ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೈಬರ್ ದಾಳಿ: ಪುಣೆಯ ಕಾಸ್ಮೊಸ್ ಬ್ಯಾಂಕಿನ ಸರ್ವರ್ ಗೆ ಕನ್ನ

By Mahesh
|
Google Oneindia Kannada News

ಪುಣೆ, ಆಗಸ್ಟ್ 14: ಪುಣೆ ಮೂಲದ ಕಾಸ್ಮೊಸ್ ಬ್ಯಾಂಕಿನ ಸರ್ವರ್ ಮೇಲೆ ಮಾಲ್ವೇರ್ ದಾಳಿ ನಡೆಸಿದ ಹ್ಯಾಕರ್ ಗಳು ಎರಡು ದಿನಗಳಲ್ಲಿ 94 ಕೋಟಿ ರು ದೋಚಿರುವ ಘಟನೆ ನಡೆದಿದೆ.

ಕಾಸ್ಮೊಸ್ ಬ್ಯಾಂಕಿನ ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡುತ್ತಾ ಆಗಸ್ಟ್ 11 ರಿಂದ ಆಗಸ್ಟ್ 13ರ ಅವಧಿಯಲ್ಲಿ ಕೆನಡಾ, ಹಾಂಗ್ ಕಾಂಗ್ ಹಾಗೂ ಭಾರತದಲ್ಲಿರುವ ಬ್ಯಾಂಕಿನ 25ಕ್ಕೂ ಅಧಿಕ ಎಟಿಎಂಗಳಿಂದ ವಂಚಕರು ಹಣ ಡ್ರಾ ಮಾಡಿದ್ದಾರೆ.

ಈ ಸೈಬರ್ ದಾಳಿಯಲ್ಲಿ ಸಾವಿರಾರು ಡೆಬಿಟ್ ಕಾರ್ಡ್ ಗಳ ಮಾಹಿತಿ ಸೋರಿಕೆಯಾಗಿರುವ ಶಂಕೆ ವ್ಯಕ್ತವಾಗಿದೆ. ನ್ಯಾಷನಲ್ ಪೇಮೆಂಟ್ ಕಾರ್ಪೊ ರೇಷನ್ ಆಪ್ಜ್ ಇಂಡಿಯಾ(ಎನ್ ಪಿಸಿಐ) ನ ವ್ಯವಸ್ಥೆಯನ್ನು ನಕಲಿಸಿ ವೀಸಾ ಹಾಗೂ ರುಪೇ ಡೆಬಿಟ್ ಕಾರ್ಡ್ ಗಳನ್ನು ಕ್ಲೋನಿಂಗ್ ಮಾಡಲಾಗಿದೆ. ಎಲ್ಲಾ ವ್ಯವಹಾರಗಳನ್ನು ಹ್ಯಾಕರ್ ಖುದ್ದು ಅಪ್ರೂವ್ ಮಾಡಿಕೊಂಡಿದ್ದು 94 ಕೋಟಿ ರು ಎತ್ತಿದ್ದಾನೆ.

Cosmos Bank’s server hacked, ₹ 94 crore siphoned off

ಘಟನೆ ಬಗ್ಗೆ ಸುಳಿವು ಸಿಕ್ಕ ಬಳಿಕ ಚಾತುಶ್ರಿಂಗಿ ಪೊಲೀಸ್ ಠಾಣೆಯಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 43, 66 (ಸಿ) ಹಾಗೂ 66 (ಡಿ) ಅನ್ವಯ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಫ್ಐಆರ್ ಹಾಕಿದ್ದಾರೆ.

English summary
Hackers managed to transfer over ₹ 94 crore through a malware attack on the server of Pune-based Cosmos Bank and cloning thousands of the bank’s debit cards over a period of two days, a senior bank official said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X