ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈದರಾಬಾದ್ ಮೂಲದ ಇನ್ಫಿ ಟೆಕ್ಕಿ ಶವ ಲೋನಾವಾಲ ಕಣಿವೆಯಲ್ಲಿ ಪತ್ತೆ

|
Google Oneindia Kannada News

ಪುಣೆ, ಸೆ. 16: ಪುಣೆಯ ಹಿಂಜೆವಾಡಿ ಐಟಿ ಪಾರ್ಕಿನ ಇನ್ಫೋಸಿಸ್ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 24 ವರ್ಷ ವಯಸ್ಸಿನ ಹೈದರಾಬಾದ್ ಮೂಲದ ಮಹಿಳಾ ಟೆಕ್ಕಿ ಶವ ಕೊನೆಗೂ ಪತ್ತೆಯಾಗಿದೆ. ಲೋನಾವಾಲದ ಕಣಿವೆಯಲ್ಲಿ ನಾಪತ್ತೆಯಾಗಿದ್ದ ಅಲಿಜಾ ರಾಣಾರನ್ನು ಹುಡುಕುವಲ್ಲಿ 32 ಮಂದಿ ಟ್ರೆಕ್ಕರ್ಸ್ ನೆರವಾಗಿದ್ದಾರೆ.

ಟೆಕ್ಕಿ ಶುಭಶ್ರೀ ಸಾವಿನ ಕೊನೆಯ ಕ್ಷಣಗಳು ಕ್ಯಾಮರಾದಲ್ಲಿ ಸೆರೆಟೆಕ್ಕಿ ಶುಭಶ್ರೀ ಸಾವಿನ ಕೊನೆಯ ಕ್ಷಣಗಳು ಕ್ಯಾಮರಾದಲ್ಲಿ ಸೆರೆ

ಲೋನಾವಾಲಾದ ಲಯನ್ಸ್ ಪಾಯಿಂಟ್‌ ಸೆ.12ರಂದು ಬಂದಿದ್ದ ರಾಣಾ ನಂತರ ನಾಪತ್ತೆಯಾಗಿದ್ದರು. ಹತ್ತಿರದಲ್ಲೇ ಆಕೆ ಬ್ಯಾಗ್ ಸಿಕ್ಕಿತ್ತು. ಸ್ಥಳೀಯ ಚಾರಣಿಗರ ಸಹಾಯದಿಂದ ಕಾರ್ಯಾಚರಣೆ ಆರಂಭಿಸಿದ ಪೊಲೀಸರಿಗೆ ಸುಮಾರು 90 ಗಂಟೆಗಳ ಕಾರ್ಯಾಚರಣೆ ನಂತರ ಸುಮಾರು 300 ಅಡಿ ಆಳದ ಕಣಿವೆಯಲ್ಲಿ ಸಿಕ್ಕಿದೆ.

ಶುಭಶ್ರೀ, ರಘು ಬಲಿಯಾಗಿದ್ದು ಒಂದೇ ರೀತಿ! ಮರುಕಳಿಸಿತು ಅದೇ ದೃಶ್ಯಶುಭಶ್ರೀ, ರಘು ಬಲಿಯಾಗಿದ್ದು ಒಂದೇ ರೀತಿ! ಮರುಕಳಿಸಿತು ಅದೇ ದೃಶ್ಯ

ಶಿವದುರ್ಗ್ ಮಿತ್ರ ಟೆಕ್ಕಿಂಗ್ ಗುಂಪಿನ 32 ಟ್ರೆಕ್ಕರ್ ಗಳ ನೆರವಿನಿಂದ ಲಯನ್ಸ್ ಪಾಯಿಂಟ್ ನಿಂದ ಶೋಧ ಕಾರ್ಯ ಆರಂಭಿಸಲಾಯಿತು. ಸತತ ಮಳೆ, ಮಂಜು ಮುಸುಕಿದ ವಾತಾವರಣದಲ್ಲಿ ಹುಡುಕಾಟ ಕಷ್ಟವಾಗಿತ್ತು. ಭಾನುವಾರದಂದು ರಾಹುಲ್ ದೇಶ್ ಮುಖ್ ಹಾಗೂ ಪ್ರಣಾಯ್ ಅಂಬೋರೆ ಎಂಬ ಇಬ್ಬರು ಯುವಕರು rappelling ಮೂಲಕ ಹಗ್ಗದ ನೆರವು, ವಾಕಿ ಟಾಕಿ ಸಂಪರ್ಕದ ಮೂಲಕ ಕಣಿವೆ ಆಳಕ್ಕಿಳಿದು ಹುಡುಕಿದಾಗ ರಾಣಾ ಶವ ಪತ್ತೆಯಾಗಿದೆ. ಸುಮಾರು 3 ಗಂಟೆಗಳ ಕಾಲ ಕಾರ್ಯಾಚರಣೆ ಬಳಿಕ ಶವವನ್ನು ಮೇಲಕ್ಕೆತ್ತಲಾಗಿದೆ.

Hyderabad based Pune Techie found dead in Lonavala Valley

ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ಲೋನಾವಾಲ ಪೊಲೀಸರು ಈಗ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಸಾವಿಗೆ ನಿಖರ ಕಾರಣ ಕಂಡು ಬಂದಿಲ್ಲ, ಕಾಲು ಜಾರಿ ಕಣಿವೆಗೆ ಬಿದ್ದಿರಬಹುದು, ಆತ್ಮಹತ್ಯೆ ಮಾಡಿಕೊಂಡಿರಬಹುದು, ಈ ಬಗ್ಗೆ ಆಕೆ ಸಹದ್ಯೋಗಿ, ಕುಟುಂಬಸ್ಥರ ಹೇಳಿಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಹೇಳಿದ್ದಾರೆ.

English summary
The body of a software engineer, 24, from Hyderabad, who worked in a Pune-based IT company, was found in a valley around 300-ft deep in Lonavala on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X