ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಣೆ ಬೇಕರಿಯಲ್ಲಿ ಅಗ್ನಿಅವಘಡ, 6 ಮಂದಿ ಸಾವು

By Ananthanag
|
Google Oneindia Kannada News

ಪುಣೆ, ಡಿಸೆಂಬರ್ 30: ಮಹಾರಾಷ್ಟ್ರರಾಜ್ಯದ ಪುಣೆಯ ಬೇಕರಿಯೊಂದರಲ್ಲಿ ಅಗ್ಮಿ ಅವಘಡ ಸಂಭವಿಸಿದ್ದು ಆರು ಮಂದಿ ಮೃತರಾಗಿದ್ದಾರೆ.

ಪುಣೆಯ ಬೇಕ್ಸ್ ಮತ್ತು ಕೇಕ್ಸ್ ಶಾಫಿನ ನೆಲಮಾಳಿಗೆಯಲ್ಲಿ ಮುಂಜಾನೆಯೇ ಬೆಂಕಿ ಅವಘಡ ಸಂಭವಿಸಿದೆ. ಬೇಕರಿಯು ಬಹುಮಹಡಿ ಕಟ್ಟಡವಾಗಿದ್ದು ಬೆಂಕಿ ದುಂತವು ನೆಲಮಳಿಗೆಯಲ್ಲಾದ ಶಾರ್ಟ್ ಸರ್ಕ್ಯೂಟಿನಿಂದ ಸಂಭವಿಸಿರಬಹುದು ಎನ್ನಲಾಗಿದೆ. ಅಲ್ಲದೆ ಬೇಕರಿಯಲ್ಲದ್ದ ಎಲ್ಲ ವಸ್ತುಗಳು ಸುಟ್ಟುಕರಕಲಾಗಿದೆ. ಬೇಕರಿಯ ಕೇಕ್ ಮತ್ತು ಇತರ ವಸ್ತುಗಳನ್ನು ಜೋಡಿಸುವ ಪೀಠೋಪಕರಣಗಳು ಭಸ್ಮಗೊಂಡಿವೆ.

bakery

ಇನ್ನು ಬೇಕರಿಯಲ್ಲಿ ಮಧ್ಯರಾತ್ರಿವರೆಗೆ ಕೆಲಸಮಾಡಿ ನೌಕರರು ಮಲಗಿದ್ದಾರೆ. ಬೆಳಗಿನ ಜಾವಕ್ಕೆ ಬೆಂಕಿ ಅವಘಡ ಸಂಭವಿಸಿದ್ದು, ಬೇಕರಿ ಬಾಗಿಲನ್ನು ಹೊರಗಡೆಯಿಂದ ಬಂದ್ ಮಾಡಲಾಗಿತ್ತು ಹೀಗಾಗಿ ಬೇಕರಿ ಒಳಗಡೆಯೇ ಹೊಗೆಯಿಂದ ಉಸಿರುಗಟ್ಟಿ ಬೇಕರಿ ಕೆಲಸಗಾರರು ಅಸುನೀಗಿದ್ದಾರೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದರು.

bakery

ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಬೇಕರಿಯನ್ನು ಹೊರಗಡೆಯಿಂದ ಏಕೆ ಲಾಕ್ ಆಯಿತು. ಹಾಗು ಯಾರು ಲಾಕ್ ಮಾಡಿರಬಹುದು ಎಂಬುದರ ಬಗ್ಗೆ ತನಿಖೆ ಪ್ರಾರಂಭಿಸಿದ್ದು, ಮೃತರಾದವರನ್ನು ಅವರ ಕುಟುಂಬಕ್ಕೆ ಒಪ್ಪಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

English summary
At least six people have been killed in a fire at a bakery in Maharashtra's Pune.The fire broke out early this morning at the "Bakes and Cakes" shop on the ground floor of a multistorey building. A short-circuit is believed to be the cause.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X