ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಣೆಯಲ್ಲಿ ಕಾಶ್ಮೀರಿ ಮೂಲದ ಪತ್ರಕರ್ತನ ಮೇಲೆ ಹಲ್ಲೆ

|
Google Oneindia Kannada News

ಪುಣೆ, ಫೆಬ್ರವರಿ 23: ಪುಲ್ವಾಮಾ ಉಗ್ರರ ದಾಳಿಯ ಬಳಿಕ ದೇಶದ ವಿವಿಧೆಡೆ ಇರುವ ಕಾಶ್ಮೀರದ ಜನರ ಮೇಲೆ ಹಲ್ಲೆ ನಡೆಸುವ, ಅವರಿಗೆ ಬೆದರಿಕೆ ಒಡ್ಡುವ ಘಟನೆಗಳು ವರದಿಯಾಗುತ್ತಿದ್ದು, ಮಹಾರಾಷ್ಟ್ರದ ಪುಣೆಯಲ್ಲಿ ಪತ್ರಕರ್ತನ ಮೇಲೆ ಹಲ್ಲೆ ನಡೆದಿದೆ.

ಕಾಶ್ಮೀರದಲ್ಲಿ ಜೈಷ್-ಎ-ಮೊಹಮ್ಮದ್ ಸಂಘಟನೆಯ ಇಬ್ಬರು ಉಗ್ರರ ಹತ್ಯೆಕಾಶ್ಮೀರದಲ್ಲಿ ಜೈಷ್-ಎ-ಮೊಹಮ್ಮದ್ ಸಂಘಟನೆಯ ಇಬ್ಬರು ಉಗ್ರರ ಹತ್ಯೆ

ಪುಣೆಯಲ್ಲಿ ಪತ್ರಿಕೆಯೊಂದರಲ್ಲಿ ಉದ್ಯೋಗಿಯಾಗಿರುವ ಜಿಬ್ರಾನ್ ನಜೀರ್ (24) ಮೇಲೆ ಇಬ್ಬರು ವ್ಯಕ್ತಿಗಳು ಗುರುವಾರ ಟ್ರಾಫಿಕ್ ಸಿಗ್ನಲ್‌ನಲ್ಲಿ ಹಲ್ಲೆ ನಡೆಸಿದ್ದಾರೆ. ಕಾಶ್ಮೀರಕ್ಕೆ ಈತನನ್ನು ಒದ್ದೋಡಿಸಿ ಎಂದು ಬೆದರಿಕೆಯ ಮಾತನ್ನಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಯಾಸಿನ್ ಮಲಿಕ್ ಬಂಧನ: ಕಾಶ್ಮೀರಕ್ಕೆ 100 ಅರೆಸೇನಾ ತುಕಡಿ ರವಾನೆ ಯಾಸಿನ್ ಮಲಿಕ್ ಬಂಧನ: ಕಾಶ್ಮೀರಕ್ಕೆ 100 ಅರೆಸೇನಾ ತುಕಡಿ ರವಾನೆ

ಇಬ್ಬರು ಶಂಕಿತ ಹಲ್ಲೆಕೋರರ ವಿರುದ್ಧ ಶುಕ್ರವಾರ ಸಂಜೆ ಪ್ರಕರಣ ದಾಖಲಿಸಲಾಗಿದ್ದು, ಒಬ್ಬನನ್ನು ಬಂಧಿಸಲಾಗಿದೆ.

Kashmiri journalist allegedly assaulted in pune

ಹಲ್ಲೆ ನಡೆಸಿದ ವ್ಯಕ್ತಿಯು ಪೊಲೀಸ್ ಠಾಣೆಯಲ್ಲಿ ಕ್ಷಮೆ ಯಾಚಿಸಿದ್ದಾನೆ. ಇದು ರಸ್ತೆಯಲ್ಲಿ ನಡೆದ ಕಲಹವಷ್ಟೇ. ಪುಲ್ವಾಮಾ ದಾಳಿಗೂ ಇದಕ್ಕೂ ಸಂಬಂಧ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಇದು ಸಂಘಟಿತ ದಾಳಿ ಎಂದು ನಜೀರ್ ಆರೋಪಿಸಿದ್ದಾರೆ. ನಿನ್ನನ್ನು ಕಾಶ್ಮೀರಕ್ಕೆ ಕಳುಹಿಸುತ್ತೇವೆ. ಅಲ್ಲಿಯೇ ಪತ್ರಿಕೋದ್ಯಮ ಕೆಲಸ ಮಾಡಿಕೊಂಡಿರು ಎಂದು ಬೆದರಿಕೆ ಹಾಕಿದ್ದರು ಎಂಬುದಾಗಿ ಹೇಳಿದ್ದಾರೆ.

English summary
A journalist from Kashmir has lodged a complaint against two assaulters for allegedly beating him and threatened him to send back to Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X