ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಣೆಯ ಸೆರಂ ಇನ್‌ಸ್ಟಿಟ್ಯೂಟ್‌ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ

|
Google Oneindia Kannada News

ಪುಣೆ, ನವೆಂಬರ್ 28: ಪುಣೆಯ ಕೊರೊನಾ ಲಸಿಕೆ ಕೇಂದ್ರ ಸೆರಂ ಇನ್‌ಸ್ಟಿಟ್ಯೂಟ್‌ಗೆ ಪ್ರಧಾನಿ ನರೇಂದ್ರ ಮೋದಿ ಇಂದು ಭೇಟಿ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಇಂದು ಮೂರು ಲಸಿಕೆ ಉತ್ಪಾದನಾ ಕೇಂದ್ರಗಳಿಗೆ ಭೇಟಿ ನೀಡಿದ್ದಾರೆ. ಗುಜರಾತ್‌ನ ಕ್ಯಾಡಿಲಾ ಪ್ಲ್ಯಾಂಟ್, ಹೈದರಾಬಾದಿನ ಭಾರತ್ ಬಯೋಟೆಕ್ ಹಾಗೂ ಪುಣೆಯ ಸೆರಂ ಇನ್‌ಸ್ಟಿಟ್ಯೂಟ್‌ನ ಆಸ್ಟ್ರಾಜೆನೆಕಾ ಲಸಿಕೆಯ ಬಗ್ಗೆ ತಿಳಿಯಲು ಆಗಮಿಸಿದ್ದರು.

ಹೈದರಾಬಾದ್‌ನ ಭಾರತ್ ಬಯೋಟೆಕ್ ಕೊರೊನಾ ಲಸಿಕೆ ಕೇಂದ್ರಕ್ಕೆ ಮೋದಿ ಭೇಟಿಹೈದರಾಬಾದ್‌ನ ಭಾರತ್ ಬಯೋಟೆಕ್ ಕೊರೊನಾ ಲಸಿಕೆ ಕೇಂದ್ರಕ್ಕೆ ಮೋದಿ ಭೇಟಿ

ಕೊರೊನಾ ಲಸಿಕೆ ನಾಗರಿಕರ ರೋಗನಿರೋಧಕ ಶಕ್ತಿಗಾಗಿ ಹೇಗೆ ಕಾರ್ಯನಿರ್ವಹಿಸುತ್ತವೆ, ಲಸಿಕೆ ಸಿದ್ಧತೆಗಳು, ಸವಾಲುಗಳು ಮತ್ತು ಪ್ರಯತ್ನಗಳಿಗೆ ಮಾರ್ಗಸೂಚಿಯನ್ನು ಸಿದ್ಧಪಡಿಸುವ ಬಗ್ಗೆ ಮಾಹಿತಿ ಪಡೆಯುತ್ತಾರೆ ಎಂದು ಪಿಎಂಒ ತಿಳಿಸಿದೆ.

Modi Visited Serum Institute Of India In Pune

ಅಹಮದಾಬಾದ್‌ನ 'ಝೈಡಸ್ ಕ್ಯಾಡಿಲಾ' :
ಪ್ರಧಾನಿ ನರೇಂದ್ರ ಮೋದಿ ಅವರು ಅಹಮದಾಬಾದ್ ಬಳಿಯ ಪ್ರಮುಖ ಔಷಧ ಕಂಪನಿ 'ಝೈಡಸ್ ಕ್ಯಾಡಿಲಾ' ಸ್ಥಾವರಕ್ಕೆ ಭೇಟಿ ನೀಡಲಿದ್ದು, ಅಲ್ಲಿ ಕೋವಿಡ್ -19 ಲಸಿಕೆ ಅಭಿವೃದ್ಧಿಪಡಿಸಲಾಗುತ್ತಿದೆ. ಕೋವಿಡ್ -19ಗೆ ಸಂಭಾವ್ಯ ಲಸಿಕೆಯ ಮೊದಲ ಹಂತವು ಪೂರ್ಣಗೊಂಡಿದೆ ಎಂದು ಔಷಧಿ ತಯಾರಕರು ಈ ಹಿಂದೆ ಘೋಷಿಸಿದ್ದರು ಮತ್ತು ಎರಡನೇ ಹಂತದ ಪ್ರಯೋಗವು ಆಗಸ್ಟ್‌ನಲ್ಲಿ ಪ್ರಾರಂಭವಾಯಿತು ಎಂದು ಗುಜರಾತ್ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ತಿಳಿಸಿದ್ದಾರೆ.

ಇಂದು ಸೆರಂ ಇನ್‌ಸ್ಟಿಟ್ಯೂಟ್‌ನಲ್ಲಿ ವಿಜ್ಞಾನಿಗಳ ಜತೆ ಉತ್ತಮ ಮಾತುಕತೆ ನಡೆಯಿತು. ಅವರಿಗೆ ಲಸಿಕೆಗಳ ಕುರಿತು ಸಾಕಷ್ಟು ಮಾಹಿತಿ ಪಡೆದಿದ್ದೇನೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ

ಪುಣೆಯ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ:
ಕೊವಿಡ್ -19 ಲಸಿಕೆಯನ್ನು ಅಭಿವೃದ್ಧಿಪಡಿಸಲು ಈ ಪ್ರಸಿದ್ಧ ಔಷಧ ಕಂಪನಿ 'ಆಸ್ಟ್ರಾಜೆನೆಕಾ' ಮತ್ತು'ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ' ನೊಂದಿಗೆ ಪಾಲುದಾರಿಕೆ ಹೊಂದಿದೆ.

ಹೈದರಾಬಾದ್‌ನ ಭಾರತ್ ಬಯೋಟೆಕ್: ಇದರ ನಂತರ ಪಿಎಂ ನರೇಂದ್ರ ಮೋದಿ ಅವರು ಹೈದರಾಬಾದ್‌ಗೆ ತೆರಳಿ ಅಲ್ಲಿ ಕೋವಿಡ್ -19 ಲಸಿಕೆ ಅಭಿವೃದ್ಧಿಪಡಿಸುವ ಭಾರತ್ ಬಯೋಟೆಕ್ (Bharat Biotech) ಕೇಂದ್ರಕ್ಕೆ ಭೇಟಿ ನೀಡಿದ್ದಾರೆ. ಕೇಂದ್ರದಲ್ಲಿ ಒಂದು ಗಂಟೆ ತಜ್ಞರೊಂದಿಗೆ ಮಾತುಕತೆ ನಡೆಸಿದ್ದಾರೆ, ಗಮನಾರ್ಹವಾಗಿ 'ಭಾರತ್ ಬಯೋಟೆಕ್' ಅಭಿವೃದ್ಧಿಪಡಿಸುತ್ತಿರುವ ಕೋವಿಡ್ -19 ಲಸಿಕೆಯ ಮೂರನೇ ಹಂತದ ಪ್ರಯೋಗ ನಡೆಯುತ್ತಿದೆ.

English summary
Prime Minister Narendra Modi have visited at Serum Institute of India in Pune to review COVID-19 vaccine development.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X