• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಪ್ರೇಮ್‌ ಉಳಿಸಲು ನೆರವಾಗಿ

By ಒನ್ ಇಂಡಿಯಾ ಸ್ಟಾಫ್
|

'ನನ್ನ ಮಗನ ಕಿಡ್ನಿ ಕಾಯಿಲೆ ಈಗ ಐದನೇ ಹಂತಕ್ಕೆ ತಲುಪಿದೆ. ಇದು ಆತನನ್ನು ಮತ್ತಷ್ಟು ಶೋಚನೀಯ ಸ್ಥಿತಿಗೆ ತಂದಿದೆ. ಆತ ತೀವ್ರವಾಗಿ ರೋಗಪೀಡಿತನಾಗಿದ್ದಾನೆ' ಎನ್ನುತ್ತಾ ಕುಸಿದುಹೋದರು ಚರಕಲಾ. 'ಇಂತಹ ಪರಿಸ್ಥಿತಿ ಯಾವ ಪೋಷಕರಿಗೂ ಎಂದಿಗೂ ಬರಬಾರದು' ಎಂದರು.

ಅವರ 15 ವರ್ಷದ ಮಗ ಪ್ರೇಮ್ ಮೂತ್ರಪಿಂಡ ಕಾಯಿಲೆ, ಹೈಪರ್‌ಟೆನ್ಷನ್ ಮತ್ತು ಕ್ರೋನಿಕ್ ಗ್ಲಾಮೆರುಲೋನೆಫ್ರಿಟಿಸ್ (ರಕ್ತವನ್ನು ಶುದ್ಧೀಕರಿಸುವ ಮತ್ತು ಮೂತ್ರ ಉತ್ಪತ್ತಿ ಮಾಡುವ ಅಂಗಕ್ಕೆ ಹಾನಿಯುಂಟುಮಾಡುವ ಮೂತ್ರಪಿಂಡ ಕಾಯಿಲೆ) ರೋಗಗಳಿಗೆ ತುತ್ತಾಗಿ ಒಂದು ವರ್ಷಕ್ಕೂ ಹೆಚ್ಚು ಸಮಯ ಕಳೆದಿದೆ.

ಬಡ ತಾಯಿಗೆ ದುರಂತಗಳು ಹೊಸತಲ್ಲ

ಕೆಲವು ವರ್ಷಗಳ ಹಿಂದೆ ಚರಕಲಾ ಅವರ ಪತಿ ಕಾಮೇಶ್ ಮೂತ್ರಪಿಂಡ ಕಾಯಿಲೆಗೆ ತುತ್ತಾಗಿದ್ದರು. ಇದ್ದಕ್ಕಿದ್ದಂತೆ ಅವರು ಹಾಸಿಗೆ ಹಿಡಿದರು. ಅವರಿಗೆ ನಡೆಯಲು ಆಗುತ್ತಿರಲಿಲ್ಲ. ಸಣ್ಣಪುಟ್ಟ ಕೆಲಸಗಳನ್ನು ಮಾಡಲೂ ಸಾಧ್ಯವಾಗುತ್ತಿರಲಿಲ್ಲ. ಅವರ ಬದುಕು ಅಕ್ಷರಶಃ ಸ್ಥಗಿತಗೊಂಡಿತ್ತು. ಮನೆ ನಡೆಸಲು ಬೇಕಾದ ಆದಾಯವೇ ಇರಲಿಲ್ಲ.

ಹೀಗಾಗಿ ಚರಕಲಾ ತಮ್ಮ ಕುಟುಂಬವನ್ನು ಸಾಕಲು ಸ್ವತಃ ಮುಂದಾದರು. ಮನೆಗೆಲಸದ ವೃತ್ತಿ ಆರಂಭಿಸಿದರು. ಅದರಿಂದ ಅವರಿಗೆ ಸಿಗುತ್ತಿದ್ದದ್ದು 4,000 ರೂ. ಆದರೂ ಹೇಗೋ ಅದು ದಿನದ ಊಟಕ್ಕೆ ಸಾಲುತ್ತಿತ್ತು.

ಮೂಲ ಅಗತ್ಯಗಳನ್ನೇ ಒದಗಿಸಲು ಸಾಧ್ಯವಾಗದೆ ಹೆಣಗಾಡುತ್ತಿದ್ದ ಪೋಷಕರನ್ನು ನೋಡುತ್ತಲೇ ಪ್ರೇಮ್ ಬೆಳೆದ. ಆತ ಚೆನ್ನಾಗಿ ಓದಿ ಒಳ್ಳೆಯ ಉದ್ಯೋಗ ಪಡೆದುಕೊಳ್ಳಬೇಕು ಎಂದು ದೃಢನಿಶ್ಚಯ ಹೊಂದಿದ್ದ. 'ಅಮ್ಮಾ, ನಾನು ದುಡಿಯಲು ಆರಂಭಿಸಿದ ಬಳಿಕ ನಿನಗೆ ಮತ್ತು ಅಪ್ಪನಿಗಾಗಿ ಮನೆಯೊಂದನ್ನು ಖರೀದಿ ಮಾಡುತ್ತೇನೆ' ಎಂದು ಅವನು ನನಗೆ ಹೇಳಿದ್ದ. ಆದರೆ ವಿಧಿ ನನ್ನ ಮಗನಿಗೆ ದುರದೃಷ್ಟಕರ ನಿರ್ಧಾರ ತೆಗೆದುಕೊಂಡಿತ್ತು' ಎಂದು ಬಿಕ್ಕಿದರು ಚರಕಲಾ.

ಈ ತರುಣನೂ ಹಾಸಿಗೆ ಹಿಡಿದ

ಪ್ರೇಮ್‌ಗಿರುವ ಕಾಯಿಲೆ 2008ರ ಏಪ್ರಿಲ್‌ನಲ್ಲಿ ಪತ್ತೆಯಾದಾಗಿನಿಂದ ಔಷಧ ಮತ್ತು ಚಿಕಿತ್ಸೆ ನೀಡುತ್ತಿದ್ದರೂ ಆತನ ಆರೋಗ್ಯ ಕ್ಷೀಣಿಸುತ್ತಲೇ ಇತ್ತು. ಈಗ ತನ್ನ ಹಾಸಿಗೆಯಿಂದಲೂ ಚಲಿಸಲಾಗದಂತಹ ಸ್ಥಿತಿಗೆ ಆತ ತಲುಪಿದ್ದಾನೆ. ಆತನ ರಕ್ತದೊತ್ತಡ ನಿರಂತರವಾಗಿ ಹೆಚ್ಚಳದಲ್ಲಿಯೇ ಇದೆ ಮತ್ತು ಕಾಲುಗಳು ಹಾಗೂ ಸಂಧಿಗಳಲ್ಲಿ ವಿಪರೀತ ನೋವು ಕಾಡುತ್ತಿದೆ.

'ಆತ ತನ್ನ ಬದುಕಿನ ಹೋರಾಟವನ್ನು ಬಿಟ್ಟಂತೆ ಕಾಣಿಸುತ್ತಿದೆ. ಕೆಲವು ತಿಂಗಳುಗಳಿಂದ ನಾನು ಆತನ ನಗುವನ್ನೂ ನೋಡಿಲ್ಲ. ಅವನು ನನ್ನ ಎದುರು ಅಳುವುದಕ್ಕೂ ಮುಂದಾಗುವುದಿಲ್ಲ. ಏಕೆಂದರೆ ನನಗೆ ನೋವುಂಟುಮಾಡುವುದು ಅವವನಿಗೆ ಇಷ್ಟವಿಲ್ಲ' ಎನ್ನುತ್ತಾರೆ ಚರಕಲಾ.

ಆತನಿಗೆ ಕೂಡಲೇ ಮೂತ್ರಪಿಂಡ ಕಸಿ ನಡೆಯದೇ ಹೋದರೆ ಅವನ ಜೀವವನ್ನು ಉಳಿಸುವುದು ತೀರಾ ಕಷ್ಟಕರ ಎಂದು ವೈದ್ಯರು ಹೇಳಿದ್ದಾರೆ. ಕೆಲವು ಪರೀಕ್ಷೆಗಳು ನಡೆದಿದ್ದು, ಅದಕ್ಕೆ ಚರಕಲಾ ಅವರೇ ಸೂಕ್ತ ದಾನಿ ಎಂಬುದು ಗೊತ್ತಾಗಿದೆ. ಆದರೆ ಈ ಬಡ ತಾಯಿ ಮಗನ ಜೀವ ಉಳಿಸುವ ಸಲುವಾಗಿ ತಾನೊಬ್ಬಳೇ ದುಡಿದು 10,00000.00 ರೂ. ಸಂಗ್ರಹಿಸಲು ಕಷ್ಟಪಡಬೇಕಿದೆ.

'ನನಗೆ ಗೊತ್ತಿರುವ ಪ್ರತಿಯೊಬ್ಬ ವ್ಯಕ್ತಿಯನ್ನೂ ಬೇಡಿಕೊಂಡೆ. ಆದರೆ ಅಷ್ಟು ದೊಡ್ಡ ಮೊತ್ತದ ಹಣದ ಸಹಾಯ ಮಾಡಲು ಯಾರೂ ತಯಾರಿಲ್ಲ. ನನ್ನ ಬಳಿ ಯಾವ ಉಳಿತಾಯವೂ ಇಲ್ಲ, ಮಾರಾಟ ಮಾಡಲು ಕೂಡ ಏನೂ ಇಲ್ಲ' ಎಂದು ಕಣ್ಣೀರಿಡುತ್ತಾರೆ ಅವರು.

'ನನ್ನ ಗಂಡನೂ ಕಾಯಿಲೆಪೀಡಿತ. ನಮ್ಮ ಮಗುವನ್ನು ತನ್ನಿಂದ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅವರು ತಮ್ಮನ್ನು ತಾವೇ ದೂಷಿಸಿಕೊಳ್ಳುತ್ತಿದ್ದಾರೆ. ಆದರೆ ಇದು ನಮ್ಮ ಕೈಯಲ್ಲಿಲ್ಲ. ನನಗೆ ಏನು ಮಾಡುವುದೋ ತೋಚುತ್ತಿಲ್ಲ. ನಮ್ಮ ಮಗನನ್ನು ಉಳಿಸಲು ದಯವಿಟ್ಟು ಸಹಾಯ ಮಾಡಿ' ಎಂದು ಅವರು ಕಣ್ಣೀರು ಸುರಿಸಿದರು.

ನೀವು ಹೇಗೆ ಸಹಾಯ ಮಾಡಬಹುದು?

ಚರಕಲಾ ಅವರು ತಮ್ಮ ಕುಟುಂಬದಲ್ಲಿ ದುಡಿಯುತ್ತಿರುವ ಏಕೈಕ ವ್ಯಕ್ತಿ. ತಮ್ಮ ಒಬ್ಬನೇ ಮಗನ ಜೀವ ಉಳಿಸಲು ಆ ಬಡ ತಾಯಿಯ ಬಳಿ ಯಾವ ಹಣವೂ ಇಲ್ಲ. ನಿಮ್ಮ ಅಲ್ಪ ಕಾಣಿಕೆ ಬಹುದೊಡ್ಡ ನೆರವು ನೀಡಬಲ್ಲದು. ದಯವಿಟ್ಟು ಉದಾರವಾಗಿ ದೇಣಿಗೆ ನೀಡಿ.

ಇತರೆ ದೇಣಿಗೆ ಮಾರ್ಗಗಳು

ದೇಣಿಗೆ ಸಂಗ್ರಹಿಸುತ್ತಿರುವವರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಬಹುದು. ಕೇವಲ ಭಾರತೀಯ ರೂಪಾಯಿಗೆ ಅವಕಾಶ.

ವರ್ಚ್ಯುವಲ್ ಖಾತೆ ಸಂಖ್ಯೆ: 6999413500135521

ವರ್ಚ್ಯುವಲ್ ಖಾತೆ ಹೆಸರು: ಚರಕಲಾ-ಕೆಟ್ಟೊ

ಖಾತೆ ಮಾದರಿ: ಚಾಲ್ತಿ

ಐಎಫ್‌ಎಸ್‌ಸಿ: YESB0CMSNOC

ketto.org ಭಾರತದ ಆನ್‌ಲೈನ್ ಕ್ರೌಡ್‌ಫಂಡಿಂಗ್ ವೇದಿಕೆಯಾಗಿದ್ದು, ಎಲ್ಲರಿಗೂ ಅನುದಾನವನ್ನು ಸಂಗ್ರಹಿಸುವ ಕಾರ್ಯದಲ್ಲಿ ಇದು ನೆರವು ನೀಡುತ್ತದೆ. ಕ್ಯಾನ್ಸರ್ ಚಿಕಿತ್ಸೆ, ರಕ್ತಕ್ಯಾನ್ಸರ್ ಚಿಕಿತ್ಸೆ, ಹೃದಯ ಕಸಿ ಮತ್ತು ಇತರೆ ವೈದ್ಯಕೀಯ ಚಿಕಿತ್ಸೆಗಳಿಗೆ ಕ್ರೌಡ್‌ಫಂಡಿಂಗ್ ಪಡೆದುಕೊಳ್ಳಲು ಜನರಿಗೆ ಕೆಟ್ಟೋ ಸಹಾಯ ಮಾಡುತ್ತದೆ.

English summary
15 year old prem will lose his life if he doesn't a kidney transplant urgently. Help her mother to save he only son.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X