ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀವು ನೀಡುವ ಉದಾರ ದೇಣಿಗೆಯಿಂದ ಮಾತ್ರ ನಮ್ಮ ಮಗ ಬದುಕ್ತಾನೆ...

Google Oneindia Kannada News

ನಾನು ದಿನಗೂಲಿ ನೌಕರ. ನಮ್ಮ ಆದಾಯ ತೀರಾ ಕಡಿಮೆ. ಮೂರು ಜನರ ಕುಟುಂಬವನ್ನು ಸಾಕುವುದೇ ನನ್ನ ಪಾಲಿಗೆ ದೊಡ್ಡ ಸವಾಲು. ಇದೀಗ ನನ್ನ ಮಗ ಮಹೇಶ್ ಗೆ ಬಹಳ ತುರ್ತಾಗಿ ಓಪನ್ ಹಾರ್ಟ್ ಸರ್ಜರಿ ಆಗಬೇಕಿದೆ. ಅದಕ್ಕಾಗಿ 4.5 ಲಕ್ಷ ರುಪಾಯಿ ($ 6314) ಹೊಂದಿಸಬೇಕಿದೆ. ನನ್ನಂಥ ಬಡವನಿಗೆ ಅದು ಹೇಗೆ ಸಾಧ್ಯವಾಗಬೇಕು; ನಿಮ್ಮಂಥ ಉದಾರಿಗಳು- ದಾನಿಗಳ ನೆರವಿಲ್ಲದೆ? ನೀವು ಉದಾರವಾಗಿ ದೇಣಿಗೆ ನೀಡಿದರೆ ನನ್ನ ಮಗ ಬದುಕ್ತಾನೆ.

Recommended Video

Nalpad in Trouble Again! Vyalikaval police have FIR filed against MLA N. A Harris son Nalapad

ನಮ್ಮದು ತುಂಬ ಸಂತೋಷವಾಗಿದ್ದ ಕುಟುಂಬ. ಆದರೆ ಈಗ ಪ್ರತಿ ದಿನ ಬೆಳಗ್ಗೆ ಎದ್ದ ತಕ್ಷಣ ದೇವಸ್ಥಾನಕ್ಕೆ ಹೋಗ್ತೀನಿ. ನನ್ನ ಮಗ ಅನುಭವಿಸುತ್ತಿರುವ ಆ ನೋವಿನಿಂದ ಹೊರಬರಲು ನೆರವಾಗು ದೇವರೇ ಅಂತ ಕೈ ಮುಗಿದು ಬೇಡಿಕೊಳ್ಳುತ್ತೇನೆ. ಎಲ್ಲರೂ ಹೇಳ್ತಾರೆ: ಆ ದೇವರು ನಮ್ಮ ಮೊರೆಯನ್ನು ಕೇಳಿಸಿಕೊಳ್ಳುತ್ತಾನೆ. ಆದರೆ ಈ ತನಕ ನನ್ನ ಪ್ರಾರ್ಥನೆಯನ್ನು ಆ ದೇವರು ಕೇಳಿಸಿಕೊಂಡಿಲ್ಲ.

ಒಂದು ದಿನ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ ಬಂದಿದ್ದೆ. ಮಗ ಆಟ ಆಡುವುದಕ್ಕೆ ಹೊರಗೆ ಹೋಗಿದ್ದ. ಇನ್ನೇನು ಅವನು ಬರ್ತಾನೆ ಅಂತ ಕಾಯ್ತಿದ್ದೆ. ಕೆಲ ನಿಮಿಷಗಳಲ್ಲೇ ಅವನು ವಾಪಸ್ ಕೂಡ ಬಂದಿದ್ದ. ಆದರೆ ಬಹಳ ಸುಸ್ತಾಗಿದ್ದ, "ಅಪ್ಪ, ನನ್ನಿಂದ ಉಸಿರಾಡುವುದಕ್ಕೆ ಆಗ್ತಿಲ್ಲ" ಎಂದು ಹೇಳುವುದಕ್ಕೂ ಬಹಳ ಕಷ್ಟಪಟ್ಟ.

Please Fund Us Generously To Save Our Son From Heart Decease

ನನಗೆ ಕೈ ಕಾಲು ಆಡಲಿಲ್ಲ. ಕೂಡಲೇ ಆಸ್ಪತ್ರೆಗೆ ಓಡಿದೆ. ಸಾಮಾನ್ಯವಾಗಿ ಅವನಿಗೆ ಹುಷಾರಿಲ್ಲದಿದ್ದಾಗ ಔಷಧಿ ಕೊಡುವ ಡಾಕ್ಟರ್ ಅವರೇ. ಅಲ್ಲಿ ಅವನಿಗೆ ಮಾತ್ರೆ- ಇಂಜೆಕ್ಷನ್ ಕೊಟ್ಟರು. ಕೆಲ ಹೊತ್ತಿಗೆ ಅವನು ಪರವಾಗಿಲ್ಲ ಎಂಬಂತಾದ. ವಾಪಸ್ ಮನೆಗೆ ಕರೆದುಕೊಂಡು ಬಂದೆ.

ಆದರೆ, ಕೆಲವು ದಿನದ ನಂತರ ಅವನಿಗೆ ವಿಪರೀತ ಜ್ವರ ಬಂತು. ಆ ಸಲ ನಮಗೆ ಅವನದೇ ಚಿಂತೆ ಎಂಬಂತೆ ಆಯಿತು. ಮನೆ ಔಷಧಿಯನ್ನು ಪ್ರಯತ್ನಪಟ್ಟೆವು, ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಯಾವುದೂ ಕೆಲಸ ಮಾಡಲಿಲ್ಲ. ಆ ನಂತರ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಅಲ್ಲಿ ಅವನಿಗೆ ನಾನಾ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿದರು.

Please Fund Us Generously To Save Our Son From Heart Decease

ಆ ಪರೀಕ್ಷೆಗಳಿಂದ ಗೊತ್ತಾಗಿದ್ದೇನೆಂದರೆ, ಅವನಿಗೆ ಸೈನೋಟಿಕ್ ಕಂಜೆನ್ಷಿಯಲ್ ಹಾರ್ಟ್ ಡಿಸೀಸ್. ಇದು ಡಾಕ್ಟರ್ ಕೊಟ್ಟ ಹೆಸರು. ಅವನಿಗೆ ಹೃದಯ ಸಂಬಂಧಿ ಅನಾರೋಗ್ಯವಾಗಿದೆ ಎಂಬುದು ನಮಗೆ ಗೊತ್ತಾಗಿದ್ದು. ಒಂದು ಕ್ಷಣ ದಿಕ್ಕೇ ತೋಚದಂತಾಯಿತು. ಅಷ್ಟು ಚಟುವಟಿಕೆಯಾಗಿದ್ದ ಹುಡುಗನಿಗೆ ಅಂಥ ಕಾಯಿಲೆ ಅಂದರೆ ನನ್ನ ಹೆಂಡತಿ ನಾಗಮಣಿ ನಂಬಲು ತಯಾರಿರಲಿಲ್ಲ. ಕೆಲವು ದಿನ ನಾಗಮಣಿ ಏನನ್ನೂ ತಿನ್ನಲಿಲ್ಲ.

ಸದಾ ಅಳುತ್ತಿದ್ದಳು. ಮಗನನ್ನು ಗುಣಪಡಿಸು ಎಂದು ಆ ದೇವರನ್ನು ಪ್ರಾರ್ಥಿಸುತ್ತಿದ್ದಳು. ನನ್ನ ಮಗ ಹಾಗೂ ಹೆಂಡತಿಯನ್ನು ಆ ಸ್ಥಿತಿಯಲ್ಲಿ ನೋಡಿದರೆ ಹೃದಯ ಒಡೆದುಹೋದಂತೆ ಆಗುತ್ತದೆ. ನಮಗೇ ಯಾಕೆ ಇಂಥ ಶಿಕ್ಷೆ ಅನ್ನೋದು ನನಗೆ ಗೊತ್ತಿಲ್ಲ. ಸದ್ಯಕ್ಕೆ ನಮ್ಮ ಮಗನ ಚಿಕಿತ್ಸೆಗೆ ಹಣ ಹೊಂದಿಸುವುದು ಅಸಾಧ್ಯದ ಸಂಗತಿ.

Please Fund Us Generously To Save Our Son From Heart Decease

ವೈದ್ಯರು ಹೇಳುವಂತೆ, ನನ್ನ ಮಗನಿಗೆ ತಕ್ಷಣವೇ ಚಿಕಿತ್ಸೆ ಶುರು ಮಾಡಬೇಕು. ನಮಗೆ ಕೆಲವು ಔಷಧಿ ತರಲು ವೈದ್ಯರು ಬರೆದುಕೊಡುತ್ತಿದ್ದಾರೆ. ಅದು ತಾತ್ಕಾಲಿಕ ಪರಿಹಾರ ಮಾತ್ರ. ಶಸ್ತ್ರಚಿಕಿತ್ಸೆಯಿಂದ ಮಾತ್ರ ಅವನು ಸರಿಯಾಗಲು ಸಾಧ್ಯ. ಎರಡು ತಿಂಗಳೇ ಕಳೆದರೂ ಇನ್ನೂ ನನ್ನ ಮಗನ ಚಿಕಿತ್ಸೆಗೆ ಹಣ ಹೊಂದಿಸಲು ಆಗ್ತಾ ಇಲ್ಲ.

ದಿನ ಕಳೆದಂತೆ ಅವನ ಆರೋಗ್ಯ ಕ್ಷೀಣಿಸುತ್ತಾ ಇದೆ. ಕೆಲವು ಸಲ ಜ್ವರ ಜಾಸ್ತಿ ಆಗುತ್ತದೆ. ಕೆಲ ನಿಮಿಷಗಳ ಕಾಲ ಓಡಾಡಿದರೂ ಅವನ ಚರ್ಮ ನೀಲಿಗಟ್ಟುತ್ತದೆ. ಅವನ ವಯಸ್ಸಿನ ಮಕ್ಕಳು ಶಾಲೆ- ಆಟ ಅಂತ ಖುಷಿಖುಷಿಯಾಗಿ ಇರುತ್ತಾರೆ. ನನ್ನ ಮಗ ಹಾಸಿಗೆ ಮೇಲೆ ದಿನ ಕಳೆಯುತ್ತಿದ್ದಾನೆ.

Please Fund Us Generously To Save Our Son From Heart Decease

ನಿಮ್ಮೆಲ್ಲರನ್ನೂ ಕೈ ಮುಗಿದು ಕೇಳಿಕೊಳ್ತೀನಿ, ನನ್ನ ಮಗ ಮಹೇಶ್ ನನ್ನು ಉಳಿಸಿಕೊಳ್ಳಲು ಉದಾರವಾಗಿ ದಾನ ಮಾಡಿ. ಅವನ ಬದುಕು ಇನ್ನೂ ಸಾಕಷ್ಟಿದೆ. ಅದನ್ನು ಬದುಕಲು ಒಂದು ಅವಕಾಶ ನೀಡಿ. ನೀವು ನೀಡುವ ಸಹಾಯಕ್ಕೆ ನಮ್ಮ ಬದುಕಿನುದ್ದಕ್ಕೂ ಋಣಿಗಳಾಗಿ ಇರ್ತೀವಿ.

"Fundraising for cancer is a way to support medical treatment cost. Ketto is a largest crowdfunding website that supports crowdfunding for cancer, heart and many other treatments."

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X