ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಿಲಿಪೈನ್ಸ್ ಮಿಲಿಟರಿ ಯುದ್ಧ ವಿಮಾನ ಅಪಘಾತ, 40 ಮಂದಿ ರಕ್ಷಣೆ

|
Google Oneindia Kannada News

ಮನಿಲಾ, ಜುಲೈ 4: ಯೋಧರನ್ನು ಹೊತ್ತೊಯ್ಯುತ್ತಿದ್ದ ಮಿಲಿಟರಿ ಯುದ್ಧ ವಿಮಾನವೊಂದು ಪತನಗೊಂಡಿದೆ. 92 ಮಂದಿ ಇದ್ದ ವಿಮಾನವು ಭಾನುವಾರ ಬೆಳಗ್ಗೆ ಮನಿಲಾದಿಂದ 1,000 ಕಿ.ಮೀ ದೂರದಲ್ಲಿರುವ ಸುಲು ಪ್ರಾಂತ್ಯದಲ್ಲಿ ನೆಲಕ್ಕುರುಳಿದೆ.

ಯುದ್ಧ ವಿಮಾನ ಸಿ 130 ಪತನವನ್ನು ಸಶಸ್ತ್ರ ಪಡೆ ಮುಖ್ಯಸ್ಥ ಸಿರಿಲಿಟೊ ಸೊಬೆಜಾನಾ ಅವರು ಖಚಿತಪಡಿಸಿದ್ದಾರೆ. ಸಿ 130 ಯುದ್ಧ ವಿಮಾನದ ಅವಶೇಷಗಳಿಂದ 40 ಮಂದಿಯನ್ನು ರಕ್ಷಿಸಲಾಗಿದೆ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ. 17 ಮಂದಿ ಮೃತಪಟ್ಟಿರುವುದನ್ನು ರಕ್ಷಣಾ ಕಾರ್ಯದರ್ಶಿ ಡೆಲ್ಫಿನ್ ಲೊರೆಜಾನಾ ಖಚಿತಪಡಿಸಿದ್ದಾರೆ.

ವಿಮಾನದಲ್ಲಿ 84 ಮಂದಿ ಪ್ರಯಾಣಿಕರಿದ್ದ ಬಹುತೇಕ ಯೋಧರಾಗಿದ್ದರು, ಮಿಕ್ಕಂತೆ 3 ಪೈಲಟ್, 5 ಮಂದಿ ವಿಮಾನ ಸಿಬ್ಬಂದಿ ಇದ್ದರು. ಮಿಲಿಟರಿ ಕಾಲೇಜಿನಿಂದ ಪದವಿಧರರಾದ ಯುವ ಯೋಧರು ಪ್ರಯಾಣಿಸುತ್ತಿದ್ದರು. ಜಂಟಿ ಕಾರ್ಯಾಚರಣೆಯೊಂದರಲ್ಲಿ ಪಾಲ್ಗೊಂಡು ಹೆಚ್ಚಿನ ತರಬೇತಿ ಪಡೆಯಲು ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.

The plane was of the C-130 type operated by the Philippines military

ರನ್ ವೇಯಲ್ಲೇ ತಾಂತ್ರಿಕ ದೋಷ ಎದುರಿಸಿದ ವಿಮಾನ, ಟೇಕಾಫ್ ನಂತರ ಸಂಭಾಳಿಸಲು ಸಾಧ್ಯವಾಗದೆ ನಿಯಂತ್ರಣ ತಪ್ಪಿ ಸುಲು ಪ್ರಾಂತ್ಯದ ಜೊಲೊ ದ್ವೀಪದ ಬಳಿ ನೆಲಕ್ಕಪ್ಪಳಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಸಾವು ನೋವಿನ ಸಂಖ್ಯೆ ಬಗ್ಗೆ ಖಚಿತ ಮಾಹಿತಿಯಿಲ್ಲ, ಗಾಯಾಳುಗಳನ್ನು ಮಿಲಿಟರಿ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಲಾಗಿದೆ.

ಸುಲು ಪ್ರಾಂತ್ಯದ ಈ ದ್ವೀಪದಲ್ಲಿ ಅಬು ಸಯ್ಯಾಫ್ ಉಗ್ರ ಗುಂಪಿನ ವಿರುದ್ಧ ಯುಎಸ್ ಹಾಗೂ ಫಿಲಿಪೈನ್ ಹೋರಾಟ ನಡೆಸುತ್ತಾ ಬಂದಿದೆ.

English summary
The armed forces of the Philippines says a plane carrying more than 80 people crashed during takeoff in the southern Sulu province.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X