ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಗೂಢರೀತಿಯಲ್ಲಿ ಬಣ್ಣ ಬದಲಾಯಿಸಿ ಆತಂಕ ಮೂಡಿಸಿದ ಕೆರೆ

|
Google Oneindia Kannada News

ಮುಂಬೈ, ಜೂನ್ 11: ಮಹಾರಾಷ್ಟ್ರದ ಜನಪ್ರಿಯ ಲೊನಾರ್ ಕುಳಿ ಕೆರೆ ಬಣ್ಣ ಇದ್ದಕ್ಕಿದ್ದಂತೆ ಬದಲಾಗಿದೆ. ಹಸಿರು ಬಣ್ಣದಲ್ಲಿರುತ್ತಿದ್ದ ಕೆರೆ ಈಗ ಕೆಂಬಣ್ಣಕ್ಕೆ ತಿರುಗಿದೆ. ಕೆರೆ ಬಣ್ಣ ಬದಲಾಗಿದ್ದು ಏಕೆ ಎಂಬುದರ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ತಲೆ ಕೆಡಿಸಿಕೊಂಡಿದ್ದಾರೆ.

ಬುಲ್ದಾನದ ಈ ಕೆರೆಯ ಬಣ್ಣ ಬದಲಾಗಿರುವುದು ಆತಂಕ, ಅಚ್ಚರಿ ಮೂಡಿಸಿದೆ. ಪಾಚಿಯ ಕಾರಣ ಕೆರೆಯ ನೀರು ಬೇರೆ ಬಣ್ಣಕ್ಕೆ ತಿರುಗುವ ಪ್ರಕ್ರಿಯೆ ಸಾಮಾನ್ಯವೆನಿಸಿದರೂ ಇದು ವಿಶಿಷ್ಟವಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ. ಕೆರೆಯ ನೀರಿನ ಸ್ಯಾಂಪಲ್, ನೀರಿನ ಸಸ್ಯ, ಮಣ್ಣಿನ ಸ್ಯಾಂಪಲ್ ಪಡೆದು ಪರೀಕ್ಷಿಸಲು ಅರಣ್ಯ ಇಲಾಖೆ ಮುಂದಾಗಿದೆ.

ರಷ್ಯಾದಲ್ಲಿ ತೈಲ ಸೋರಿಕೆ: ತುರ್ತು ಪರಿಸ್ಥಿತಿ ಘೋಷಿಸಿದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ರಷ್ಯಾದಲ್ಲಿ ತೈಲ ಸೋರಿಕೆ: ತುರ್ತು ಪರಿಸ್ಥಿತಿ ಘೋಷಿಸಿದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್

"ಕಳೆದ ಎರಡು ಮೂರು ದಿನಗಳಲ್ಲಿ ಕೆರೆಯ ನೀರು ಬದಲಾಯಿಸಿದೆ. ಅರಣ್ಯ ಇಲಾಖೆಗೆ ತಕ್ಷಣವೇ ಸ್ಯಾಂಪಲ್ ಪಡೆದು ಪರೀಕ್ಷಿಸಲು ಸೂಚಿಸಲಾಗಿದೆ, ಈ ಬಗ್ಗೆ ವರದಿ ಬಂದ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ'' ಎಂದು ಲೊನಾರ್ ತಹಸೀಲ್ದಾಸ್ ಸೈಫಾನ್ ನದಾಫ್ ಅವರು ಎಎನ್ಐ ಜೊತೆ ಮಾತನಾಡುತ್ತಾ ಹೇಳಿದರು.

Lonar Lake in Maharashtra mysteriously turns red; Forest officials puzzled

ಪ್ರಾಥಮಿಕ ತನಿಖೆ ಬಳಿಕ ಬ್ಯಾಕ್ಟೀರಿಯಾ(Halobacteria), ಫಂಗಸ್(fungus salina) ಬೆಳೆದಿರುವುದರಿಂದ ಈ ರೀತಿ ಇದ್ದಕ್ಕಿದ್ದಂತೆ ಬಣ್ಣ ಬದಲಾಯಿಸಿರಬಹುದು ಎಂದು ತಿಳಿದು ಬಂದಿದೆ.

ಲೊನಾರ್ ಕುಳಿ ಅಥವಾ ಕೆರೆ ಎಂದು ಕರೆಯಲಾಗುವ ಪಾರಂಪರಿಕ ನೈರ್ಸಗಿಕ ತಾಣವು ಮಹಾರಾಷ್ಟ್ರದ ಬುಲ್ಡಾನಾ ಜಿಲ್ಲೆಯಲ್ಲಿದೆ. ದೊಡ್ಡ ಗಾತ್ರದ ಕ್ಷುದ್ರಗ್ರಹ (Asteroid)ವೊಂದ ಭೂಮಿಗೆ ಅಪ್ಪಳಿಸಿದ್ದರಿಂದ ಉಂಟಾದ ಕುಳಿಯಲ್ಲಿ ನೀರು ತುಂಬಿ ಕೆರೆಯಂತಾಗಿದೆ.

English summary
The water of Maharashtra's famous Lonar crater lake in Buldhana has mysteriously changed its colour to red, sparking concerns and theories alike
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X