ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಪ್ಸಿ ಪನ್ನು, ಅನುರಾಗ್ ಕಶ್ಯಪ್ ಆಸ್ತಿ ಮೇಲೆ ಐಟಿ ದಾಳಿ: 650 ಕೋಟಿ ರೂ ತೆರಿಗೆ ವಂಚನೆ ಪತ್ತೆ

|
Google Oneindia Kannada News

ಪುಣೆ, ಮಾರ್ಚ್ 4: ಮುಂಬೈ ಮತ್ತು ಪುಣೆಯ ವಿವಿಧೆಡೆ ಸತತ ಎರಡು ದಿನಗಳ ಕಾಲ ಪರಿಶೀಲನೆ ನಡೆಸಿದ ಆದಾಯ ತೆರಿಗೆ ಇಲಾಖೆಯು ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಮತ್ತು ನಟಿ ತಾಪ್ಸಿ ಪನ್ನು ಅವರಿಂದ ಭಾರಿ ಪ್ರಮಾಣದ ನಗದು ಹಾಗೂ ಅಕ್ರಮ ಹಣ ವರ್ಗಾವಣೆ ಆಗಿರುವುದನ್ನು ಪತ್ತೆಹಚ್ಚಿದೆ.

ನಟಿ ತಾಪ್ಸಿ ಪನ್ನು ಅವರು 5 ಕೋಟಿ ರೂ ಮೊತ್ತದ ನಗದು ಹಣ ಪಡೆದುಕೊಂಡಿರುವುದು ತನಿಖೆ ವೇಳೆ ಗೊತ್ತಾಗಿದೆ ಎಂದು ಆದಾಯ ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ. ಅನುರಾಗ್ ಕಶ್ಯಪ್ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು, ಸುಮಾರು 20 ಕೋಟಿ ತೆರಿಗೆ ಉಳಿಸಿಕೊಂಡಿದ್ದರೂ ಸುಳ್ಳು ವೆಚ್ಚದ ಲೆಕ್ಕಗಳನ್ನು ತೋರಿಸಿರುವುದು ಪತ್ತೆಯಾಗಿದೆ ಎಂದು ಆರೋಪಿಸಿದ್ದಾರೆ.

ಐಟಿ ಅಧಿಕಾರಿಗಳಿಂದ ಅನುರಾಗ್ ಕಶ್ಯಪ್, ತಾಪ್ಸಿ ಪನ್ನು ವಿಚಾರಣೆಐಟಿ ಅಧಿಕಾರಿಗಳಿಂದ ಅನುರಾಗ್ ಕಶ್ಯಪ್, ತಾಪ್ಸಿ ಪನ್ನು ವಿಚಾರಣೆ

ತಾಪ್ಸಿ ಪನ್ನು ಸುಮಾರು ಐದು ಕೋಟಿ ರೂ ಹಣವನ್ನು ನಗದು ರೂಪದಲ್ಲಿ ಪಡೆದಿದ್ದಾರೆ. ಅವರ ಕಂಪೆನಿಯೂ ತೆರಿಗೆ ವಂಚನೆಯಲ್ಲಿ ಭಾಗಿಯಾದ ಅನುಮಾನವಿದೆ. ತಾಪ್ಸಿ ಅವರ ಜಾಹೀರಾತು ಒಪ್ಪಂದಗಳು ಮತ್ತು ಸಿನಿಮಾ ಸಹಿಯ ಮೊತ್ತಗಳನ್ನು ಐಟಿ ಪರಿಶೀಲನೆಗೆ ಒಳಪಡಿಸಿದೆ. ಅವರು ಸಹಿ ಹಾಕಿದ ಕೆಲವು ಸಿನಿಮಾಗಳ ಮೊತ್ತ ಕೋಟಿಗಿಂತ ಕಡಿಮೆ ಇದೆ. ಬುಧವಾರ ತಾಪ್ಸಿ ಅವರಿಂದ ಪ್ರಾಥಮಿಕ ಹೇಳಿಕೆ ದಾಖಲಿಸಲಾಗಿತ್ತು. ಗುರುವಾರ ಸಂಪೂರ್ಣ ಹೇಳಿಕೆ ಪಡೆದುಕೊಳ್ಳಲಾಯಿತು. ಮುಂದೆ ಓದಿ.

ದಾಖಲೆ ಅಳಿಸಿದ ತಾಪ್ಸಿ

ದಾಖಲೆ ಅಳಿಸಿದ ತಾಪ್ಸಿ

ಕೆಲವು ದತ್ತಾಂಶಗಳನ್ನು ತಾಪ್ಸಿ ತಮ್ಮ ಮೊಬೈಲ್ ಫೋನ್‌ನಿಂದ ಅಳಿಸಿಹಾಕಿದ್ದಾರೆ ಎಂದು ಐಟಿ ಅಧಿಕಾರಿಗಳು ಶಂಕಿಸಿದ್ದಾರೆ. ಈ ದತ್ತಾಂಶಗಳನ್ನು ಮರಳಿ ಪಡೆಯಲು ಪರಿಣತರ ಸಹಾಯ ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಐಟಿ ಅಧಿಕಾರಿಗಳು ತಾಪ್ಸಿ ಅವರಿಗೆ ಮತ್ತೆ ಸಮನ್ಸ್ ನೀಡುವ ಸಾಧ್ಯತೆ ಇದೆ.

600 ಕೋಟಿ ರೂ ವಂಚನೆ ಶಂಕೆ

600 ಕೋಟಿ ರೂ ವಂಚನೆ ಶಂಕೆ

ಅನುರಾಗ್ ಕಶ್ಯಪ್ ಸಹ ಮಾಲೀಕತ್ವದ ಫ್ಯಾಂಟಮ್ ಫಿಲಂಸ್ ಸುಮಾರು 600 ಕೋಟಿ ರೂ ತೆರಿಗೆ ವಂಚಿಸಿರುವ ಅನುಮಾನ ವ್ಯಕ್ತವಾಗಿದೆ. ಫ್ಯಾಟಂಮ್ ಫಿಲಂಸ್‌ನ ಷೇರುಗಳನ್ನು ಅದರ ಷೇರುದಾರರು ಮಾರಾಟ ಮಾಡಿದ್ದರು. ಆದರೆ ಅದರಿಂದ ದೊರೆತ ಹಣಕ್ಕೆ ತಕ್ಕ ಆದಾಯ ತೆರಿಗೆ ಪಾವತಿಸಿರಲಿಲ್ಲ.

ರೈತರ ಪರವಾಗಿದ್ದವರ ಮೇಲೆ ಕೇಂದ್ರ ಸರ್ಕಾರ ಐಟಿ ದಾಳಿ ಮಾಡಿಸಿದೆ: ರಾಹುಲ್ ಗಾಂಧಿರೈತರ ಪರವಾಗಿದ್ದವರ ಮೇಲೆ ಕೇಂದ್ರ ಸರ್ಕಾರ ಐಟಿ ದಾಳಿ ಮಾಡಿಸಿದೆ: ರಾಹುಲ್ ಗಾಂಧಿ

ಅವರು ಸುಳ್ಳು ವೆಚ್ಚದ ಪತ್ರಗಳು ಹಾಗೂ ನಕಲಿ ಬಿಲ್‌ಗಳನ್ನು ತಯಾರಿಸಿದ್ದರು ಎಂದು ಐಟಿ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಅನುರಾಗ್ ಕಶ್ಯಪ್ ಅವರ ಫೋನ್‌ನಿಂದ ದಾಖಲೆಗಳನ್ನು ಅಳಿಸಲಾಗಿದೆ. ಈ ರೀತಿ ಅಳಿಸಿರುವುದು ಕಾಣಿಸುವಂತಿದೆ. 2018ರಲ್ಲಿ ಫ್ಯಾಂಟಮ್ ಫಿಲಂಸ್‌ಅನ್ನು ಮುಚ್ಚಲಾಗಿತ್ತು.

300 ಕೋಟಿ ಆದಾಯಕ್ಕೆ ದಾಖಲೆ ಇಲ್ಲ

300 ಕೋಟಿ ಆದಾಯಕ್ಕೆ ದಾಖಲೆ ಇಲ್ಲ

'ವಾಸ್ತವವಾದ ಬಾಕ್ಸಾಫೀಸ್ ಸಂಗ್ರಹಕ್ಕೆ ಹೋಲಿಸಿದರೆ ಫ್ಯಾಂಟಮ್ ಚಿತ್ರ ನಿರ್ಮಾಣ ಸಂಸ್ಥೆಯು ಭಾರಿ ಪ್ರಮಾಣದ ಆದಾಯವನ್ನು ಮುಚ್ಚಿಹಾಕಿರುವುದಕ್ಕೆ ಪುರಾವೆಗಳನ್ನು ಹೊರತೆಗೆಯಲಾಗಿದೆ. ಸುಮಾರು 300 ಕೋಟಿ ರೂ ಮೊತ್ತದ ವ್ಯತ್ಯಾಸದ ಬಗ್ಗೆ ವಿವರಣೆ ನೀಡಲು ಕಂಪೆನಿ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ' ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

350 ಕೋಟಿ ರೂ ತೆರಿಗೆ ವಂಚನೆ

350 ಕೋಟಿ ರೂ ತೆರಿಗೆ ವಂಚನೆ

ನಿರ್ಮಾಣ ಸಂಸ್ಥೆಯ ಚಿತ್ರ ನಿರ್ದೇಶಕರು ಹಾಗೂ ಷೇರುದಾರರ ನಡುವೆ ನಡೆದ ವ್ಯವಹಾರ ಹಂಚಿಕೆಗೆ ಸಂಬಂಧಿಸಿದ ತಿದ್ದುಪಡಿಗಳು ಹಾಗೂ ಮೌಲ್ಯಮಾಪನಗಳಲ್ಲಿನ ದೋಷಗಳಿಗೆ ಪುರಾವೆಗಳು ದೊರಕಿವೆ. ಇದರಲ್ಲಿ ಸುಮಾರು 350 ಕೋಟಿ ರೂ ತೆರಿಗೆ ವಂಚಿಸಲಾಗಿದೆ ಎಂದು ಆರೋಪಿಸಲಾಗಿದೆ.

ಖೋಡೆಸ್ ಕಂಪನಿಗೆ ಪ್ರಚಾರದ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ನಾಮ !ಖೋಡೆಸ್ ಕಂಪನಿಗೆ ಪ್ರಚಾರದ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ನಾಮ !

ಮೊಬೈಲ್ ದಾಖಲೆ ಅಳಿಸಿದ್ದಾರೆ

ಮೊಬೈಲ್ ದಾಖಲೆ ಅಳಿಸಿದ್ದಾರೆ

ಅನುರಾಗ್ ಕಶ್ಯಪ್ ಸೇರಿದಂತೆ ಅನೇಕ ಷೇರುದಾರರ ಮೊಬೈಲ್ ದತ್ತಾಂಶಗಳನ್ನು ಅಳಿಸಿಹಾಕಲಾಗಿದೆ. ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಬಳಿಕ ಮಾದಕವಸ್ತು ನಿಯಂತ್ರಣ ಸಂಸ್ಥೆಯು ಆರಂಭಿಸಿದ ತನಿಖೆಯ ನಂತರ ಫೋನ್ ದತ್ತಾಂಶಗಳನ್ನು ಅಳಿಸಿ ಹಾಕಲಾಗಿದೆ ಎಂದು ಅನುಮಾನಿಸಲಾಗಿದೆ.

ಎಲ್ಲೆಲ್ಲಿ ಪರಿಶೀಲನೆ?

ಎಲ್ಲೆಲ್ಲಿ ಪರಿಶೀಲನೆ?

ತೆರಿಗೆ ವಂಚನೆ ಆರೋಪದಲ್ಲಿ ಫ್ಯಾಟಮ್ ಫಿಲಂಸ್, ರಿಲಯನ್ಸ್ ಎಂಟರ್‌ಟೈನ್‌ಮೆಂಟ್, ತಾಪ್ಸಿ ಪನ್ನು ನಿವಾಸ ಮತ್ತು ಕಚೇರಿ, ಕ್ವಾನ್ ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ ಮತ್ತು ಎಕ್ಸೀಡ್ ಎಂಟರ್‌ಟೈನ್‌ಮೆಂಟ್‌ಗಳಲ್ಲಿ ಐಟಿ ಅಧಿಕಾರಿಗಳು ಗುರುವಾರವೂ ಪರಿಶೀಲನೆ ನಡೆಸಿದರು.

ಶುಕ್ರವಾರವೂ ಮುಂದುವರಿಕೆ

ಶುಕ್ರವಾರವೂ ಮುಂದುವರಿಕೆ

ಮುಂಬೈ, ಪುಣೆ, ದೆಹಲಿ ಮತ್ತು ಹೈದರಾಬಾದ್‌ಗಳಲ್ಲಿ ಕೂಡ ಪರಿಶೀಲನೆ ನಡೆಸಲಾಯಿತು. ತಾಪ್ಸಿ ಪನ್ನು ಹಾಗೂ ಅನುರಾಗ್ ಕಶ್ಯಪ್ ಸೇರಿದಂತೆ ಶಂಕಿತರನ್ನು ಶುಕ್ರವಾರವೂ ವಿಚಾರಣೆಗೆ ಒಳಪಡಿಸುವ ಹಾಗೂ ದಾಖಲೆ ಪರಿಶೀಲನೆ ಮುಂದುವರಿಸುವ ನಿರೀಕ್ಷೆಯಿದೆ.

English summary
Income tax department has found income discrepancy worth Rs 650 crore after IT raids on Taapsee Pannu and Anurag Kashyap.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X