ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನಗರ ನಕ್ಸಲ'ರಿಗೆ ಬಹಿರಂಗ ಬೆಂಬಲ ನೀಡಿದ ನಿಜ ನಕ್ಸಲರು!

By Manjunatha
|
Google Oneindia Kannada News

ಪುಣೆ, ಸೆಪ್ಟೆಂಬರ್ 10: 'ನಗರ ನಕ್ಸಲ'ರ ಹಣೆಪಟ್ಟೆ ಹಚ್ಚಿಸಿಕೊಂಡು ಪುಣೆ ಪೊಲೀಸರಿಂದ ಬಂಧಿತರಾಗಿ ಈಗ ಗೃಹ ಬಂಧನದಲ್ಲಿರುವ ವಿಚಾರವಾದಿಗಳಿಗೆ, ನಿಜ ನಕ್ಸಲರು ಬೆಂಬಲ ನೀಡಿದ್ದಾರೆ.

ಮಹಾರಾಷ್ಟ್ರದ ಪೆರಿಮಿಲಿ ಎಂಬಲ್ಲಿ ನಿಷೇಧಿತ ಮಾವೋವಾದಿ ಸಂಘಟನೆಯ ಸದಸ್ಯರು ಬ್ಯಾನರ್ ಅನ್ನು ಹಾಕಿದ್ದು, ಬಂಧಿತವಾಗಿರುವ ವಿಚಾರವಾದಿಗಳಿಗೆ ಬೆಂಬಲ ನೀಡುವಂತಹಾ ಪೋಸ್ಟರ್ ಅದಾಗಿದೆ. ಬಂಧಿತ ವಿಚಾರವಾದಿಗಳನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಅದರಲ್ಲಿ ಬರೆಯಲಾಗಿದೆ.

ಗೃಹ ಬಂಧನದಲ್ಲಿದ್ದ ವಿಚಾರವಾದಿಗಳ ಬಂಧನ ಅವಧಿ ವಿಸ್ತರಿಸಿದ ನ್ಯಾಯಾಲಯಗೃಹ ಬಂಧನದಲ್ಲಿದ್ದ ವಿಚಾರವಾದಿಗಳ ಬಂಧನ ಅವಧಿ ವಿಸ್ತರಿಸಿದ ನ್ಯಾಯಾಲಯ

ಮಾವೋವಾದಿಗಳೊಂದಿಗೆ ಸಂಬಂಧ ಹೊಂದಿದ್ದಾರೆ ಹಾಗೂ ಮೋದಿ ಅವರ ಹತ್ಯೆ ಮಾಡಲು ಸಂಚು ಮಾಡಿರುವ ಆರೋಪದಡಿಯಲ್ಲಿ ಬಂಧಿತರಾಗಿರುವ ವಿಚಾರವಾದಿಗಳು ಈ ಹೊಸ ಪೋಸ್ಟರ್‌ನಿಂದ ಇಕ್ಕಟ್ಟಿಗೆ ಸಿಲುಕಿದಂತಾಗಿದೆ.

Naxals have now openly supported their urban naxals

'ತಮಗೆ ಯಾವುದೇ ನಿಷೇಧಿತ ಸಂಘಟನೆ ಜೊತೆ ಸಂಬಂಧ ಇಲ್ಲ' ಎಂದು ಗೃಹ ಬಂಧನದಲ್ಲಿರುವ ವಿಚಾರವಾದಿಗಳು ಹೇಳುತ್ತಿರುವ ಸಮಯದಲ್ಲಿಯೇ ಮಾವೋವಾದಿ ನಕ್ಸಲರು ಹೀಗೆ ಬೆಂಬಲ ಘೋಷಿಸಿರುವುದು ಪೊಲೀಸರ ಅನುಮಾನವನ್ನು ಬಲಗೊಳಿಸಿದೆ.

ಬಂಧಿತರಾಗಿರುವ ಐವರು ವಿಚಾರವಾದಿಗಳು ಯಾರು, ಅವರ ಹಿನ್ನೆಲೆ ಏನು?ಬಂಧಿತರಾಗಿರುವ ಐವರು ವಿಚಾರವಾದಿಗಳು ಯಾರು, ಅವರ ಹಿನ್ನೆಲೆ ಏನು?

ಕವಿ ವರವರ ರಾವ್. ವಕೀಲೆ, ನಾಗರೀಕ ಹಕ್ಕುಗಳ ಹೋರಾಟಗಾರ್ತಿ ಸುಧಾ ಭಾರಧ್ವಜ್. ವಿರ್ನೋನ್ ಗೋನ್ಸಾಲ್ವೀಸ್, ಅರುಣ್ ಫರೇರಿಯಾ, ಗೌತಮ್ ನಾಲ್ವಾಕ್ಕಾ ಅವರುಗಳನ್ನು ಪೊಲೀಸರು ಬಂಧಿಸಿದ್ದರು. ಇವರಿಗೆ ವಿಷೇಧಿತ ಸಿಪಿಐ (ಎಂ)ನೊಂದಿಗೆ ಸಂಪರ್ಕವಿದೆ ಎಂದು ಆರೋಪಿಸಲಾಗಿತ್ತು.

ಏನಿದು ಭೀಮಾ ಕೊರೆಗಾಂವ್ ವಿವಾದ? ವಿಚಾರವಾದಿಗಳ ಬಂಧನ ಏಕೆ?ಏನಿದು ಭೀಮಾ ಕೊರೆಗಾಂವ್ ವಿವಾದ? ವಿಚಾರವಾದಿಗಳ ಬಂಧನ ಏಕೆ?

ವಿಚಾರಣೆ ನಡೆಸುತ್ತಿರುವ ಸುಪ್ರಿಂಕೋರ್ಟ್‌ ಪ್ರಕರಣವನ್ನು ಸೆಪ್ಟೆಂಬರ್ 12ಕ್ಕೆ ಮುಂದೂಡಿತ್ತು. ಅಲ್ಲಿಯವರೆಗೆ ಬಂಧಿತ ವಿಚಾರವಾದಿಗಳನ್ನು ಗೃಹ ಬಂಧನದಲ್ಲಿ ಇಡುವಂತೆ ಆದೇಶ ನೀಡಿತ್ತು.

English summary
Naxals openly supported arrested ideologists. They put a banner in Perimili in Maharashtra. In that banner Naxals demand to release the arrested ideologists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X