ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲು ಆಂಬ್ಯುಲೆನ್ಸ್ ಚಾಲಕನಾದ ವೈದ್ಯ

|
Google Oneindia Kannada News

ಪುಣೆ, ಆಗಸ್ಟ್ 28: ಕೊರೊನಾ ಸೋಂಕಿಗೆ ತುತ್ತಾಗಿ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ವೃದ್ಧರೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯಲು ವೈದ್ಯರೇ ಆಂಬ್ಯುಲೆನ್ಸ್‌ನ ಚಾಲಕರಾದ ಘಟನೆ ಪುಣೆಯಲ್ಲಿ ನಡೆದಿದೆ.

Recommended Video

China ತನ್ನ ಲಸಿಕೆಯನ್ನು ಕೊಡಲು ಹಾಕಿದ ಕಂಡೀಷನ್ ಏನು ? | Oneindia Kannada

ಅವರ ಮಹತ್‌ ಕಾರ್ಯಕ್ಕೆ ಎಲ್ಲೆಡೆಯಿಂದ ಪ್ರಶಂಸೆಯ ಸುರಿಮಳೆಯೇ ಸುರಿಯುತ್ತಿದೆ. ಕೊವಿಡ್ ಕೇರ್ ಸೆಂಟರ್ ನಲ್ಲಿದ್ದ 71 ವರ್ಷದ ವೃದ್ಧನ ಆರೋಗ್ಯ ಗಂಭೀರವಾಗ ಹಿನ್ನೆಲೆಯಲ್ಲಿ ಡಾ. ರಂಜಿತ್ ಅವರು ಕೂಡಲೇ ಆಂಬುಲನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಭಾರತದಲ್ಲಿ 24 ಗಂಟೆಗಳಲ್ಲೇ 77266 ಜನರಿಗೆ ಕೊರೊನಾವೈರಸ್! ಭಾರತದಲ್ಲಿ 24 ಗಂಟೆಗಳಲ್ಲೇ 77266 ಜನರಿಗೆ ಕೊರೊನಾವೈರಸ್!

ಕೊವಿಡ್ ಕೇರ್ ಸೆಂಟರ್ ನಲ್ಲಿ ಒಂದು ಆಂಬುಲೆನ್ಸ್ ವ್ಯಾನ್ ಇದೆ. ಆದರೆ ಅದರ ಚಾಲಕ ಕೆಲವೇ ಗಂಟೆಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದರು. ಆ ಸ್ಥಿತಿಯಲ್ಲಿ ವ್ಯಾನ್ ಓಡಿಸಲು ಅವರನ್ನು ಕೇಳುವುದು ಸೂಕ್ತವಲ್ಲ.

Doctor Turns Driver Of Ambulance For Critical Patient

ಆದ್ದರಿಂದ ನಾವು '108' ತುರ್ತು ಆಂಬುಲೆನ್ಸ್ ಸೇವೆಗೆ ಕರೆ ಮಾಡಿದೇವು. ಆದರೆ ಕರೆ ಸಂಪರ್ಕಗೊಳ್ಳಲಿಲ್ಲ. ನಾವು ಇನ್ನೊಬ್ಬ ಚಾಲಕನಿಗೆ ಸಹ ಕರೆ ಮಾಡಿದ್ದೇವೆ ಆದರೆ ಅವನು ಸಹ ತಲುಪಲಿಲ್ಲ. ಹೀಗಾಗಿ ನಾನೇ ಚಾಲನೆ ಮಾಡಿದೆ ಎಂದು ನಿಕಮ್ ತಿಳಿಸಿದ್ದಾರೆ.

ಆಂಬುಲೆನ್ಸ್ ಚಾಲಕ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ಮತ್ತು ರೋಗಿಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಯಾರೂ ಇಲ್ಲದಿರುವುದರಿಂದ, ರೋಗಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ದೊರೆಯುವುದನ್ನು ಖಚಿತಪಡಿಸಿಕೊಳ್ಳಲು ಡಾ. ರಂಜೀತ್ ನಿಕಮ್ ಅವರು ತಾವೇ ಆಂಬುಲನ್ಸ್ ಚಾಲನೆ ಮಾಡಿದ್ದಾರೆ. ಅವರಿಗೆ ವೈದ್ಯ ರಾಜೇಂದ್ರ ರಾಜ್‌ಪುರೋಹಿತ್ ಅವರು ಕೂಡ ಸಹಾಯ ಮಾಡಿದ್ದರು.

English summary
A 30-year-old doctor is being hailed as a real "COVID warrior" after he drove an ambulance to ferry a critically ill elderly coronavirus patient to a hospital from a care centre here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X