ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಸರ್ಕಾರ ಕೊಟ್ಟ ಹುದ್ದೆಯನ್ನು ತ್ಯಜಿಸಿದ ಅನುಪಮ್ ಖೇರ್

|
Google Oneindia Kannada News

ಪುಣೆ, ಅಕ್ಟೋಬರ್ 31 : ಪ್ರಧಾನಿ ಮೋದಿ ಅವರನ್ನು ಮೆಚ್ಚಿ ಅವರ ಯೋಜನೆಗಳ ಪರ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಚಾರ ಮಾಡುತ್ತಿದ್ದ ನಟ ಅನುಪಮ್ ಖೇರ್ ಅವರಿಗೆ ಪ್ರತಿಷ್ಠಿತ ಸಿನಿಮಾ ತರಬೇತಿ ಕೇಂದ್ರವಾದ ಫಿಲಂ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಫ್ ಟಿಐಐ)ನ ಚೇರ್ಮನ್ ಆಗುವ ಅವಕಾಶ ದಕ್ಕಿತ್ತು.

ಯಾತ್ರಾರ್ಥಿಗಳ ಮೇಲೆ ದಾಳಿ: ಕಂಬನಿ ಮಿಡಿದ ಬಾಲಿವುಡ್, ಕ್ರಿಕೆಟ್ ಲೋಕ ಯಾತ್ರಾರ್ಥಿಗಳ ಮೇಲೆ ದಾಳಿ: ಕಂಬನಿ ಮಿಡಿದ ಬಾಲಿವುಡ್, ಕ್ರಿಕೆಟ್ ಲೋಕ

ಆದರೆ, ಈಗ ವೈಯಕ್ತಿಕ ಕಾರಣಗಳಿಂದ ಈ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ಅನುಪಮ್ ಖೇರ್ ಹೇಳಿದ್ದಾರೆ.

ವಾರ್ತಾ ಹಾಗೂ ಪ್ರಸಾರ ಇಲಾಖೆಗೆ ಕಳಿಸಿರುವ ತಮ್ಮ ರಾಜೀನಾಮೆ ಪತ್ರದಲ್ಲಿ ರಾಜೀನಾಮೆ ಕಾರಣವನ್ನು ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಟೆಲಿವಿಷನ್ ಶೋನಲ್ಲಿ ಪಾಲ್ಗೊಳ್ಳಬೇಕಿದೆ. ಇದಕ್ಕಾಗಿ 9 ತಿಂಗಳು ಯುಎಸ್ ನಲ್ಲಿರಬೇಕಾಗುತ್ತದೆ. ಹೀಗಾಗಿ, ನಾನು ಈ ಹುದ್ದೆಯನ್ನು ತೊರೆಯುತ್ತಿದ್ದೇನೆ ಎಂದಿದ್ದಾರೆ.

Anupam Kher resigns as FTII chairman, cites busy schedule

ವಾರ್ತಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋರ್ ಅವರು ರಾಜೀನಾಮೆಯನ್ನು ಅಂಗೀಕರಿಸಿ, ಅನುಪಮ್ ಖೇರ್ ಅವರಿಗೆ ಶುಭಹಾರೈಸಿದ್ದಾರೆ.

ಅಸಹಿಷ್ಣುತೆ ಬಗ್ಗೆ ದನಿ ಎತ್ತಿದವರಿಗೆ ಅನುಪಮ್ ತಿರುಗೇಟು ಅಸಹಿಷ್ಣುತೆ ಬಗ್ಗೆ ದನಿ ಎತ್ತಿದವರಿಗೆ ಅನುಪಮ್ ತಿರುಗೇಟು

ದೇಶದ ಪ್ರತಿಷ್ಠಿತ ಕೇಂದ್ರಕ್ಕೆ ಅಕ್ಟೋಬರ್ 11, 2017ರಂದು ಚೇರ್ಮನ್ ಆಗಿ ಖೇರ್ ಅವರು ಅಧಿಕಾರಕ್ಕೆ ಬಂದರು. ಪುಣೆಯ ಈ ಇನ್ಸ್ಟಿಟ್ಯೂಟ್ ನಲ್ಲಿ ಈ ಮುಂಚೆ ಇದ್ದ ಚೇರ್ಮನ್, ಮಹಾಭಾರತ ಧಾರಾವಾಹಿ ಖ್ಯಾತಿಯ ನಟ ಗಜೇಂದ್ರ ಚೌಹಾಣ್ ಅವರು ವಿವಾದದ ಕೇಂದ್ರ ಬಿಂದುವಾಗಿದ್ದರು.

ಅನುಪಮ್ ಖೇರ್ ಗೆ ವೀಸಾ ನೀಡಲು ಪಾಕಿಸ್ತಾನ ನಕಾರ! ಅನುಪಮ್ ಖೇರ್ ಗೆ ವೀಸಾ ನೀಡಲು ಪಾಕಿಸ್ತಾನ ನಕಾರ!

ಅನುಪಮ್ ಖೇರ್ ಅವರು ಸದ್ಯ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಜೀವನ ಆಧಾರಿತ ಚಿತ್ರ ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ನಲ್ಲಿ ಮುಖ್ಯಭೂಮಿಕೆ ನಿಭಾಯಿಸುತ್ತಿದ್ದು, ಚಿತ್ರೀಕರಣ ಇತ್ತೀಚೆಗೆ ಮುಕ್ತಾಯವಾಗಿದೆ.

English summary
Anupam Kher on Wednesday resigned as the chairman of the Film and Television Institute of India (FTII), citing busy schedule.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X