ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದಿನಿಂದ ಶಿರಡಿ ಬಂದ್; ಸಾಯಿಬಾಬಾ ದರ್ಶನಕ್ಕಿಲ್ಲ ವಿಘ್ನ

|
Google Oneindia Kannada News

ಶಿರಡಿ, ಜನವರಿ 19 : ಶಿರಡಿ ಸಾಯಿಬಾಬಾ ಜನ್ಮಸ್ಥಳದ ವಿವಾದದ ಹಿನ್ನಲೆಯಲ್ಲಿ ಇಂದಿನಿಂದ ಶಿರಡಿ ಬಂದ್‌ಗೆ ಗ್ರಾಮಸ್ಥರು ಕರೆ ನೀಡಿದ್ದಾರೆ. ಸಾಯಿಬಾಬಾ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ದೇವಾಲಯದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

ಸಾಯಿಬಾಬಾ ಜನ್ಮಸ್ಥಳದ ಬಗ್ಗೆ ವಿವಾದ ಭುಗಿಲೆದ್ದಿದ್ದು ಭಾನುವಾರದಿಂದ ಅನಿರ್ಧಿಷ್ಟಾವಧಿ ಶಿರಡಿ ಬಂದ್‌ಗೆ ಕರೆ ನೀಡಲಾಗಿದೆ. ಸ್ಥಳೀಯ ಬಿಜೆಪಿ ಶಾಸಕ ರಾಧಾಕೃಷ್ಣ ವಿಖೆ ಪಾಟೀಲ್ ಬಂದ್‌ಗೆ ಬೆಂಬಲ ನೀಡಿದ್ದು, ರಾಜಕೀಯ ಸ್ವರೂಪವೂ ವಿವಾದಕ್ಕೆ ಸಿಕ್ಕಿದೆ.

ಶಿರಡಿ ಸಾಯಿಬಾಬಾ ಆಡಳಿತ ಮಂಡಳಿ ನಿರ್ಧಾರದಿಂದ ಭಕ್ತರಿಗೆ ಆಘಾತಶಿರಡಿ ಸಾಯಿಬಾಬಾ ಆಡಳಿತ ಮಂಡಳಿ ನಿರ್ಧಾರದಿಂದ ಭಕ್ತರಿಗೆ ಆಘಾತ

ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಪರ್ತಿಯನ್ನು ಸಾಯಿಬಾಬಾ ಅವರ ಅಧಿಕೃತ ಜನ್ಮಸ್ಥಳ ಎಂದು ಘೋಷಣೆ ಮಾಡಿದೆ. ಈ ಕ್ಷೇತ್ರದ ಅಭಿವೃದ್ಧಿಗೆ 100 ಕೋಟಿ ರೂ.ಗಳ ಅನುದಾನವನ್ನು ಘೋಷಣೆ ಮಾಡಿದೆ. ಇದರಿಂದಾಗಿ ಜನ್ಮಸ್ಥಳದ ವಿವಾದದ ಕಿಡಿ ಹೊತ್ತಿಕೊಂಡಿದೆ.

ಶಿರಡಿ ದರ್ಶನಕ್ಕೆ IRCTC ಘೋಷಿಸಿದೆ ವಿಶೇಷ ಪ್ಯಾಕೇಜ್ ಟೂರ್ಶಿರಡಿ ದರ್ಶನಕ್ಕೆ IRCTC ಘೋಷಿಸಿದೆ ವಿಶೇಷ ಪ್ಯಾಕೇಜ್ ಟೂರ್

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿವಾದ ಬಗೆಹರಿಸಲು ಸಂಬಂಧಪಟ್ಟವರ ಜೊತೆ ಸಭೆ ನಡೆಸಲಿದ್ದಾರೆ ಎಂದು ಮುಖ್ಯಮಂತ್ರಿಗಳ ಕಚೇರಿ ಶನಿವಾರ ಸಂಜೆ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ. ಆದರೆ, ಬಂದ್ ವಾಪಸ್ ಪಡೆಯುವ ಬಗ್ಗೆ ಗ್ರಾಮಸ್ಥರು ಯಾವುದೇ ತೀರ್ಮಾನವನ್ನು ಪ್ರಕಟಿಸಿಲ್ಲ.

ಕರ್ನಾಟಕದ ಶ್ರೀಮಂತ ದೇವಾಲಯಗಳ ಪಟ್ಟಿ; ಕುಕ್ಕೆ ನಂ. 1 ಕರ್ನಾಟಕದ ಶ್ರೀಮಂತ ದೇವಾಲಯಗಳ ಪಟ್ಟಿ; ಕುಕ್ಕೆ ನಂ. 1

ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ

ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ

ಮಹಾರಾಷ್ಟ್ರ ಸರ್ಕಾರ ಮರಾಠವಾಡ ಪ್ರಾಂತ್ಯದಲ್ಲಿರುವ ಪರ್ಭಾನಿ ಜಿಲ್ಲೆಯ ಪರ್ತಿಯನ್ನು ಸಾಯಿ ಬಾಬಾ ಅವರ ಅಧಿಕೃತ ಜನ್ಮಸ್ಥಳ ಎಂದು ಘೋಷಣೆ ಮಾಡಿದೆ ಮತ್ತು ಕ್ಷೇತ್ರದ ಅಭಿವೃದ್ಧಿಗಾಗಿ 100 ಕೋಟಿ ರೂ.ಗಳನ್ನು ಘೋಷಣೆ ಮಾಡಿದೆ. ಇದರಿಂದಾಗಿ ಶಿರಡಿ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಅನಿರ್ಧಿಷ್ಟಾವಧಿ ಶಿರಡಿ ಬಂದ್‌ಗೆ ಕರೆ ನೀಡಿದ್ದಾರೆ.

ಶಿರಡಿ ಗ್ರಾಮಸ್ಥರ ವಿರೋಧ

ಶಿರಡಿ ಗ್ರಾಮಸ್ಥರ ವಿರೋಧ

ಮಹಾರಾಷ್ಟ್ರ ಸರ್ಕಾರ ಘೋಷಣೆ ಮಾಡಿದ ಬಳಿಕ ಗ್ರಾಮಸ್ಥರು ಅನಿರ್ಧಿಷ್ಟಾವಧಿ ಶಿರಡಿ ಬಂದ್‌ಗೆ ಕರೆ ನೀಡಲಾಗಿದೆ. ಸ್ಥಳೀಯ ಬಿಜೆಪಿ ಶಾಸಕ ರಾಧಾಕೃಷ್ಣ ವಿಖೆ ಪಾಟೀಲ್ ಅವರು ಬಂದ್‌ಗೆ ಬೆಂಬಲ ನೀಡಿದ್ದಾರೆ. ಇದರಿಂದಾಗಿ ವಿವಾದಕ್ಕೆ ರಾಜಕೀಯ ತಿರುವು ಸಿಕ್ಕಿದೆ. ಶಿವಸೇನೆ ಸಂಸದ ಸದಾಶಿವ ಲೋಖಾಂಡೆ ಸಿಎಂ ಉದ್ಧವ್ ಠಾಕ್ರೆ ಜೊತೆ ಚರ್ಚೆ ನಡೆಸಲು ಕಾಲಾವಕಾಶ ಪಡೆದಿದ್ದಾರೆ.

ಸಂಶೋಧಕರಿಂದ ಸಾಕ್ಷಿ ಸಂಗ್ರಹ

ಸಂಶೋಧಕರಿಂದ ಸಾಕ್ಷಿ ಸಂಗ್ರಹ

ಮುಂಬೈ ಮೂಲದ ವಿಶ್ವಾಸ್ ಖೇರ್ ಎಂಬ ಬಾಬಾ ಭಕ್ತರೊಬ್ಬರು 20 ವರ್ಷಗಳ ಕಾಲ ಸಂಶೋಧನೆ ನಡೆಸಿದ್ದಾರೆ. ಸಾಯಿಬಾಬಾ ಅವರ ಜನ್ಮಸ್ಥಳದ ವಿಚಾರವಾಗಿ ಸಂಶೋಧನೆ ನಡೆಸಿದ್ದು, ಪರ್ತಿಯೇ ಬಾಬಾ ಜನ್ಮಸ್ಥಳವೆಂದು ಅವರು ತೀರ್ಮಾನಕ್ಕೆ ಬಂದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ 29 ಆಧಾರಗಳನ್ನೂ ಅವರು ಸಂಗ್ರಹ ಮಾಡಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಇದರ ಮೂಲಕ ಸರ್ಕಾರ ಜನ್ಮಸ್ಥಳವನ್ನು ಘೋಷಣೆ ಮಾಡಿದೆ.

ದೇವಾಲಯವನ್ನು ಮುಚ್ಚುವುದಿಲ್ಲ

ದೇವಾಲಯವನ್ನು ಮುಚ್ಚುವುದಿಲ್ಲ

ಶಿರಡಿಯಲ್ಲಿ ಅನಿರ್ಧಿಷ್ಟಾವಧಿ ಬಂದ್‌ಗೆ ಕರೆ ನೀಡಿದ್ದರೂ ದೇವಾಲಯವನ್ನು ಬಂದ್ ಮಾಡುವುದಿಲ್ಲ ಎಂದು ಶಿರಡಿ ಸಾಯಿಬಾಬಾ ದೇವಾಲಯ ಸ್ಪಷ್ಟಪಡಿಸಿದೆ. ಸಾಯಿಬಾಬಾ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಅಗತ್ಯ ವ್ಯವಸ್ಥೆ ಮಾಡಲಾಗುತ್ತದೆ ಎಂದು ದೇವಾಲಯ ಹೇಳಿದೆ.

English summary
Shirdi to shut down from January 19, 2020 due to birthplace controversy. Locals have called for a shut-down Shirdi town of Maharashtra. Controversy sparked over the birthplace of Saibaba.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X