ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಶೋ ವಿಲ್ 23 ವರ್ಷ ನಂತರ ಕೊನೆಗೂ ಬಹಿರಂಗ!

By Srinath
|
Google Oneindia Kannada News

ಪುಣೆ, ಸೆ.25: ಜ್ಞಾನ ನಿಧಿ, ದೇವಮಾನವ ಎಂದೆಲ್ಲಾ ಖ್ಯಾತರಾಗಿದ್ದ ಭಗವಾನ್ ಶ್ರೀ ರಜನೀಶ್ ಯಾನಿ ಓಶೋ ವಿಧಿವಶರಾಗಿ ಸುಮಾರು 23 ವರ್ಷಗಳೇ ಕಳೆದಿವೆ. ಜಗತ್ತಿನೆಲ್ಲೆಡೆ ಖ್ಯಾತಿಯ ಉತ್ತುಂಗ ತಲುಪಿದ್ದ ಅವರು ಅಪಾರ ಆಸ್ತಿಯನ್ನೂ ಗಳಿಸಿದ್ದರು. ಆದರೆ ಆ ಆಸ್ತಿಪಾಸ್ತಿ ಬಗ್ಗೆ ಸ್ವತಃ ಅವರೇ ಬರೆದಿಟ್ಟಿದ್ದ ವೀಲುನಾಮೆ ಬಹಿರಂಗವಾಗದೆ ಅವರ ಆಸ್ತಿ ಒಡೆತನ ವಿವಾದಕ್ಕೆ ಗುರಿಯಾಗಿತ್ತು.

ಆದರೆ ಇಂತಿಪ್ಪ ಓಶೋ ಸಾಮ್ರಾಜ್ಯದ ಒಡೆತನಕ್ಕಾಗಿ ನಡೆಯುತ್ತಿರುವ ವಿವಾದ ಈಗ ಹೊಸ ತಿರುವು ಪಡೆದಿದೆ. ದೇವಮಾನವ ಓಶೋ ಮರಣ ಹೊಂದಿದ ಬರೋಬ್ಬರಿ 23 ವರ್ಷಗಳ ಬಳಿಕ ಅವರು ಬರೆದಿಟ್ಟ ವಿಲ್ (will) ಬಹಿರಂಗವಾಗಿದೆ. ವೀಲುನಾಮೆಯಲ್ಲಿ ಏನೆಲ್ಲಾ ಬರೆಯಲಾಗಿದೆ. ಇಲ್ಲಿದೆ ಒಂದು ನೋಟ:

ರಜನೀಶ್ ಅಪಾರ ಆಸ್ತಿ- ಪ್ರಕಾಶನದ ಹಕ್ಕು ಯಾರ ಪಾಲಿಗೆ

ರಜನೀಶ್ ಅಪಾರ ಆಸ್ತಿ- ಪ್ರಕಾಶನದ ಹಕ್ಕು ಯಾರ ಪಾಲಿಗೆ

'ನಾನು, ಓಶೋ. ಮೂಲ ಹೆಸರು ಚಂದ್ರಮೋಹನ್ ಜೈನ್. ಭಗವಾನ್ ಶ್ರೀ ರಜನೀಶ್ ಎಂದೂ ಕರೆಯಲ್ಪಡುವ ನಾನು ನನ್ನ ಎಲ್ಲ ಆಸ್ತಿಗಳನ್ನೂ ಹಾಗೂ ಪ್ರಕಾಶನದ ಹಕ್ಕನ್ನು ನಿಯೋ ಸನ್ಯಾಸ್ ಇಂಟರ್ನ್ಯಾಷನಲ್ ಫೌಂಡೇಷನ್ ಸಂಸ್ಥೆಗೆ ನೀಡುತ್ತಿದ್ದೇನೆ.'

Neo Sannyas International ಸಂಸ್ಥೆಯ ಸೃಷ್ಟಿ

Neo Sannyas International ಸಂಸ್ಥೆಯ ಸೃಷ್ಟಿ

ಇದನ್ನು 1989ರ ಜೂನ್ 16ರಂದು ಬರೆಯಲಾಗಿದ್ದು, ಓಶೋ ಅವರ ಸಹಿಯೂ ಇದೆ. ಈ ದಾಖಲೆಯು ಓಶೋ ಅವರ ಕೊನೆಯ ವಿಲ್ ಎಂದು ಸ್ವಿಜರ್ಲೆಂಡ್ ಮೂಲದ ನಿಯೋ ಸನ್ಯಾಸ್ ಸಂಸ್ಥೆ Neo Sannyas International ಹೇಳಿಕೊಂಡಿದೆ.

NSI ವಿಲ್ ನಕಲಿ: Osho Friends Foundation

NSI ವಿಲ್ ನಕಲಿ: Osho Friends Foundation

ಓಶೋ ಆಸ್ತಿಯ ಹೋರಾಟದಲ್ಲಿ ನಿರತರಾಗಿರುವ ಓಶೋ ಫ್ರೆಂಡ್ಸ್ ಫೌಂಡೇಷನ್ ಮಾತ್ರ ಈ ವೀಲುನಾಮೆ ನಕಲಿ ಎಂದು ವಾದಿಸುತ್ತಿದೆ. ಪುಣೆಯಲ್ಲಿರುವ ಸುಮಾರು 10 ಎಕರೆಯಷ್ಟು ವಿಸ್ತಾರದ ಓಶೋ ಆಶ್ರಮ ಹಾಗೂ ಓಶೋ ಅವರ ತತ್ವಬೋಧನೆಗಳ ಮಾರಾಟದಿಂದ ಪಡೆದ ಕೋಟ್ಯಂತರ ರುಪಾಯಿ ಹಣವೆಲ್ಲವನ್ನೂ ದೋಚಲು ನಿಯೋ ಸಂಸ್ಥೆ ಈ ನಕಲಿ ವಿಲ್ ಸೃಷ್ಟಿಸಿದೆ ಎಂದು ಆರೋಪಿಸಿದ್ದು, ಈ ಬಗ್ಗೆ ಪುಣೆಯ ಕೋರ್ಟಿಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನೂ ಸಲ್ಲಿಸಿದೆ.

ಸಾಯಿಬಾಬಾ ವಿಲ್ ಸಹ ವಿವಾದದ ಗೂಡು

ಸಾಯಿಬಾಬಾ ವಿಲ್ ಸಹ ವಿವಾದದ ಗೂಡು

ಪುಟ್ಟಪರ್ತಿಯ ಶ್ರೀಸತ್ಯ ಸಾಯಿಬಾಬಾ ಅವರ ಮರಣಾನಂತರ ಸಾಯಿಬಾಬಾ ಅಪಾರ ಆಸ್ತಿಯ ಬಗ್ಗೆ ಅಧಿಕೃತ ವಿಲ್ ಇಲ್ಲದ ಕಾರಣ ಅನೇಕ ನಕಲಿ ವಿಲ್ ಗಳು ಸೃಷ್ಟಿಯಾಗಿ ಹೀಗೆಯೇ ವಿವಾದಗಳನ್ನೆಬ್ಬಿಸುತ್ತಿರುವುದು ಗಮನಾರ್ಹವಾಗಿದೆ.

English summary
Osho Rajneesh will surfaces after 23 years flutters with controversy. Twenty three years after the death of Osho, a document called his will has surfaced. Now at stake are intellectual rights over his teachings and the Osho ashram that sits on prime real estate in Pune. The will was produced by Osho International during a trademark dispute in Spain but a group called Osho Friends Foundation have filed a PIL in Pune for the will to be declared null and void.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X