ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಪತ್ರೆಯ ಪ್ರತ್ಯೇಕ ಕೊಠಡಿಯಿಂದ ಪರಾರಿಯಾದ 5 ಕೊರೊನಾ ಶಂಕಿತರು

|
Google Oneindia Kannada News

ನಾಗ್ಪುರ, ಮಾರ್ಚ್ 14: ವಿಶ್ವದೆಲ್ಲೆಡೆ ಕೊರೊನಾ ವೈರಸ್ ಭೀತಿ ಹೆಚ್ಚಾಗಿದ್ದು, ರೋಗದ ಲಕ್ಷಣ ಯಾರಲ್ಲೇ ಕಂಡು ಬಂದರು, ಅವರನ್ನು ಪ್ರತ್ಯೇಕ ಕೊಠಡಿಯಲ್ಲಿರಿಸಿ ಸೂಕ್ತ ಚಿಕಿತ್ಸೆ ನೀಡುವ ಪ್ರಯತ್ನ ಮಾಡಲಾಗುತ್ತಿದೆ.

ಮತ್ತೊಂದೆಡೆ ಕೊರೊನಾ ಸೋಂಕಿತರನ್ನು ಹುಡುಕುವುದೇ ದೊಡ್ಡ ಸಾಹಸ ಆಗಿಬಿಟ್ಟಿದೆ. ಸಾಮಾನ್ಯ ಜ್ವರ, ಕೆಮ್ಮು, ಶೀತ ಎಂದು ಆಸ್ಪತ್ರೆ ಕಡೆ ಮುಖ ಮಾಡಿದರೂ ಅವರಿಗೆ ಕೊರೊನಾ ಪರೀಕ್ಷೆ ಮಾಡಬೇಕಾದ ಅನವಾರ್ಯತೆ ಹುಟ್ಟಿಕೊಂಡಿದೆ.

ಕೊರೊನಾ ಕಟ್ಟಿಹಾಕುವಲ್ಲಿ ಸಫಲವಾಯಿತೇ ಇಸ್ರೇಲ್: ಲಸಿಕೆ ತಯಾರು?ಕೊರೊನಾ ಕಟ್ಟಿಹಾಕುವಲ್ಲಿ ಸಫಲವಾಯಿತೇ ಇಸ್ರೇಲ್: ಲಸಿಕೆ ತಯಾರು?

ಹಾಗಾಗಿ, ಸಾಮಾನ್ಯ ಜನರು ಕೊರೊನಾಗೆ ಹೆದರುತ್ತಿದ್ದಾರೆ. ಕೊರೊನಾ ಶಂಕೆ ಇದೆ ಎಂದು ಹೇಳಿದ್ರೆ ಸಾಕು ಈಗ ಯಾವ ಚಿಕಿತ್ಸೆನೂ ಬೇಡ ಎಂದು ಓಡಿಹೋಗುತ್ತಿರುವ ಘಟನೆಗಳು ಭಾರತದಲ್ಲೂ ನಡೆಯುತ್ತಿದೆ. ಇದೀಗ, ಮಹಾರಾಷ್ಟ್ರದ ನಾಗ್ಪುರದಲ್ಲಿ ಕೊರೊನಾಗೆ ಹೆದರಿ, ಪ್ರತ್ಯೇಕ ಕೊಠಡಿಯಲ್ಲಿದ್ದ 5 ಜನ ಶಂಕಿತರು ಆಸ್ಪತ್ರೆಯಿಂದ ಪರಾರಿಯಾಗಿರುವ ಘಟನೆ ನಡೆದಿದೆ. ಮುಂದೆ ಓದಿ....

ನಾಗ್ಪುರದಲ್ಲಿ 5 ಜನ ಶಂಕಿತರು ಎಸ್ಕೇಪ್

ನಾಗ್ಪುರದಲ್ಲಿ 5 ಜನ ಶಂಕಿತರು ಎಸ್ಕೇಪ್

ನಾಗ್ಪುರದ ಮಾಯೋ ಜನರಲ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕು ಇರಬಹುದು ಎಂಬ ಶಂಕೆ ವ್ಯಕ್ತವಾಗಿದ್ದ ಹಿನ್ನೆಲೆ ಐದು ಜನರನ್ನು ಪ್ರತ್ಯೇಕ ಕೊಠಡಿಯಲ್ಲಿರಿಸಿ ನಿಗಾ ವಹಿಸಲಾಗಿತ್ತು. ಆದರೆ, ಈ ಐದು ಜನರು ಹೆದರಿ ಪ್ರತ್ಯೇಕ ಕೊಠಡಿಯಿಂದ ಪರಾರಿಯಾಗಿದ್ದರು ಎಂಬ ಸುದ್ದಿ ಬೆಳಕಿಗೆ ಬಂದಿದೆ.

ಒಬ್ಬರಿಗೆ ನೆಗಿಟೀವ್ ಬಂದಿತ್ತು

ಒಬ್ಬರಿಗೆ ನೆಗಿಟೀವ್ ಬಂದಿತ್ತು

ಐದು ಜನರಿಗು ಕೊರೊನಾ ಪರೀಕ್ಷೆ ಮಾಡಲಾಗಿತ್ತು. ಇದರಲ್ಲಿ ಒಬ್ಬರಿಗೆ ನೆಗಿಟೀವ್ ಬಂದಿತ್ತು. ಉಳಿದ ನಾಲ್ಕು ಮಂದಿಯ ವರದಿ ಇನ್ನು ಬಂದಿರಲಿಲ್ಲ. ಅದಕ್ಕಾಗಿ ಕಾಯುತ್ತಿದ್ದರು. ಈ ಮಧ್ಯೆ ಐದು ಜನರು ಆಸ್ಪತ್ರೆ ಸಿಬ್ಬಂದಿಯ ಕಣ್ಣು ತಪ್ಪಿಸಿ ಪರಾರಿಯಾಗಲು ಯತ್ನಿಸಿದ್ದರು ಎಂದು ಹೇಳಲಾಗಿದೆ.

ಹುಡುಕಿ ಕರೆತಂದ ಪೊಲೀಸರು

ಹುಡುಕಿ ಕರೆತಂದ ಪೊಲೀಸರು

'ಪ್ರತ್ಯೇಕ ಕೊಠಡಿಯಿಂದ ಓಡಿ ಹೋಗಿದ್ದ ಐದು ಜನರನ್ನು ಹುಡುಕಿ ಮತ್ತೆ ಅವರನ್ನ ವಾಪಸ್ ಕರೆತರಲಾಗಿದೆ. ಮತ್ತೆ ಅವರನ್ನು ಪ್ರತ್ಯೇಕ ಕೊಠಡಿಯಲ್ಲಿರಿಸಿ ನಿಗಾವಹಿಸಲಾಗಿದೆ' ಎಂದು ನಾಗ್ಪುರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಮಾಹಿತಿ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ ಒಟ್ಟು 18

ಮಹಾರಾಷ್ಟ್ರದಲ್ಲಿ ಒಟ್ಟು 18

ಶುಕ್ರವಾರ ನಾಗ್ಪುರದಲ್ಲಿ ಮೊದಲ ಕೊರೊನಾ ಕೇಸ್ ಪತ್ತೆಯಾಗಿದೆ. ಅಮೆರಿಕಾದಿಂದ ಬಂದಿದ್ದ ಟೆಕ್ಕಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಮಾರ್ಚ್ 6 ರಂದು ಮಾಯೋ ಜನರಲ್ ಆಸ್ಪತ್ರೆಗೆ ಖುದ್ದು ಬಂದು ದಾಖಲಾಗಿದ್ದರು. ಇದೀಗ, ಮಹಾರಾಷ್ಟ್ರದಲ್ಲಿ ಒಟ್ಟು 18 ಕೊರೊನಾ ಕೇಸ್ ಖಚಿತವಾಗಿದೆ ಎಂಬ ಮಾಹಿತಿ ಸಿಕ್ಕಿದೆ.

ಮಹಾರಾಷ್ಟ್ರ ಬಂದ್

ಮಹಾರಾಷ್ಟ್ರ ಬಂದ್

ಮಹಾರಾಷ್ಟ್ರದಲ್ಲಿ ಕೊರೊನಾ ಭೀತಿ ಹೆಚ್ಚಿರುವ ಕಾರಣ, ಮಾರ್ಚ್ 31ರ ವರೆಗೂ ಬಂದ್ ಮಾಡಲು ನಿರ್ಧರಿಸಲಾಗಿದೆ. ಪುಣೆ, ನವಿ ಮುಂಬೈ, ಸಿನಿಮಾ ಥಿಯೇಟರ್ಸ್, ಮಾಲ್, ಸ್ವಿಮ್ಮಿಂಗ್ ಪೂಲ್, ಠಾಣೆ, ನಾಗ್ಪುರದಲ್ಲಿ ಬಂದ್ ಮಾಡಲು ರಾಜ್ಯ ಸರ್ಕಾರ ಘೋಷಿಸಿದೆ.

English summary
5 COVID19 suspects escape from isolation ward of mayo general hospital in Nagpur hospital, and then all traced said police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X