ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದ "ಮದ್ ಗ್ಯಾಲ್" ಕುರಿಗೆ 70 ಲಕ್ಷದ ಆಫರ್!

|
Google Oneindia Kannada News

ಪುಣೆ, ಡಿಸೆಂಬರ್ 14: ವಿಭಿನ್ನ ನೋಟ ಹಾಗೂ ಉತ್ಕೃಷ್ಟ ಗುಣಮಟ್ಟದ ಮಾಂಸಕ್ಕೆ ಹೆಸರಾಗಿರುವ ಮದ್ ಗ್ಯಾಲ್ ತಳಿಯ ಕುರಿಗೆ ಬರೋಬ್ಬರಿ 70 ಲಕ್ಷದ ಆಫರ್ ಬಂದಿದೆ.

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಈ ಕುರಿಯ ಮಾಲೀಕ ಇದಕ್ಕೆ 1.5 ಕೋಟಿ ರೂ ಹೇಳಿದ್ದು, 70 ಲಕ್ಷ ರೂಪಾಯಿವರೆಗೂ ಬೇಡಿಕೆ ಕುದುರಿದೆ.

ಮುತ್ತೋಡಿಯಲ್ಲಿ ಕಾಣಿಸಿಕೊಂಡ ಅಪರೂಪದ ಕಾಡೆಮ್ಮೆಮುತ್ತೋಡಿಯಲ್ಲಿ ಕಾಣಿಸಿಕೊಂಡ ಅಪರೂಪದ ಕಾಡೆಮ್ಮೆ

ಸಾಂಗ್ಲಿ ಜಿಲ್ಲೆಯಲ್ಲಿ ಹೆಚ್ಚಾಗಿ ಈ ಮದ್ ಗ್ಯಾಲ್ ತಳಿ ಕಂಡುಬರುತ್ತದೆ. ಎತ್ತರಕ್ಕಿದ್ದು, ಇನ್ನಿತರ ತಳಿಗಳಿಗಿಂತ ಬೇಗ ಬೆಳವಣಿಗೆ ಹೊಂದುವುದು ಇದರ ವೈಶಿಷ್ಟ್ಯ. ಆದ್ದರಿಂದ ಈ ತಳಿಗೆ ಬೇಡಿಕೆಯೂ ಹೆಚ್ಚಿದೆ. ಹೀಗಾಗಿಯೇ ಜಿಲ್ಲೆಯ ಹೈನುಗಾರಿಕೆ ಇಲಾಖೆಯು ಈ ತಳಿಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿದೆ. ಸಾಂಗ್ಲಿಯ ಮದ್ ಗ್ಯಾಲ್ ಹಳ್ಳಿಯಲ್ಲಿ ಹೆಚ್ಚಾಗಿ ಈ ತಳಿಯಿರುವುದರಿಂದ ಈ ಕುರಿ ತಳಿಗೆ ಇದೇ ಹೆಸರು ಬಂದಿದೆ.

Maharashtras Madgyal Sheep Gets Rs 70 Lakh Offer

ಸಾಂಗ್ಲಿಯ ಅಟ್ಪಾಡಿ ಎಂಬಲ್ಲಿ ಬಾಬು ಮೆಟ್ಕಾರಿ ಎಂಬುವರ ಬಳಿ ಈ ವಿಶೇಷ ಕುರಿ ಇದೆ. ಅವರು ಇದೇ ರೀತಿ 200 ಕುರಿಗಳನ್ನು ಸಾಕಿದ್ದಾರೆ. ಸದ್ಯಕ್ಕೆ ಈ ವಿಶೇಷ ಕುರಿಗೆ 70 ಲಕ್ಷ ಬೇಡಿಕೆ ಬಂದಿದೆ.

ಕುರಿ ಬಗ್ಗೆ ಮಾತನಾಡಿರುವ ಮಾಲೀಕ, "ಈ ಕುರಿ ಹೆಸರು ಸರ್ಜಾ. ಆದರೆ ಇದಕ್ಕೆ ನಂತರ ಮೋದಿ ಎಂದು ಮರು ನಾಮಕರಣ ಮಾಡಲಾಯಿತು. ಮೋದಿಯವರು ಹೇಗೆ ಎಲ್ಲಾ ಚುನಾವಣೆಗಳನ್ನು ಗೆದ್ದು ದೇಶದ ಪ್ರಧಾನಿಯಾದರೋ ಹಾಗೆ ಈ ಕುರಿಯೂ ಎಲ್ಲ ಉತ್ಸವಗಳಲ್ಲಿ ಗೆದ್ದು, ಮಾರುಕಟ್ಟೆಯಲ್ಲಿ ತನ್ನದೇ ಸ್ಥಾನ ಪಡೆದುಕೊಂಡಿದೆ" ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಈ ಸರ್ಜಾ ತನಗೆ ಹಾಗೂ ತನ್ನ ಕುಟುಂಬಕ್ಕೆ ಅದೃಷ್ಟ ತಂದಿದೆ ಎಂದು ಹೇಳಿಕೊಳ್ಳುವ ಮೆಟ್ಕಾರಿ ಅವರಿಗೆ ಇದನ್ನು ಮಾರಲು ಇಷ್ಟವಿಲ್ಲವಂತೆ. ಈ ಕುರಿಗೆ ಗ್ರಾಹಕರೊಬ್ಬರು 70 ಲಕ್ಷ ರೂಪಾಯಿಯ ಬೇಡಿಕೆಯಿಟ್ಟಿದ್ದಾರೆ. ಆದರೆ ಇದಕ್ಕೆ 1.5 ಕೋಟಿ ಬೆಲೆ ನಿಗದಿಪಡಿಸಿದ್ದೇನೆ ಎಂದು ಹೇಳಿದ್ದಾರೆ.

ಮದ್ ಗ್ಯಾಲ್ ತಳಿಯ ಕುರಿಗಳು ತಮ್ಮ ಬಳಿ ಬೇಕಾದಷ್ಟಿವೆ. ಆದರೆ ಸರ್ಜಾ ಅವೆಲ್ಲಕ್ಕಿಂತಲೂ ಗುಣಮಟ್ಟದಲ್ಲಿ ಭಿನ್ನ ಎನಿಸಿದೆ. ಇದೇ ವ್ಯವಹಾರವನ್ನು ಎರಡು ಮೂರು ತಲೆಮಾರುಗಳಿಂದ ನಡೆಸುತ್ತಿದ್ದೇನೆ. ಆದರೆ ಕಳೆದ ಎರಡು ವರ್ಷಗಳಿಂದ ಸರ್ಜಾ ಇಂದ ಲಾಭ ಪಡೆದುಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಇದರ ಭಿನ್ನತೆ, ಉತ್ಕೃಷ್ಟ ಗುಣಮಟ್ಟದ ಮಾಂಸ, ಹೆಚ್ಚಿದ ಬೇಡಿಕೆ, ಎಂಥದ್ದೇ ವಾತಾವರಣದಲ್ಲೂ ಬೆಳೆಯುವ ಗುಣಗಳನ್ನು ಕಂಡು ಈ ತಳಿಯನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿರುವುದಾಗಿ ಮಹಾರಾಷ್ಟ್ರದ ಕುರಿ ಹಾಗೂ ಆಡು ಅಭಿವೃದ್ಧಿ ಮಂಡಳಿ ಸಹಾಯಕ ನಿರ್ದೇಶಕ ತಿಳಿಸಿದ್ದಾರೆ. 2003ರಲ್ಲಿ ಈ ತಳಿ ಕೇವಲ 5,319 ಇದ್ದು, ಇದೀಗ 1.50 ಲಕ್ಷದಷ್ಟು ಹೆಚ್ಚಾಗಿದೆ. ಸದ್ಯಕ್ಕೆ ಸರ್ಕಾರದ ಕಾರ್ಯಕ್ರಮವೊಂದರ ಅಡಿಯಲ್ಲಿ ಮದ್ ಗ್ಯಾಲ್ ತಳಿಯ ಕುರಿಗಳನ್ನು ಅಭಿವೃದ್ಧಿಪಡಿಸುವ ಕೆಲಸ ನಡೆಯುತ್ತಿದೆ.

English summary
Madgyal breed sheep, known for its unique appearance and superior meat quality, has got an offer of Rs 70 lakh from a buyer in Maharashtra's Sangli district
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X