ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದಲ್ಲಿ ಐದು ಅಂತಸ್ತಿನ ಕಟ್ಟಡ ಕುಸಿತ: 70ಕ್ಕೂ ಹೆಚ್ಚು ಮಂದಿ ಅಡಿಗೆ ಸಿಲುಕಿರುವ ಶಂಕೆ

|
Google Oneindia Kannada News

ರಾಯಗಡ, ಆಗಸ್ಟ್ 24: ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ ಸೋಮವಾರ ಮಧ್ಯಾಹ್ನ ಐದು ಮಹಡಿಯ ಕಟ್ಟಡವೊಂದು ಕುಸಿದು ಅವಘಡ ಸಂಭವಿಸಿದೆ. ಕಟ್ಟಡದ ಅವಶೇಷಗಳ ಅಡಿ ಅನೇಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ಮತ್ತು ರಕ್ಷಣಾ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿದ್ದು, ಅವಶೇಷಗಳನ್ನು ತೆರವುಗೊಳಿಸಿ ಅಡಿಯಲ್ಲಿ ಸಿಲುಕಿರುವ ಜನರನ್ನು ಹೊರತೆಗೆಯುವ ಪ್ರಯತ್ನ ನಡೆಸಿದ್ದಾರೆ.

ರಾಯಗಡ ಜಿಲ್ಲೆಯ ಕಾಜಲ್‌ಪುರ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ. ಈಘಟನೆಯಲ್ಲಿ ಎಷ್ಟು ಜನರಿಗೆ ಗಾಯಗಳಾಗಿವೆ, ಸಾವು ಸಂಭವಿಸಿವೆಯೇ ಎನ್ನುವುದು ಇನ್ನೂ ಖಚಿತವಾಗಿಲ್ಲ. ಆದರೆ ಘಟನಾ ಸ್ಥಳದಿಂದ ಹತ್ತಾರು ಜನರನ್ನು ಹೊರತೆಗೆದು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಿದ ದೃಶ್ಯಗಳು ಕಂಡುಬಂದಿವೆ.

ಬೆಂಗಳೂರು; ಮೆಜೆಸ್ಟಿಕ್‌ನಲ್ಲಿ ಕಟ್ಟಡ ಕುಸಿತ, ಮಾಲೀಕನ ವಿರುದ್ಧ ಕೇಸ್ಬೆಂಗಳೂರು; ಮೆಜೆಸ್ಟಿಕ್‌ನಲ್ಲಿ ಕಟ್ಟಡ ಕುಸಿತ, ಮಾಲೀಕನ ವಿರುದ್ಧ ಕೇಸ್

ಕಟ್ಟಡದ ಅವಶೇಷಗಳ ಅಡಿಯಿಂದ ಸುಮಾರು 15 ಜನರನ್ನು ಹೊರತೆಗೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಸುಮಾರು 70-80 ಜನರು ಇನ್ನೂ ಅವಶೇಷಗಳ ಅಡಿ ಸಿಲುಕಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಇದು ಆರು ವರ್ಷಗಳಷ್ಟು ಹಳೆಯದಾದ ಕಟ್ಟಡವಾಗಿದೆ. ಪ್ರದೇಶದಲ್ಲಿ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಈ ಕಟ್ಟಡ ಕುಸಿತ ಉಂಟಾಗಿದೆ ಎಂದು ನಂಬಲಾಗಿದೆ.

Five Storey Building Collapses In Maharashtras Raigad

ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್‌ನ ಮೂರು ತಂಡಗಳು ಮತ್ತು ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

English summary
A Five storey building collapsed in Raigad, Maharashtra on Monday afternoon. over 70 people feared trapped under debris.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X