ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಮೂವರು ಸ್ವಯಂಸೇವಕರ ಮೇಲೆ ಕೋವಿಶೀಲ್ಡ್ ಲಸಿಕೆ ಪ್ರಯೋಗ

|
Google Oneindia Kannada News

ನವದೆಹಲಿ, ಆಗಸ್ಟ್ 29: ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿರುವ ಆಕ್ಸ್‌ಫರ್ಡ್ ಕೋವಿಡ್-19 ಲಸಿಕೆಯನ್ನು ಇನ್ನೂ ಮೂವರು ಸ್ವಯಂಸೇವಕರಿಗೆ ನೀಡಲಾಗಿದೆ. ಪುಣೆಯ ವೈದ್ಯಕೀಯ ಕಾಲೇಜೊಂದರಲ್ಲಿ ಲಸಿಕೆಯ ಎರಡನೆಯ ಹಂತದ ಕ್ಲಿನಿಕಲ್ ಪ್ರಯೋಗದ ಭಾಗವಾಗಿ ಮೂವರ ಮೇಲೆ ಲಸಿಕೆ ಪ್ರಯೋಗಿಸಲಾಗಿದೆ ಎಂದು ಹಿರಿಯ ವೈದ್ಯರೊಬ್ಬರು ತಿಳಿಸಿದ್ದಾರೆ.

ಇದಕ್ಕೂ ಮುನ್ನ 32 ಮತ್ತು 48 ವರ್ಷದ ಇಬ್ಬರು ಪುರುಷರ ಮೇಲೆ ಕೋವಿಶೀಲ್ಡ್ ಲಸಿಕೆಯನ್ನು ಪ್ರಯೋಗಿಸಲಾಗಿತ್ತು. ಈ ಇಬ್ಬರೂ ಆರೋಗ್ಯದಿಂದ ಇದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಪುಣೆ ಮೂಲದ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಈ ಲಸಿಕೆಯನ್ನು ತಯಾರಿಸಿದೆ. ಇಲ್ಲಿನ ಭಾರ್ತಿ ವಿದ್ಯಾಪೀಠದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಎರಡನೆಯ ಹಂತದ ಕ್ಲಿನಿಕಲ್ ಪ್ರಯೋಗ ನಡೆಸಲಾಗಿದೆ.

ಶ್ವಾಸಕೋಶದಿಂದ ಇಲ್ಲಿಗೂ ಬಂತು ಕೊರೊನಾ ವೈರಸ್!ಶ್ವಾಸಕೋಶದಿಂದ ಇಲ್ಲಿಗೂ ಬಂತು ಕೊರೊನಾ ವೈರಸ್!

ಗುರುವಾರ ಮಧ್ಯಾಹ್ನ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ ಸೇರಿದಂತೆ ಮೂವರು ಸ್ವಯಂ ಸೇವಕರ ಕೋವಿಡ್-19 ಮತ್ತು ಆಂಟಿಬಾಡಿ ಪರೀಕ್ಷೆಗಳಲ್ಲಿನ ಆರ್‌ಟಿ-ಪಿಸಿಆರ್ ಪರೀಕ್ಷೆಗಳ ವರದಿ ನೆಗೆಟಿವ್ ಬಂದ ಬಳಿಕ ಲಸಿಕೆಯನ್ನು ನೀಡಲಾಗಿದೆ ಎಂದು ವೈದ್ಯಕೀಯ ಕಾಲೇಜಿನ ಸಂಶೋಧನಾ ಘಟಕದ ಉಸ್ತುವಾರಿ ಡಾ. ಸುನಿತಾ ಪಾಲ್ಕರ್ ತಿಳಿಸಿದ್ದಾರೆ. ಮುಂದೆ ಓದಿ.

ನಾಲ್ವರಲ್ಲಿ ನೆಗೆಟಿವ್

ನಾಲ್ವರಲ್ಲಿ ನೆಗೆಟಿವ್

ಬುಧವಾರ ಇಬ್ಬರು ಸ್ವಯಂ ಸೇವಕರಿಗೆ ಲಸಿಕೆ ಡೋಸ್ ನೀಡಿದ ಬಳಿಕ ಇನ್ನೂ ಐವರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರ ಪೈಕಿ ನಾಲ್ವರಲ್ಲಿ ಕೋವಿಡ್-19 ಮತ್ತು ಆಂಟಿಬಾಡಿ ಪರೀಕ್ಷೆ ವರದಿ ನೆಗೆಟಿವ್ ಬಂದಿತ್ತು. ಅವರು ಕ್ಲಿನಿಕಲ್ ಪ್ರಯೋಗಕ್ಕೆ ಅರ್ಹರಾಗಿದ್ದು, ಮೂವರಿಗೆ ಲಸಿಕೆ ನೀಡಲಾಗಿದೆ. ಐದನೇ ಸ್ವಯಂಸೇವಕರ ಆಂಟಿಬಾಡಿ ಪರೀಕ್ಷೆ ವರದಿ ಪಾಸಿಟಿವ್ ಬಂದಿದ್ದರಿಂದ ಅವರನ್ನು ಪ್ರಯೋಗದಿಂದ ಕೈಬಿಡಲಾಗಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.

ಅಡ್ಡ ಪರಿಣಾಮ ಉಂಟಾಗಿಲ್ಲ

ಅಡ್ಡ ಪರಿಣಾಮ ಉಂಟಾಗಿಲ್ಲ

ಸ್ವಯಂ ಸೇವಕರಿಗೆ ನೀಡಿರುವ ಡೋಸ್‌ಅನ್ನು ಒಂದು ತಿಂಗಳ ಬಳಿಕ ಪುನರಾವರ್ತಿಸಲಾಗುತ್ತದೆ. ಈ ಮೊದಲು ಲಸಿಕೆ ನೀಡಿರುವ ಇಬ್ಬರೊಂದಿಗೆ ನಮ್ಮ ವೈದ್ಯಕೀಯ ತಂಡ ನಿರಂತರ ಸಂಪರ್ಕದಲ್ಲಿದೆ. ಅವರಲ್ಲಿ ಯಾವುದೇ ನೋವು, ಜ್ವರ, ಅಡ್ಡ ಪರಿಣಾಮ ಅಥವಾ ಬೇರಾವುದೇ ಸಮಸ್ಯೆಗಳು ಕಂಡುಬಂದಿಲ್ಲ ಎಂದು ಆಸ್ಪತ್ರೆಯ ಉಪ ವೈದ್ಯಕೀಯ ನಿರ್ದೇಶಕ ಡಾ. ಜಿತೇಂದ್ರ ಓಸ್ವಾಲ್ ತಿಳಿಸಿದ್ದಾರೆ.

ಗಮನಿಸಿ: ಟಿಬಿ-ಕೋವಿಡ್ ಪರೀಕ್ಷೆ ಕುರಿತು ಆರೋಗ್ಯ ಸಚಿವಾಲಯದ ಮಹತ್ವದ ಸೂಚನೆಗಮನಿಸಿ: ಟಿಬಿ-ಕೋವಿಡ್ ಪರೀಕ್ಷೆ ಕುರಿತು ಆರೋಗ್ಯ ಸಚಿವಾಲಯದ ಮಹತ್ವದ ಸೂಚನೆ

ನಿರಂತರ ಮಾಹಿತಿ ಸಂಗ್ರಹ

ನಿರಂತರ ಮಾಹಿತಿ ಸಂಗ್ರಹ

ಬುಧವಾರ ಲಸಿಕೆ ನೀಡಿದ ಬಳಿಕ ಇಬ್ಬರೂ ಸ್ವಯಂಸೇವಕರನ್ನು ಸುಮಾರು 30 ನಿಮಿಷದವರೆಗೆ ನಿಗಾದಲ್ಲಿ ಇರಿಸಲಾಗಿತ್ತು. ಬಳಿಕ ಮನೆಗೆ ಕಳುಹಿಸಲಾಗಿತ್ತು. ಅವರಿಗೆ ಎಲ್ಲ ಅಗತ್ಯ ತುರ್ತು ಸಂಖ್ಯೆಗಳನ್ನು ನೀಡಲಾಗಿದೆ. ನಮ್ಮ ವೈದ್ಯಕೀಯ ತಂಡ ಅವರಿಂದ ಮಾಹಿತಿ ಪಡೆಯುತ್ತಿದ್ದಾರೆ. ಎಲ್ಲ 25 ಸ್ವಯಂ ಸೇವಕರಿಗೆ ಮುಂದಿನ ಏಳು ದಿನಗಳಲ್ಲಿ ಲಸಿಕೆ ನೀಡಲಾಗುವುದು ಎಂದಿದ್ದಾರೆ.

ಕೋವಿಶೀಲ್ಡ್ ಮೂಲ

ಕೋವಿಶೀಲ್ಡ್ ಮೂಲ

ಎಸ್‌ಐಐ ಜಗತ್ತಿನ ಅತ್ಯಂತ ದೊಡ್ಡ ಔಷಧ ತಯಾರಕ ಸಂಸ್ಥೆಯಾಗಿದ್ದು, ಕೋವಿಡ್‌ಗೆ ಕೋವಿಶೀಲ್ಡ್ ಎಂಬ ಲಸಿಕೆಯನ್ನು ಉತ್ಪಾದನೆಯ ಸಂಬಂಧ ಜೆನ್ನರ್ ಇನ್‌ಸ್ಟಿಟ್ಯೂಟ್ ಆಫ್ ಆಕ್ಸ್‌ಫರ್ಡ್ ಅಭಿವೃದ್ಧಿಪಡಿಸುವ ಲಸಿಕೆಯನ್ನು ಉತ್ಪಾದಿಸಲು ಅದರೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದಕ್ಕೆ ಬ್ರಿಟಿಷ್-ಸ್ವೀಡಿಶ್ ಔಷಧ ಕಂಪೆನಿ ಆಸ್ಟ್ರಾಜೆನಿಕಾದ ಸಹಯೋಗವಿದೆ.

ಕೋವಿಡ್ ಸೋಂಕಿತರಿಗೆ ಇರುವ ವಿಮೆ ಯೋಜನೆಯ ಮಾಹಿತಿಕೋವಿಡ್ ಸೋಂಕಿತರಿಗೆ ಇರುವ ವಿಮೆ ಯೋಜನೆಯ ಮಾಹಿತಿ

English summary
Covishield Vaccine of Oxford manufactured by the Serum Institute was given to 3 more volunteers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X