ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಹಿ ಸುದ್ದಿ; ಲಸಿಕೆ ದರವನ್ನು ಕಡಿತಗೊಳಿಸಿದ ಕೋವಿಶೀಲ್ಡ್‌

|
Google Oneindia Kannada News

ಪುಣೆ, ಏಪ್ರಿಲ್ 28; ಕೋವಿಶೀಲ್ಡ್ ಲಸಿಕೆ ಉತ್ಪಾದನೆ ಮಾಡುವ ಸೆರಮ್ ಇನ್ಸ್‌ಟಿಟ್ಯೂಟ್ ಸಿಹಿ ಸುದ್ದಿಯನ್ನು ನೀಡಿದೆ. ಪ್ರತಿ ಡೋಸ್ ಲಸಿಕೆಯ ದರವನ್ನು 400 ರಿಂದ 300 ರೂ.ಗಳಿಗೆ ಇಳಿಕೆ ಮಾಡುವುದಾಗಿ ಘೋಷಣೆ ಮಾಡಿದೆ.

ಸೆರಮ್ ಇನ್ಸ್‌ಟಿಟ್ಯೂಟ್ ಸಿಒಓ ಆಡಾರ್ ಪೂನವಾಲಾ ಬುಧವಾರ ಈ ಕುರಿತು ಟ್ವೀಟ್ ಮಾಡಿದ್ದಾರೆ. "ಲೋಕೋಪಕಾರಿ ಭಾವನೆಯಿಂದ ಪ್ರತಿ ಡೋಸ್‌ಗೆ 400 ರೂ. ಗಳಿಂದ 300 ರೂ.ಗಳಿಗೆ ದರವನ್ನು ಇಳಿಸುತ್ತಿದ್ದೇವೆ" ಎಂದು ಹೇಳಿದ್ದಾರೆ.

ಭಾರತದಲ್ಲಿ ಒಂದೇ ದಿನ 25,56,182 ಜನರಿಗೆ ಕೊರೊನಾವೈರಸ್ ಲಸಿಕೆ ಭಾರತದಲ್ಲಿ ಒಂದೇ ದಿನ 25,56,182 ಜನರಿಗೆ ಕೊರೊನಾವೈರಸ್ ಲಸಿಕೆ

"ಇದು ಸಾವಿರಾರು ಕೋಟಿ ರಾಜ್ಯದ ಹಣವನ್ನು ಉಳಿಸುತ್ತದೆ. ಇದರಿಂದ ಹೆಚ್ಚು ವ್ಯಾಕ್ಸಿನೇಷನ್‌ಗೆ ಅವಕಾಶ ಉಂಟಾಗಿ, ಅಸಂಖ್ಯಾತ ಜೀವಗಳನ್ನು ಉಳಿಸಲು ಸಹಾಯಕವಾಗಲಿದೆ" ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

Infographics: ಕೋವಿಡ್ ಲಸಿಕೆ ಪಡೆಯಲು ಕೋವಿನ್ app ಮೂಲಕ ನೋಂದಣಿ ಹೇಗೆ?Infographics: ಕೋವಿಡ್ ಲಸಿಕೆ ಪಡೆಯಲು ಕೋವಿನ್ app ಮೂಲಕ ನೋಂದಣಿ ಹೇಗೆ?

Covishield Rates Slashed For States Will Be Sold For Rs 300 Per Dose

ಈ ತೀರ್ಮಾನದಿಂದಾಗಿ ಕೋವಿಶೀಲ್ಡ್ ಲಸಿಕೆ ಕೇಂದ್ರ ಸರ್ಕಾರಕ್ಕೆ ಪ್ರತಿ ಡೋಸ್‌ಗೆ 150 ರೂ. ದರದಲ್ಲಿ, ರಾಜ್ಯ ಸರ್ಕಾರಗಳಿಗೆ 300 ರೂ. ನಂತೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ 600 ರೂ.ಗಳ ದರದಲ್ಲಿ ಲಭ್ಯವಾಗಲಿದೆ.

ಕೋವಿಡ್ ಲಸಿಕೆ ಪಡೆಯಲು ಕೋವಿನ್, ಆರೋಗ್ಯ ಸೇತು ಮೂಲಕ ನೋಂದಣಿ ಕೋವಿಡ್ ಲಸಿಕೆ ಪಡೆಯಲು ಕೋವಿನ್, ಆರೋಗ್ಯ ಸೇತು ಮೂಲಕ ನೋಂದಣಿ

ದೇಶದಲ್ಲಿ ಮೇ 1ರಿಂದ 18-45 ವರ್ಷ ವಯೋಮಿತಿಯ ಜನರಿಗೆ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಇದಕ್ಕಾಗಿ ಬುಧವಾರದಿಂದ ನೋಂದಣಿ ಆರಂಭವಾಗಿದೆ.

ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳು ಲಸಿಕೆಯ ವೆಚ್ಚವನ್ನು ತಾವೇ ಭರಿಸಲಿದ್ದು, ಜನರಿಗೆ ಉಚಿತವಾಗಿ ಲಸಿಕೆ ನೀಡುವುದಾಗಿ ಘೋಷಣೆ ಮಾಡಿವೆ. ಈಗ ಲಸಿಕೆ ದರವೂ ಕಡಿಮೆಯಾಗಿದ್ದರಿಂದ ರಾಜ್ಯಗಳಿಗೆ ಸಹಾಯಕವಾಗಲಿದೆ.

ಭಾರತ್ ಬಯೋಟೆಕ್ ಕೋವ್ಯಾಕ್ಸಿನ್ ಲಸಿಕೆಯನ್ನು ಕೇಂದ್ರಕ್ಕೆ 150 ರೂ.ದರದಲ್ಲಿ ನೀಡುತ್ತಿದೆ. ಆದರೆ, ರಾಜ್ಯ ಸರ್ಕಾರಗಳಿಗೆ 600 ರೂ. ಮತ್ತು ಖಾಸಗಿ ಆಸ್ಪತ್ರೆಗಳಿಗೆ 1,200 ರೂ. ದರವನ್ನು ನಿಗದಿ ಮಾಡಲಾಗಿದೆ.

English summary
Pune's Serum Institute of India (SII) has been slashed the vaccine rate for states by 25% per cent and will be sold for Rs 300 per dose now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X