ ವಂದನಾ ಶಾ ಅವರು ಫೋನ್ ಮಾಡಿದರೆ, 'ತಾನು ನಾಯಿಯನ್ನು ಕದ್ದಿದ್ದಾಗಿ ತಿಳಿಸಿ, ಅದನ್ನು ದೂರದ ಊರಿಗೆ ಕಳಿಸಿಬಿಟ್ಟಿದ್ದೇನೆ. ತನಗೆ ಆ ನಾಯಿ ತುಂಬಾ ಹಿಡಿಸಿತ್ತು' ಎಂದಿದ್ದಾನೆ.

ನಂತರ ಈ ಕುರಿತು ನಾಯಿಯ ಮಾಲೀಕರು ಪೊಲೀಸರಿಗೂ ದೂರು ನೀಡಿದ್ದರು.

English summary
A Pet Dog Which was Reportedly stolen by Zomato Food Delivery Man returned back to its owner.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X