ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ಸರಣಿ ಸ್ಫೋಟ ಪಾತಕಿ ಅಬ್ದುಲ್ ಗನಿ ಜೈಲಲ್ಲಿ ಮರಣ

|
Google Oneindia Kannada News

ಮುಂಬೈ, ಏಪ್ರಿಲ್ 25: 1993ರ ಮುಂಬೈ ಸರಣಿ ಸ್ಫೋಟದಲ್ಲಿ ಅಪರಾಧಿಯಾಗಿದ್ದ ಅಬ್ದುಲ್ ಗನಿ ತುರ್ಕ್ ಇಂದು ಮೃತಪಟ್ಟಿದ್ದಾನೆ. ನಾಗ್ಪುರದ ಜಿಎಂಸಿ ಆಸ್ಪತ್ರೆಯಲ್ಲಿ ಗುರುವಾರದಂದು ಗನಿ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ನಾಗ್ಪುರದ ಕೇಂದ್ರ ಕಾರಾಗೃಹದಲ್ಲಿ ಅಬ್ದುಲ್ ಗನಿ ತುರ್ಕ್ ಇರಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ಎನಿಸಿದವರ ಪೈಕಿ ಗನಿ 8ನೆಯವನಾಗಿದ್ದೆನೆ. ರಾಯ್ ಗಢ ಜಿಲ್ಲೆಯ ಶೆಖಾಡಿ ಕರಾವಳೀಯಲ್ಲಿ ಆರ್ ಡಿಎಕ್ಸ್ ಇಟ್ಟು ಕಾರ್ಯಾಚರಣೆ ನಡೆಸಿದ ಆರೋಪ ಸಾಬೀತಾಗಿತ್ತು.

ಗನಿ ವಿರುದ್ಧ ಐಪಿಸಿ ಸೆಕ್ಷನ್ 302, 307, 326, 324, 435, 436 ಅನ್ವಯ ಪ್ರಕರಣಗಳು ದಾಖಲಾಗಿ, ಸಾಬೀತಾಗಿತ್ತು. ಇದಲ್ಲದೆ, ಸ್ಫೋಟಕ ವಸ್ತು ನಿಯಂತ್ರಣ ಕಾಯ್ದೆ ಸೆಕ್ಷನ್ 9 ಬಿ (1), ಸೆಕ್ಷನ್ 3, 4(ಎ), (ಬಿ) ಹಾಗೂ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ನಿಯಂತ್ರಣ ಕಾಯ್ದೆ ಸೆಕ್ಷನ್ 4ರ ಅಡಿಯಲ್ಲೂ ಆರೋಪ ಸಾಬೀತಾಗಿತ್ತು.

1993 Mumbai serial blasts convict Abdul Gani Turk dies in Nagpur Jail

1993ರಲ್ಲಿ ಮುಂಬೈನ 12ಕ್ಕೂ ಅಧಿಕ ಕಡೆಗಳಲ್ಲಿ ಸಂಭವಿಸಿದ ಸ್ಫೋಟದಲ್ಲಿ 257ಕ್ಕೂ ಅಧಿಕ ಮಂದಿ ಮೃತಪಟ್ಟು 1400 ಮಂದಿ ಗಾಯಗೊಂಡಿದ್ದರು.

English summary
Abdul Gani Turk, 1993 Mumbai serial blast convict died on Thursday in GMC Hospital, Nagpur. The deatils of his death could not be assertained immedietly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X