ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಹತ್ಯೆ ಸಂಚು : ವಿಚಾರವಾದಿ ವರವರರಾವ್ ಬಂಧನ

|
Google Oneindia Kannada News

ಹೈದರಾಬಾದ್/ಪುಣೆ, ನವೆಂಬರ್ 18: 'ನಗರ ನಕ್ಸಲ'ರ ಹಣೆಪಟ್ಟೆ ಹಚ್ಚಿಸಿಕೊಂಡು ಗೃಹ ಬಂಧನಕ್ಕೊಳಗಾಗಿದ್ದ ವಿಚಾರವಾದಿ ಪಿ ವರವರರಾವ್ ಅವರನ್ನು ಪ್ರಧಾನಿ ಮೋದಿ ಹತ್ಯೆ ಸಂಚು ಪ್ರಕರಣದಲ್ಲಿ ಬಂಧಿಸಲಾಗಿದೆ.

ಮಾವೋವಾದಿಗಳೊಂದಿಗೆ ಸಂಬಂಧ ಹೊಂದಿದ್ದಾರೆ ಹಾಗೂ ಮೋದಿ ಅವರ ಹತ್ಯೆ ಮಾಡಲು ಸಂಚು ಮಾಡಿರುವ ಆರೋಪದಡಿಯಲ್ಲಿ ಬಂಧನ ಮಾಡಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

ಏನಿದು ಭೀಮಾ ಕೊರೆಗಾಂವ್ ವಿವಾದ? ವಿಚಾರವಾದಿಗಳ ಬಂಧನ ಏಕೆ? ಏನಿದು ಭೀಮಾ ಕೊರೆಗಾಂವ್ ವಿವಾದ? ವಿಚಾರವಾದಿಗಳ ಬಂಧನ ಏಕೆ?

ಹೈದರಾಬಾದ್ ಹೈಕೋರ್ಟ್ ಆದೇಶದಂತೆ ಗೃಹಬಂಧನದ ಅವಧಿ ವಿಸ್ತರಣೆ ಮಾಡಲಾಗಿತ್ತು. ನವೆಂಬರ್ 15ಕ್ಕೆ ಮುಗಿದಿದೆ ಎಂದು ಜಂಟಿ ಆಯುಕ್ತ(ಪುಣೆ ಪೊಲೀಸ್) ಶಿವಾಜಿ ಬೊಡಖೆ ಹೇಳಿದ್ದಾರೆ.

Bhima Koregaon case: Activist Varavara Rao arrested for alleged link to Maoist plot

ಕವಿ ವರವರ ರಾವ್. ವಕೀಲೆ, ನಾಗರೀಕ ಹಕ್ಕುಗಳ ಹೋರಾಟಗಾರ್ತಿ ಸುಧಾ ಭಾರಧ್ವಜ್. ವಿರ್ನೋನ್ ಗೋನ್ಸಾಲ್ವೀಸ್, ಅರುಣ್ ಫರೇರಿಯಾ, ಗೌತಮ್ ನಾಲ್ವಾಕ್ಕಾ ಅವರುಗಳನ್ನು ಪೊಲೀಸರು ಬಂಧಿಸಿದ್ದರು. ಇವರಿಗೆ ವಿಷೇಧಿತ ಸಿಪಿಐ (ಎಂ)ನೊಂದಿಗೆ ಸಂಪರ್ಕವಿದೆ ಎಂದು ಆರೋಪಿಸಲಾಗಿತ್ತು.

ರಾಜೀವ್ ಹತ್ಯೆ ಮಾದರಿಯಲ್ಲಿ ಪ್ರಧಾನಿ ಮೋದಿ ಹತ್ಯೆಗೆ ಮಾವೊವಾದಿಗಳ ಸಂಚು?ರಾಜೀವ್ ಹತ್ಯೆ ಮಾದರಿಯಲ್ಲಿ ಪ್ರಧಾನಿ ಮೋದಿ ಹತ್ಯೆಗೆ ಮಾವೊವಾದಿಗಳ ಸಂಚು?

Revolutionary Democratic Front (RDF) ಜತೆ ರಾವ್ ಅವರಿಗೆ ಸಂಬಂಧವಿದ್ದು, ಆಂಧ್ರಪ್ರದೇಶ, ಒಡಿಶಾ ಹಾಗೂ ತೆಲಂಗಾಣದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಿಪಿಐ(ಮಾವೋವಾದಿ) ಹಾಕಿಕೊಂಡಿದ್ದ ಸಂಚಿನಲ್ಲಿ ಪಾಲ್ಗೊಂಡಿದ್ದರು. ಇದಲ್ಲದೆ, ಪ್ರಧಾನಿ ಮೋದಿ ಅವರ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂದು ಪೊಲೀಸ್ ಹೇಳಿದ್ದಾರೆ.

English summary
Activist P Varavara Rao was arrested from his home in Hyderabad today after his house arrest for his alleged involvement in a plot to assassinate Prime Minister Narendra Modi came to an end.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X