ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಣೆಯ ಈ ಇಂಜಿನಿಯರ್ ಗೆ ಕಾಂಗ್ರೆಸ್ ನ ಮುಂದಿನ ಅಧ್ಯಕ್ಷನಾಗುವಾಸೆ!

|
Google Oneindia Kannada News

ಪುಣೆ, ಜುಲೈ 22: ರಾಹುಲ್ ಗಾಂಧಿ ರಾಜೀನಾಮೆಯ ನಂತರ ತೆರವಾಗಿರುವ ಅಧ್ಯಕ್ಷ ಸ್ಥಾನಕ್ಕೆ ತಾನೋರ್ವ ಆಕಾಂಕ್ಷಿ ಎಂದು ಪುಣೆಯ ಇಂಜಿನಿಯರ್ ವೊಬ್ಬರು ಹೇಳಿದ್ದಾರೆ!

ಪುಣೆಯಲ್ಲಿರುವ ಬೆಂಗಳೂರು ಮೂಲದ ಕಂಪನಿಯೊದರಲ್ಲಿ ಕೆಲಸ ಮಾಡುತ್ತಿರುವ ಗಜಾನಂದ ಹೊಸಳೆ ಎಂಬ ಇಲೆಕ್ಟ್ರಾನಿಕ್ಸ್ ಇಂಜಿನಿಯರ್ ತಾವು ಕಾಂಗ್ರೆಸ್ ನ ಪುನರುಜ್ಜೀವನಗೊಳಿಸುವುದಾಗಿ ಹೇಳಿದ್ದಾರೆ. ಪುಣೆಯ ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ರಮೇಶ್ ಭಾಗ್ವೆ ಅವರಿಗೆ ಜುಲೈ 23 ರಂದು ಗಜಾನಂದ್ ತಮ್ಮ ಅರ್ಜಿಯನ್ನು ನೀಡಲಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷಸ್ಥಾನ: ಪ್ರಿಯಾಂಕಾ ಸೂಕ್ತ ಎಂದ ನಟ್ವರ್ ಸಿಂಗ್ಕಾಂಗ್ರೆಸ್ ಅಧ್ಯಕ್ಷಸ್ಥಾನ: ಪ್ರಿಯಾಂಕಾ ಸೂಕ್ತ ಎಂದ ನಟ್ವರ್ ಸಿಂಗ್

'ರಾಹುಲ್ ಗಾಂಧಿ ಅವರೇ ಹೇಳಿರುವಂತೆ ಪಕ್ಷಕ್ಕೆ ಯುವ ನಾಯಕರು ಬೇಕು. ನನ್ನ ಪ್ರಕಾರ ಕೇವಲ ವಯಸ್ಸಿನಲ್ಲಿ ಮಾತ್ರವಲ್ಲ, ಹೃದಯದಲ್ಲೂ ಯುವಕರಾಗಿರುವಂಥವರ ನಾಯಕತ್ವ ಬೇಕು, ಉತ್ತಮ ಆಲೋಚನೆ ಹೊಂದಿರುವವರು ಬೇಕು' ಎಂದು ಗಜಾನಂದ್ ಹೇಳಿದ್ದಾರೆ.

Gajanand Hosale, Pune engineer wants to be next Congress chief

ಈಗಾಗಲೇ ಪಕ್ಷಕ್ಕೆ ಯಾರೂ ಅಧ್ಯಕ್ಷರಿಲ್ಲದಿರುವುದರಿಂದ ಕಾರ್ಯಕರ್ತರೆಲ್ಲ ಬೇರೆ ಪಕ್ಷದತ್ತ ವಾಲುತ್ತಿದ್ದಾರೆ. ಆದಷ್ಟು ಬೇಗ ಅಧ್ಯಕ್ಷರ ಆಯ್ಕೆ ನಡೆಯಬೇಕು ಎಂದು ಅವರು ಹೇಳಿದರು.

'ಗಾಂಧಿ' ಅಧ್ಯಕ್ಷರಾಗದಿದ್ದರೆ ಕಾಂಗ್ರೆಸ್ ಭವಿಷ್ಯ ಅಯೋಮಯ: ಶಾಸ್ತ್ರಿ ಪುತ್ರ 'ಗಾಂಧಿ' ಅಧ್ಯಕ್ಷರಾಗದಿದ್ದರೆ ಕಾಂಗ್ರೆಸ್ ಭವಿಷ್ಯ ಅಯೋಮಯ: ಶಾಸ್ತ್ರಿ ಪುತ್ರ

ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಕಳಪೆ ಪ್ರದರ್ಶನದಿಂದಾಗಿ ರಾಹುಲ್ ಗಾಂಧಿ ಅವರು ಅಧ್ಯಕ್ಷ ಸ್ಥಾನ ತೊರೆದರು. ಆದರೆ ನಂತರ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ಆಯ್ಕೆ ಮಂಆಡಬೇಕು ಎಂಬ ಬಗ್ಗೆ ಕಾಂಗ್ರೆಸ್ ನಲ್ಲಿ ಇನ್ನೂ ಗೊಂದಲವಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ರಾಹುಲ್ ಗಾಂಧಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಬೇಕು ಎಂಬ ಮಾತುಗಳು ಕೇಳಿಬರುತ್ತಿವೆ. ಗಾಂಧಿ ಕುಟುಂಬದ ಹೊರಗಿನವರನ್ನು ಈ ಸ್ಥಾನದಲ್ಲಿ ಕೂರಿಸಿದರೆ ಪಕ್ಷದಲ್ಲಿ ಬಿರುಕು ಮೂಡುತ್ತದೆ ಎಂಬ ಅಭಿಪ್ರಾಯವನ್ನು ಹಿರಿಯ ಮುಖಂಡರೂ ವ್ಯಕ್ತಪಡಿಸಿದ್ದಾರೆ.

English summary
A 28 year old electronics engineer from Pune, Gajanand Hosale wants to be next Congress chief. He will be applying for the post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X