ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಣೆಯಲ್ಲಿ ಬರ್ಗರ್ ಬಾಯಿಗಿಟ್ಟರೆ ಗಂಟಲಿಗೆ ಇಳಿದಿದ್ದು ಗಾಜಿನ ಚೂರು

|
Google Oneindia Kannada News

ಪುಣೆ, ಮೇ 20 : ಬರ್ಗರ್ ಅಂದರೆ ನಿಮಗೆ ಬಲು ಇಷ್ಟ ಅನ್ನೋದಾದರೆ, ಇಷ್ಟು ದಪ್ಪದ ಬರ್ಗರ್ ಒಂದೇ ಸಲಕ್ಕೆ ಬಾಯಿಯಲ್ಲಿ ಇಟ್ಟುಕೊಂಡು, ಕಣ್ಣು ಮುಚ್ಚಿ ಚಪ್ಪರಿಸುವ ಮುನ್ನ ಈ ವರದಿಯನ್ನು ಒಮ್ಮೆ ಓದಿಕೊಂಡು ಬಿಡಿ. ಪುಣೆಯಲ್ಲಿ ನಾಲ್ವರು ಗೆಳೆಯರು ಹೆಸರಾಂತ ಫಾಸ್ಟ್ ಫುಡ್ ಮಾರಾಟ ಮಳಿಗೆಗೆ ತೆರಳಿ, ಬರ್ಗರ್ ತಿಂದಿದ್ದಾರೆ. ಆ ಪೈಕಿ ಒಬ್ಬಾತ ಈಗ ಆಸ್ಪತ್ರೆಯಲ್ಲಿದ್ದಾನೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಅಸಲಿಗೆ ಆಗಿದ್ದೇನು ಅಂದರೆ, ನಾಲ್ವರು ಸ್ನೇಹಿತರು ಎಫ್.ಸಿ. ರಸ್ತೆಯಲ್ಲಿ ಇರುವ ಬರ್ಗರ್ ಕಿಂಗ್ ಗೆ ತೆರಳಿದ್ದಾರೆ. ಮೂವತ್ತೊಂದು ವರ್ಷ ಸಾಜಿತ್ ಪಠಾಣ್ ಬರ್ಗರ್ ತಿಂದ ಕೂಡಲೇ ಗಂಟಲಲ್ಲಿ ಹಿಂಸೆ ಆಗುತ್ತಿದೆ ಎಂದು ದೂರಿದ್ದಾನೆ. ರಕ್ತ ಕೂಡ ಕಾರಿ ಕೊಂಡಿದ್ದಾನೆ. ಆತನ ಸ್ನೇಹಿತರು ಬರ್ಗರ್ ನಲ್ಲಿ ಏನಿದೆ ಎಂದು ನೋಡಿದರೆ ಚೂಪಾದ ಗಾಜಿನ ತುಂಡುಗಳು ಸಿಕ್ಕಿವೆ.

ಸಾಜಿತ್ ನ ಸ್ನೇಹಿತ ಮಾಧ್ಯಮದ ಜತೆ ಮಾತನಾಡಿ, ನಾವು ಬಹಳ ಕಾಲದ ನಂತರ ಸ್ನೇಹಿತರೆಲ್ಲ ಒಂದು ಕಡೆ ಸೇರಿದ್ದೆವು. ಅವನು ಬರ್ಗರ್, ಫ್ರೆಂಚ್ ಫ್ರೈಸ್ ಮತ್ತು ತಂಪು ಪಾನೀಯ ನಮಗೆಲ್ಲ ತಂದ. ಐನೂರು ರುಪಾಯಿಗೂ ಹೆಚ್ಚು ಖರ್ಚು ಮಾಡಿದ್ದ. ಬರ್ಗರ್ ಅನ್ನು ಬಾಯಲ್ಲಿ ಇಟ್ಟುಕೊಂಡ ಮರು ಕ್ಷಣ ಅವನು ಕೆಮ್ಮುವುದಕ್ಕೆ ಶುರು ಮಾಡಿದ. ಗಂಟಲಲ್ಲಿ ಏನೋ ಸಿಕ್ಕಿಕೊಂಡಿರಬೇಕು ಅಂತ ನಾವು ಅಂದುಕೊಂಡೆವು.

Broken glass piece found in burger, after eating man admitted to hospital

ಅವನಿಗೆ ಸಾಫ್ಟ್ ಡ್ರಿಂಕ್ಸ್ ಕೊಟ್ಟೆವು. ಆದರೆ ಅವನಿಗೆ ರಕ್ತ ವಾಂತಿ ಶುರುವಾಯಿತು. ಬರ್ಗರ್ ಅನ್ನು ನೋಡಿದರೆ ಅದರಲ್ಲಿ ಗಾಜಿನ ಸಣ್ಣ ತುಂಡುಗಳು ಇದ್ದವು. ಸಾಜಿತ್ ವಾಂತಿ ಮಾಡಿಕೊಳ್ಳುತ್ತಿದ್ದ. ಉಸಿರಾಡುವುದಕ್ಕೂ ಅವನಿಗೆ ಕಷ್ಟ ಆಗುತ್ತಿತ್ತು ಎಂದು ವಿವರಿಸಿದ್ದಾನೆ.

ನಾಗ್ಪುರ್: ಹಲ್ದೀರಾಮ್ಸ್ ವಡಾ ಸಾಂಬಾರಿನಲ್ಲಿ ಸತ್ತ ಹಲ್ಲಿ ಪತ್ತೆನಾಗ್ಪುರ್: ಹಲ್ದೀರಾಮ್ಸ್ ವಡಾ ಸಾಂಬಾರಿನಲ್ಲಿ ಸತ್ತ ಹಲ್ಲಿ ಪತ್ತೆ

ಮೂವತ್ತೈದು ಸಾವಿರ ರುಪಾಯಿ ತನಕ ಸಾಜಿತ್ ಗೆ ಅಸ್ಪತ್ರೆಯಲ್ಲಿ ಖರ್ಚಾಗಿದೆ. ಈ ಬಗ್ಗೆ ಬರ್ಗರ್ ಕಿಂಗ್ ಅವರನ್ನು ಕೇಳಲು ಹೋದ ಸ್ನೇಹಿತರಿಗೆ, ನೀವೇ ಬರ್ಗರ್ ನಲ್ಲಿ ಗಾಜು ಸೇರಿಸಿ, ನಮ್ಮ ಹೆಸರು ಕೆಡಿಸಲು ನೋಡುತ್ತಾ ಇದ್ದೀರಿ ಎಂದು ಕೂಗಾಡಿದ್ದಾರೆ. ಆ ವೇಳೆ ಸಿಟ್ಟಿಗೆದ್ದ ಸ್ನೇಹಿತರು ಪೊಲೀಸರಿಗೆ ದೂರು ನೀಡಿದ್ದಾರೆ.

English summary
Broken glass piece found in burger, after eating man admitted to hospital. This incident took place in Pune based Burger King shop. here is the details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X