ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಐಸೋಲೇಶನ್ ವಾರ್ಡ್‌ನಲ್ಲಿದ್ದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ?

|
Google Oneindia Kannada News

ಪಾಟ್ನಾ, ಏಪ್ರಿಲ್ 9: ಭಾರತ ಸೇರಿದಂತೆ ಇಡೀ ಜಗತ್ತು ಕೊರೊನಾ ವೈರಸ್‌ ವಿರುದ್ಧ ಹೋರಾಡುತ್ತಿದೆ. ದೇಶದ ಆರ್ಥಿಕತೆ ಹಾಗೂ ದೇಶದ ಜನರನ್ನು ಉಳಿಸಿಕೊಳ್ಳಬೇಕು ಎಂದು ರಾತ್ರಿ ಹಗಲು ಸರ್ಕಾರ ಹಾಗೂ ವೈದ್ಯರು ಕಷ್ಟಪಡುತ್ತಿದ್ದಾರೆ. ದೇಶದ ಜನರ ಕಣ್ಣು ಕೊರೊನಾಗೆ ಕೊನೆ ಯಾವಾಗ ಎಂದು ಕಾಯುತ್ತಿದ್ದಾರೆ.

ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ದುರಂತದ ಘಟನೆಯೊಂದು ಬಿಹಾರ್‌ದಲ್ಲಿ ನಡೆದಿದೆ. ಕೊರೊನಾ ರೋಗದ ಲಕ್ಷಣಗಳನ್ನು ಹೊಂದಿದ್ದ ಶಂಕಿತೆಯನ್ನು ಆಸ್ಪತ್ರೆಯ ಐಸೋಲೇಶನ್ ವಾರ್ಡ್‌ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಕೊರೊನಾ ಹರಡುತ್ತಾರೆ ಎಂದು ಆರೋಪಿಸಿ ಮಹಿಳಾ ವೈದ್ಯರ ಮೇಲೆ ಹಲ್ಲೆಕೊರೊನಾ ಹರಡುತ್ತಾರೆ ಎಂದು ಆರೋಪಿಸಿ ಮಹಿಳಾ ವೈದ್ಯರ ಮೇಲೆ ಹಲ್ಲೆ

ಆದರೆ, ಆ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯವಾಗಿದೆ ಎಂದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ದುರಂತ ಅಂದ್ರೆ ಆ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ. ಅಷ್ಟಕ್ಕೂ, ಈ ಘಟನೆ ಸಂಭವಿಸಿದ್ದೆಲ್ಲಿ? ಮುಂದೆ ಓದಿ...

25 ವರ್ಷದ ಮಹಿಳೆ

25 ವರ್ಷದ ಮಹಿಳೆ

25 ವರ್ಷದ ಮಹಿಳೆ ಪಂಜಾಬ್‌ನ ಲೂಧಿಯಾನದಿಂದ ತನ್ನ ಪತಿಯೊಂದಿಗೆ ಮಾರ್ಚ್ 25ರಂದು ಬಿಹಾರ್‌ದ ಗಯಾ ಜಿಲ್ಲೆಗೆ ಬಂದಿದ್ದರು. ಗಮನಿಸಬೇಕಾದ ವಿಚಾರ ಅಂದ್ರೆ ಆಕೆಗೆ 2 ತಿಂಗಳ ಹಿಂದೆಯಷ್ಟೇ ಗರ್ಭಪಾತವಾಗಿತ್ತು. ನಂತರ ಅತಿಯಾದ ರಕ್ತಸ್ರಾವವಾಗುತ್ತಿದ್ದ ಕಾರಣ ಆಕೆಯನ್ನು ಮಾರ್ಚ್ 27 ರಂದು ಆಸ್ಪತ್ರೆಗೆ ಸೇರಿಸಲಾಯಿತು.

ಕೊರೊನಾ ಶಂಕೆ?

ಕೊರೊನಾ ಶಂಕೆ?

ಅನುಗ್ರಹ ನೈರೆಣ ಮಗಧ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು ದಾಖಲಿಸಲಾಯಿತು. ತುರ್ತು ನಿಗಾ ಘಟಕದಲ್ಲಿ ಆಕೆಯನ್ನು ಇರಿಸಿ ಚಿಕಿತ್ಸೆ ನೀಡುತ್ತಿದ್ದರು. ಬಳಿಕ ಏಪ್ರಿಲ್ 1 ರಂದು ಆಕೆಗೆ ಕೊರೊನಾ ಶಂಕೆ ಇದೆ ಎಂದು ಹೇಳಿ ಐಸೋಲೇಶನ್ ವಾರ್ಡ್‌ಗೆ ಸ್ಥಳಾಂತರ ಮಾಡಲಾಯಿತು.

ದಾವಣಗೆರೆಯಲ್ಲಿ ಗ್ರಾ.ಪಂ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳದಾವಣಗೆರೆಯಲ್ಲಿ ಗ್ರಾ.ಪಂ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ

ವೈದ್ಯರಿಂದ ಲೈಂಗಿಕ ದೌರ್ಜನ್ಯ

ವೈದ್ಯರಿಂದ ಲೈಂಗಿಕ ದೌರ್ಜನ್ಯ

ಐಸೋಲೇಶನ್‌ ವಾರ್ಡ್‌ನಲ್ಲಿ ತಡರಾತ್ರಿ ತಪಾಸಣೆಗೆ ಬರುತ್ತಿದ್ದ ವೈದ್ಯರು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿದ್ದಾರೆ ಎಂದು ಮಹಿಳೆಯ ಅತ್ತೆ ಆರೋಪಿಸಿದ್ದಾಳೆ. ಏಪ್ರಿಲ್ 2 ಮತ್ತು ಏಪ್ರಿಲ್ 3 ರಂದು ಎರಡು ದಿನ ರಾತ್ರಿ ಸತತವಾಗಿ ಆಕೆಗೆ ಕಿರುಕುಳ ನೀಡಲಾಗಿದೆ ಎಂದು ದೂರಿದ್ದಾಳೆ. 'ಕೊರೊನಾ ಇಲ್ಲ ಎಂದು ಹೇಳಿ ಮಹಿಳೆಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದರು. ಮನೆಗೆ ಬಂದ ಮೇಲೆ ಆಕೆ ತುಂಬ ಭಯಗೊಂಡಿದ್ದಳು. ಪದೇ ಪದೇ ಒತ್ತಡ ಹೇರಿದ ಬಳಿಕ ವೈದ್ಯರು ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಬಗ್ಗೆ ಹೇಳಿಕೊಂಡಳು' ಎಂದು ಅತ್ತೆ ದೂರಿದ್ದಾಳೆ.

ರಕ್ತಸ್ರಾವದಿಂದ ಮಹಿಳೆ ಸಾವು

ರಕ್ತಸ್ರಾವದಿಂದ ಮಹಿಳೆ ಸಾವು

ಆ ಮಹಿಳೆಯ ಅತ್ತೆ ಹೇಳಿರುವ ಪ್ರಕಾರ, ಆಸ್ಪತ್ರೆಯಿಂದ ಮನೆಗೆ ಬಂದ ಎರಡು ದಿನಗಳ ಬಳಿಕ ತನ್ನ ಸೊಸೆ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಳು. ಅದಕ್ಕೆ ಆಕೆ ಮೇಲೆ ವೈದ್ಯರು ನಡೆಸಿರುವ ಲೈಂಗಿಕ ದೌರ್ಜನ್ಯವೇ ಕಾರಣ ಎಂದು ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಪೊಲೀಸರು, ಮಹಿಳೆ ನೀಡಿದ ಗುರುತಿನ ಆಧಾರದಲ್ಲಿ ವೈದ್ಯರನ್ನು ಗುರುತಿಸಲು ಸಾಧ್ಯವೇ ಎಂದು ಪರೀಕ್ಷಿಸಿದ್ದಾರೆ. ಆದರೆ ಅತ್ತೆಯಿಂದ ಸಾಧ್ಯವಾಗಲಿಲ್ಲ ಎಂದು ತಿಳಿದಿದೆ.

ನಕಲಿ ವೈದ್ಯರಾ?

ನಕಲಿ ವೈದ್ಯರಾ?

ಈ ಘಟನೆ ಬಗ್ಗೆ ಆಸ್ಪತ್ರೆಗೆ ಮುಖ್ಯಸ್ಥರು ಪ್ರತಿಕ್ರಿಯೆ ನೀಡಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತೇವೆ. ಸಿಸಿಟಿವಿ ಹಾಗೂ ಇನ್ನಿತರ ದಾಖಲೆಗಳನ್ನು ಪರಿಶೀಲಿಸಿ ಕಠಿಣ ಕ್ರಮ ಜರುಗಿಸುತ್ತೇವೆ ಎಂದಿದ್ದಾರೆ. ಇನ್ನು ಈ ಘಟನೆ ಸಂಬಂಧ ವೈದ್ಯರಂತೆ ವಾರ್ಡ್‌ ಪ್ರವೇಶಿಸಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

English summary
Migrant woman was sexually abused in COVID19 isolation ward at patna in bihar. that women was died says police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X