• search
  • Live TV
ಪುಣೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹರಪ್ಪದಲ್ಲಿ ಸಿಕ್ಕರು ಪ್ರಾಚೀನ ನಾಗರಿಕತೆಯ ದಂಪತಿ!

|

ಪುಣೆ, ಜನವರಿ 9: ನಾಗರಿಕತೆಯ ಹುಟ್ಟಿನ ಆರಂಭದಲ್ಲಿಯೇ ಆಧುನಿಕತೆಯನ್ನು ಅಳವಡಿಸಿಕೊಂಡಿದ್ದ ಹರಪ್ಪ ನಾಗರಿಕತೆ ಇಂದಿಗೂ ಅಚ್ಚರಿಯ ತಾಣ. ಪುಣೆಯ ಡೆಕ್ಕನ್ ಕಾಲೇಜ್ ಡೀಮ್ಡ್ ವಿಶ್ವವಿದ್ಯಾಲಯದ ಪುರತತ್ವ ತಜ್ಞರು ಹರಪ್ಪಾ ನೆಲದಲ್ಲಿ ಹೊಸ ವಿಶೇಷವೊಂದನ್ನು ಪತ್ತೆ ಹಚ್ಚಿದ್ದಾರೆ.

ಇದೇ ಮೊದಲ ಬಾರಿಗೆ ಹರಪ್ಪದಲ್ಲಿ ಜೋಡಿಯೊಂದರ ಅಸ್ತಿಪಂಜರ ಪತ್ತೆಯಾಗಿದೆ. ಇದುವರೆಗೂ ಅಲ್ಲಿ ಒಂದೊಂದು ಅಸ್ತಿಪಂಜರ ಮಾತ್ರ ಸಿಗುತ್ತಿದ್ದವು.

ನಂದಿ ಬೆಟ್ಟದ ತಪ್ಪಲ್ಲಿನಲ್ಲಿರುವ ಭೋಗ ನಂದೀಶ್ವರ ದೇವಸ್ಥಾನ

ಈ ಜೋಡಿ ಅಸ್ತಿಪಂಜರ ಪುರುಷ ಮತ್ತು ಮಹಿಳೆಯದ್ದಾಗಿದ್ದು, ಪುರುಷನ ಮುಖವು ಮಹಿಳೆಯ ಕಡೆಗೆ ತಿರುಗಿಕೊಂಡಿದೆ. ಎರಡೂ ಅಸ್ತಿಪಂಜರಗಳ ಕೈಕಾಲುಗಳು ನೇರವಾಗಿ ಚಾಚಿಕೊಂಡ ಸ್ಥಿತಿಯಲ್ಲಿವೆ.

ಹರಪ್ಪ ನಾಗರಿಕತೆಯಲ್ಲಿನ ಸ್ಮಶಾನದಲ್ಲಿ ಈ ರೀತಿಯ ಜಂಟಿ ಅಂತ್ಯಸಂಸ್ಕಾರದ ನಿದರ್ಶನ ಇದುವರೆಗೂ ದೊರೆತಿರಲಿಲ್ಲ. ಈ ಜೋಡಿ ಅಸ್ತಿಪಂಜರಗಳು ಹರಿಯಾಣದ ರಖಿಗರಿಯಲ್ಲಿನ ಹರಪ್ಪ ನೆಲದಲ್ಲಿ ಕಂಡುಬಂದಿವೆ.

ಈ ಜೋಡಿಯನ್ನು ಒಮ್ಮೆಲೆ ಅಥವಾ ಒಂದೇ ಸಮಯದಲ್ಲಿ ಹೂಳಿರಬಹುದು ಎಂದು ಪುರತತ್ವ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ಹೆಸರು ಬಂದಿದ್ದರ ಹಿಂದಿದೆ ರೋಚಕ ಇತಿಹಾಸ

ಇದುವರೆಗೂ ಅನೇಕ ಸಮಾಧಿಗಳನ್ನು ಮತ್ತು ಸ್ಮಶಾನಗಳನ್ನು ಪತ್ತೆಹಚ್ಚಿ ಅಧ್ಯಯನ ನಡೆಸಿದ್ದರೂ ಹರಪ್ಪದಲ್ಲಿ ಜೋಡಿ ಸಮಾಧಿ ಸಿಕ್ಕಿರಲಿಲ್ಲ.

ಹರಪ್ಪದಲ್ಲಿ ಡೆಕ್ಕನ್ ಕಾಲೇಜ್ ಮತ್ತು ಕೊರಿಯಾದ ಸೋಲ್‌ನಲ್ಲಿರುವ ಸೋಲ್ ರಾಷ್ಟ್ರೀಯ ಔಷಧ ವಿಶ್ವವಿದ್ಯಾಲಯ ಕಾಲೇಜಿನ ವಿಧಿವಿಜ್ಞಾನ ಸಂಸ್ಥೆಗಳು ಉತ್ಖನನ ಮತ್ತು ಅಧ್ಯಯನ ಕಾರ್ಯ ನಡೆಸುತ್ತಿವೆ.

ಹರಪ್ಪದ ಜನರು ಸಾವಿನ ನಂತರವೂ ಬದುಕು ಇದೆ ಎಂದು ನಂಬಿದ್ದರು. ಹೀಗಾಗಿ ಸಮಾಧಿಗಳಲ್ಲಿ ಬಿಂದಿಗೆ ಮತ್ತು ಬಟ್ಟಲುಗಳು ಇರುತ್ತಿದ್ದವು. ಬಟ್ಟಲಿನಲ್ಲಿ ಆಹಾರ ಹಾಗೂ ಬಿಂದಿಗೆಯಲ್ಲಿ ನೀರು ತುಂಬಿರುತ್ತಿದ್ದರು ಎನಿಸುತ್ತದೆ. ಸಾವಿನ ನಂತರವೂ ಅವರಿಗೆ ಇವುಗಳ ಅಗತ್ಯ ಇರುತ್ತದೆ ಎಂಬ ನಂಬಿಕೆಯೊಂದಿಗೆ ಈ ಆಚರಣೆ ನಡೆಸುತ್ತಿದ್ದರು. 5000 ವರ್ಷಗಳ ಬಳಿಕದ ಆಧುನಿಕ ಯುಗದಲ್ಲಿಯೂ ಸಾವಿನ ನಂತರದ ಬದುಕಿನ ಬಗ್ಗೆ ನಂಬಿಕೆ ಉಳಿದಿದೆ ಎಂದು ಡೆಕ್ಕನ್ ಕಾಲೇಜ್ ವಿವಿಯ ಉಪ ಕುಲಪತಿ ವಸಂತ್ ಶಿಂಧೆ ತಿಳಿಸಿದ್ದಾರೆ.

ಚಿತ್ರದಲ್ಲಿ: ಮೈಸೂರಿನ ಅಂಬಾವಿಲಾಸ ಅರಮನೆ ಇತಿಹಾಸ, ವೈಭವ

ಈ ಜೋಡಿ ಅವರ ಪ್ರೀತಿ ಸಾವಿನ ಬಳಿಕವೂ ಶಾಶ್ವತವಾಗಿ ಉಳಿಯಬೇಕು ಎಂಬ ಉದ್ದೇಶದಿಂದ ಒಟ್ಟಿಗೆ ಹೂಳಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮಹಿಳೆ 21 ಮತ್ತು ಪುರುಷ 35 ವರ್ಷದವರಾಗಿರಬಹುದು ಎಂದು ಅಂದಾಜಿಸಲಾಗಿದೆ. ಅಸ್ತಿಪಂಜರಗಳನ್ನು ಅಧ್ಯಯನ ಮಾಡಿದ ತಜ್ಞರಿಗೆ ಯಾವುದೇ ಗಾಯ ಅಥವಾ ಸಮಸ್ಯೆಯ ಕುರುಹು ಸಿಕ್ಕಿಲ್ಲ. ಹೀಗಾಗಿ ಅವರ ಸಾವಿಗೆ ಕಾರಣ ಏನಿರಬಹುದು ಎನ್ನುವುದು ಪತ್ತೆಯಾಗಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Archaeologists have discovered two skeletons in Harappa civilization, claimed that this is the first of couple's burials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more