ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ 19 ಪಿಪಿಇ ತ್ಯಾಜ್ಯಗಳಿಂದ ಉಪಯುಕ್ತ ಉತ್ಪನ್ನ ತಯಾರಿ

|
Google Oneindia Kannada News

ಪುಣೆ, ಸೆಪ್ಟೆಂಬರ್ 24: ಪುಣೆಯಲ್ಲಿನ ಸಿಎಸ್‌ಐಆರ್ - ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯ (ಸಿಎಸ್‌ಐಆರ್-ಎನ್‌ಸಿಎಲ್), ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ ಐ ಎಲ್) ಮತ್ತು ಇತರೆ ಕೆಲವು ಕಂಪೆನಿಗಳ ಜತೆಗೂಡಿ ಕೋವಿಡ್ -19 ಪಿಪಿಇ ತ್ಯಾಜ್ಯವನ್ನು ಬಳಸಿಕೊಂಡು ಉಪಯೋಗಕಾರಿ ಪ್ಲಾಸ್ಟಿಕ್ ವಸ್ತುಗಳನ್ನು ತಯಾರಿಸುವ ಮಹತ್ವದ ಸಾಧನೆ ಮಾಡಿದೆ. ಈ ಪ್ರಾಯೋಗಿಕ ಯೋಜನೆಯು, ದೇಶಾದ್ಯಂತ ಪಿಪಿಇ ತ್ಯಾಜ್ಯಗಳನ್ನು ಉಪಯುಕ್ತ ಹಾಗೂ ಸುರಕ್ಷಿತ ಉತ್ಪನ್ನಗಳನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಬೆಳವಣಿಗೆ ಹೊಂದುವಷ್ಟು ಸಮೃದ್ಧವಾಗಿದೆ.

ಪರ್ಸನಲ್ ಪ್ರೊಟೆಕ್ಟಿವ್ ಎಕ್ವಿಪ್‌ಮೆಂಟ್ (ಪಿಪಿಇ), ಮಾಸ್ಕ್, ಗ್ಲೋವ್ಸ್ ಮುಂತಾದ ಏಕಬಳಕೆಯ ಪ್ಲಾಸ್ಟಿಕ್ ವಸ್ತುಗಳಿಗೆ ಬೇಡಿಕೆ ಗಣನೀಯವಾಗಿ ಹೆಚ್ಚುತ್ತಿರುವುದನ್ನು ಕೋವಿಡ್ 19 ಸಾಂಕ್ರಾಮಿಕ ಆರಂಭವಾದ ಸಂದರ್ಭದಿಂದಲೂ ಕಾಣುತ್ತಿದ್ದೇವೆ. 2021ರ ಮೇ ತಿಂಗಳಲ್ಲಿ ಭಾರತದೆಲ್ಲೆಡೆ, ಪ್ರತಿದಿನವೂ 200 ಟನ್‌ಗಳಿಗೂ ಅಧಿಕ ಕೋವಿಡ್ 19 ಸಂಬಂಧಿತ ತ್ಯಾಜ್ಯ ಸೃಷ್ಟಿಯಾಗಿತ್ತು. ಇದುವರೆಗೂ ಈ ಅಪಾಯಕಾರಿ ಪಿಪಿಇ ತ್ಯಾಜ್ಯವನ್ನು ಕೇಂದ್ರ ತ್ಯಾಜ್ಯ ನಿರ್ವಹಣಾ (ಬಿಎಂಡಬ್ಲ್ಯೂಎಂ) ಕೇಂದ್ರಗಳಲ್ಲಿ ಸುಟ್ಟುಹಾಕಲಾಗುತ್ತಿದೆ. ಈ ಸುಡುವ ಪ್ರಕ್ರಿಯೆಯು ಭಾರಿ ಶಕ್ತಿಯನ್ನು ಬಳಸುತ್ತದೆ ಮತ್ತು ಹಾನಿಕಾರಕ ಹಸಿರುಮನೆ ಅನಿಲಗಳನ್ನು ಬಿಡುಗಡೆ ಮಾಡಲು ಕಾರಣವಾಗುತ್ತದೆ.

ಸಿಎಸ್‌ಐಆರ್-ಎನ್‌ಸಿಎಲ್, ಆರ್ ಐ ಎಲ್ ಮತ್ತು ಇತರೆ ಕಂಪೆನಿಗಳು ಕೋವಿಡ್ 19 ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಮೌಲ್ಯವರ್ಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ಉತ್ಪಾದಿಸುವುದಕ್ಕಾಗಿ ಪರಿಣಾಮಕಾರಿ ಮರುಬಳಕೆಗೆ ಎಂಡ್-ಟು-ಎಂಡ್ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ರೂಪಿಸಿಕೊಂಡಿವೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಕೆಳಹಂತದ ಸಂಸ್ಕರಣೆಗಳಿಗೆ ಪೂರಕವಾಗುವಂತೆ ಪರಿವರ್ತಿಸುವುದರತ್ತ ಗಮನ ಹರಿಸಲು ಮತ್ತು ಸಂಪೂರ್ಣ ಪೂರೈಕೆ ಸರಪಣಿಗೆ ಮೌಲ್ಯ ಸೃಷ್ಟಿಸಲು ಸೂಕ್ತ ಮಾರಾಟಗಾರರು/ಮಾರುಕಟ್ಟೆಯನ್ನು ಗುರುತಿಸಲು ಪ್ರಯತ್ನಿಸುತ್ತಿವೆ.

CSIR-NCL and RIL to make products from COVID-19 PPE waste

ಆರಂಭಿಕ ಅಧ್ಯಯನದಲ್ಲಿ , ಸಿಎಸ್‌ಐಆರ್-ಎನ್‌ಸಿಎಲ್ ತಂಡವು ಶುದ್ಧೀಕರಿಸಿದ ಪಿಪಿಇ ಪ್ಲಾಸ್ಟಿಕ್ ತ್ಯಾಜ್ಯಗಳಿಂದ (ಎಂ/ಎಸ್ ನಿಕಿ ಪ್ರೆಸಿಷನ್ ಎಂಜಿನಿಯರ್ಸ್, ಪುಣೆಯಲ್ಲಿ) ಭಾರತದ ನಗರಗಳಲ್ಲಿ ಲಭ್ಯವಿರುವ ಸಂಸ್ಕರಣಾ ಮೂಲಸೌಕರ್ಯಗಳ ಮೂಲಕ ಲ್ಯಾಬ್ ಪ್ರಮಾಣದ ಆಟೋಮೋಟಿವ್ ಉತ್ಪನ್ನಗಳ ಉತ್ಪಾದನೆಯನ್ನು ಯಶಸ್ವಿಯಾಗಿ ಪ್ರದರ್ಶಿಸಿತ್ತು.

ಸಿಎಸ್‌ಐಆರ್-ಎನ್‌ಸಿಎಲ್ ಮತ್ತು ಆರ್ ಐ ಎಲ್ ಈಗ ಒಡಂಬಡಿಕೆಯೊಂದಕ್ಕೆ ಸಹಿ ಹಾಕಿದ್ದು, ಪ್ರಾಯೋಗಿಕ ಉತ್ಪಾದನೆಯ ಪರಿಕಲ್ಪನೆಯನ್ನು ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ಯಲು ಹಾದಿ ಸುಗಮಗೊಳಿಸುವ ಮೂಲಕ ದೊಡ್ಡ ಮಟ್ಟದಲ್ಲಿ ಉತ್ಪಾದನೆಗೆ ಮುಂದಾಗಿದೆ. ಪುಣೆ ನಗರ ಪ್ರದೇಶದಲ್ಲಿ 100 ಕೆಜಿಗಳ ಪ್ರಾಯೋಗಿಕ ಪ್ರಮಾಣವನ್ನು, ಮೌಲ್ಯ ವರ್ಧಿತ ಉತ್ಪನ್ನಗಳನ್ನು ತಯಾರಿಸುವ ಪುಣೆ ಮೂಲದ ಕಂಪೆನಿಗಳು, ಎಪಿಪಿಎಲ್ ಇಂಡಸ್ಟ್ರೀಸ್ ಲಿಮಿಟೆಡ್, ಎಸ್‌ಕೆವೈಐ ಕಂಪೋಸಿಟ್ಸ್, ಜೈ ಹಿಂದ್ ಆಟೋಟೆಕ್ ಪ್ರೈ.ಲಿ ಸಹಭಾಗಿತ್ವದಲ್ಲಿ ಯಶಸ್ವಿಯಾಗಿ ಅಳವಡಿಸಿದೆ. ಪಿಪಿಇ ಕಿಟ್‌ಗಳನ್ನು ಪುಣೆಯಲ್ಲಿನ ತ್ಯಾಜ್ಯ ನಿರ್ವಹಣಾ ಕಂಪೆನಿ ಪಾಸ್ಕೋ ಎನ್ವಿರಾನ್‌ಮೆಂಟಲ್ ಸೊಲ್ಯೂಷನ್ಸ್ ಮೂಲಕ ಸಂಗ್ರಹ ಮತ್ತು ಶುದ್ಧೀಕರಿಸಲಾಗುತ್ತಿದೆ. ಈ ಪ್ರಾಯೋಗಿಕ ಯೋಜನೆಯನ್ನು ಪೂರ್ಣಗೊಳಿಸಲು ಅಗತ್ಯವಿರುವ ಎಲ್ಲ ಶಾಸನಬದ್ಧ ಅನುಮತಿಗಳನ್ನು ಮಹಾರಾಷ್ಟ್ರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ (ಎಂಪಿಸಿಬಿ) ಸಿಎಸ್‌ಐಆರ್-ಎನ್‌ಸಿಎಲ್ ಪಡೆದುಕೊಂಡಿದೆ.

CSIR-NCL and RIL to make products from COVID-19 PPE waste

ರಿಲಯನ್ಸ್ ಮತ್ತು ಡೆಹ್ರಾಡೂನ್‌ನ ಸಿಎಸ್‌ಐಆರ್- ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂ (ಸಿಎಸ್‌ಐಆರ್-ಐಐಪಿ) ನೆರವಿನೊಂದಿಗೆ, ಸಿಎಸ್‌ಐಆರ್-ಎನ್‌ಸಿಎಲ್‌ ತಾಂತ್ರಿಕ ಪಯಣಕ್ಕೆ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯಿಂದ ಅನುದಾನ ದೊರಕಿದೆ. ಶುದ್ಧೀಕರಿಸಿದ ಪಿಪಿಇ ತ್ಯಾಜ್ಯಗಳನ್ನು (ಮುಖ್ಯವಾಗಿ ಪಿಪಿಇ ಸೂಟ್ ಮತ್ತು ಇತರೆ ವಸ್ತುಗಳು) ಸುಲಭವಾಗಿ ಸಂಸ್ಕರಿಸಬಹುದಾದ ಮತ್ತು ಸೃಜನಾತ್ಮಕ ಪರಿಷ್ಕರಣೆಯ ರೂಪಕ್ಕೆ (ಉಂಡೆ ಅಥವಾ ಕಾಳುಗಳು) ಪರಿವರ್ತಿಸುವುದಕ್ಕೆ ಒತ್ತು ನೀಡಲಾಗಿದೆ.

ಈ ಪ್ರಾಯೋಗಿಕ ಯೋಜನೆಯನ್ನು ಸುಸ್ಥಿರ 'ಹಸಿರು' ಆರ್ಥಿಕತೆಯ ವರ್ತುಲವನ್ನು ನಿರ್ಮಿಸಲು ಭಾರತಾದ್ಯಂತ ಅನುಷ್ಠಾನಗೊಳಿಸಬಹುದಾಗಿದ್ದು, ಇದು ಬಹುತೇಕ ಬಳಕೆಯಾಗದ ವಲಯದಲ್ಲಿನ ಭಾರತದ ಪ್ರಗತಿಯನ್ನು ವೃದ್ಧಿಸಬಹುದು ಮತ್ತು ಸಮಾಜೋ-ಪರಿಸರೀಯ ಗುರಿಗಳಿಗೆ ಕೊಡುಗೆ ನೀಡಬಹುದು.

English summary
Pune based CSIR-NCL and RIL join hands to make useful products from COVID-19 PPE waste.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X