• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ನಾನು ಮೋದಿಗೆ ಹನುಮಂತ' ಎಂದು ಚಿರಾಗ್ ಪಾಸ್ವಾನ್‌ ಹೇಳಿದ್ದೇಕೆ?

|
Google Oneindia Kannada News

ನವದೆಹಲಿ, ಜೂ. 25: ಚಿರಾಗ್ ಪಾಸ್ವಾನ್‌ ತಮ್ಮ ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ನಿಯಂತ್ರಣಕ್ಕಾಗಿ ಚಿಕ್ಕಪ್ಪ ಪಶುಪತಿ ಪರಾಸ್ ವಿರುದ್ಧ ಹೋರಾಡುತ್ತಿದ್ದಾರೆ. ಈ ನಡುವೆ "ಪ್ರಧಾನಿ ನರೇಂದ್ರ ಮೋದಿಯನ್ನು ಪೂರ್ಣ ಹೃದಯದಿಂದ ಬೆಂಬಲಿಸಿದ ನಂತರ ಹಾಗೂ ಹನುಮನಂತೆ ಪ್ರಧಾನಿಗೆ ಎಲ್ಲವನ್ನೂ ಮಾಡಿದ ನಂತರ ನನ್ನ ಕೆಟ್ಟ ಸಂದರ್ಭದಲ್ಲಿ ನನ್ನೊಂದಿಗೆ ನಿಲ್ಲುತ್ತಾರೆ ಎಂದು ನಿರೀಕ್ಷಿಸಿದ್ದೆ," ಎಂದು ಹೇಳಿದ್ದಾರೆ.

ಈ ಬಗ್ಗೆ ಎನ್‌ಡಿಟಿವಿಯೊಂದಿಗೆ ಮಾತನಾಡಿದ ಎಲ್‌ಜೆಪಿ ನಾಯಕ ಚಿರಾಗ್ ಪಾಸ್ವಾನ್‌, ''ಕಳೆದ ಅಕ್ಟೋಬರ್‌ನಲ್ಲಿ ನಿಧನರಾದ ತನ್ನ ತಂದೆ ಹಾಗೂ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್‌ಗೆ ಪಶುಪತಿ ಪರಾಸ್ ದ್ರೋಹ ಬಗೆದಿದ್ದಾರೆ,'' ಎಂದು ಆರೋಪಿಸಿದರು.

'ನಾನು ಸಿಂಹದ ಮಗ' : ಚಿರಾಗ್ ಪಾಸ್ವಾನ್ ಎಚ್ಚರಿಕೆ'ನಾನು ಸಿಂಹದ ಮಗ' : ಚಿರಾಗ್ ಪಾಸ್ವಾನ್ ಎಚ್ಚರಿಕೆ

ಬಿಜೆಪಿ ಮತ್ತು ಪಿಎಂ ಮೋದಿಯವರು ನಿರಾಸೆ ಅನುಭವಿಸಿದ ನಂತರ ಪಾಸ್ವಾನ್‌, ''ಇನ್ನು ಮುಂದೆ ಯಾರಿಂದಲೂ ಏನನ್ನೂ ನಿರೀಕ್ಷಿಸುವುದಿಲ್ಲ,'' ಎಂದು ಭಾವಾನಾತ್ಮಕವಾಗಿ ನುಡಿದಿದ್ದಾರೆ.

ಪ್ರಧಾನ ಮಂತ್ರಿಯೊಂದಿಗಿನ ತನ್ನ ಸಂಬಂಧವನ್ನು ಹನುಮಂತ ರಾಮನಿಗೆ ಹೋಲಿಕೆ ಮಾಡಿದ್ದರ ಬಗ್ಗೆ ಈ ಸಂದರ್ಭದಲ್ಲಿ ಉಲ್ಲೇಖ ಮಾಡಿದ ಚಿರಾಗ್ ಪಾಸ್ವಾನ್‌, "ನಾನು ಪ್ರಧಾನಮಂತ್ರಿಯ ಹನುಮಂತ. ಹನುಮಂತ ತನ್ನ ರಾಮನಿಗೆ ಸಾಧ್ಯವಿರುವ ಎಲ್ಲವನ್ನೂ ಮಾಡಿದ್ದೇನೆ. ನನ್ನ ಪ್ರಧಾನ ಮಂತ್ರಿಗೆ ನಾನು ಸಾಧ್ಯವಿರುವ ಎಲ್ಲವನ್ನೂ ಮಾಡಿದ್ದೇನೆ. ಪ್ರತಿ ನಿರ್ಧಾರದಲ್ಲೂ ಪ್ರಧಾನಿಯನ್ನು ಪೂರ್ಣ ಹೃದಯದಿಂದ ಬೆಂಬಲಿಸಿದೆ," ಎಂದಿದ್ದಾರೆ.

''ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್‌ ಬೆಂಬಲ ನೀಡದ ಸಂದರ್ಭದಲ್ಲೂ ನಾನು ಆರ್ಟಿಕಲ್ 370 ಅಥವಾ ಸಿಎಎ-ಎನ್ಆರ್‌ಸಿ (ಪೌರತ್ವ ತಿದ್ದುಪಡಿ ಕಾಯ್ದೆ) ನಂತಹ ಕ್ರಮಗಳಿಗೆ ಪಿಎಂ ಮೋದಿಯವರನ್ನು ಬೆಂಬಲಿಸಿದ್ದೇನೆ,'' ಎಂದು ಕೂಡಾ ಹೇಳಿದ್ದಾರೆ ಪಾಸ್ವಾನ್‌.

ಚಿರಾಗ್ ಪತ್ರದ ಗುಟ್ಟು: ಬಿಹಾರದಲ್ಲಿ ಲೋಕ ಜನಶಕ್ತಿ ಪಕ್ಷ ಒಡೆಯಲು ಇದೇ ಕಾರಣ?ಚಿರಾಗ್ ಪತ್ರದ ಗುಟ್ಟು: ಬಿಹಾರದಲ್ಲಿ ಲೋಕ ಜನಶಕ್ತಿ ಪಕ್ಷ ಒಡೆಯಲು ಇದೇ ಕಾರಣ?

"ಆರಂಭದಲ್ಲಿ ನಾನು ಪಕ್ಷದ ದಂಗೆಯ ನಂತರ ನನ್ನ ಪ್ರಧಾನಿ ನನ್ನೊಂದಿಗೆ ನಿಲ್ಲುತ್ತಾರೆ ಎಂದು ನಾನು ನಿರೀಕ್ಷಿಸುತ್ತಿದ್ದೆ. ಆದರೆ ನನ್ನದೇ ಆದ ಅವ್ಯವಸ್ಥೆಯನ್ನು ತೆರವುಗೊಳಿಸುವುದು ನನ್ನದಾಗಿದೆ ಶೀಘ್ರದಲ್ಲೇ ನಾನು ಅರಿತುಕೊಂಡೆ," ಎಂದು 39 ವರ್ಷದ ಮಾಜಿ ನಟ, ರಾಜಕಾರಣಿ ಹೇಳಿದರು.

"ನನ್ನ ಸ್ವಂತ ಕುಟುಂಬ ಸದಸ್ಯರು ನನಗೆ ದ್ರೋಹ ಮಾಡಿದ್ದಾರೆ. ನನ್ನ ತಂದೆಯಂತೆ ಇದ್ದ ನನ್ನ ಚಿಕ್ಕಪ್ಪ ಮತ್ತು ನನ್ನ ಮಗನಂತೆ ಇದ್ದ ನನ್ನ ಸಹೋದರ (ಸೋದರಸಂಬಂಧಿ ಪ್ರಿನ್ಸ್‌). ನಾನು ಆತನ ಪಿಟಿಎ ಸಭೆಗಳಲ್ಲಿ ಭಾಗವಹಿಸಿದ್ದೆ," ಎಂದು ಲೋಕಸಭಾ ಸಂಸದರು ಎಂದರು.

"ಅವರು ಪಾಪಾಗೆ ಹತ್ತಿರವಾಗಿದ್ದನು, ಆದ್ದರಿಂದ ಆವರಿಗೆ ದ್ರೋಹವಾಗಿದೆ. ಅವರು ನನ್ನ ಹಿರಿಯ, ಅವರಿವಗೆ ಏನಾದರೂ ಸಮಸ್ಯೆ ಇದ್ದಲ್ಲಿ, ನನ್ನ ಬಳಿ ಹೇಳಬಹುದಿತ್ತು. ನಾವು ಅದನ್ನು ಎದುರಿಸಲು ಒಟ್ಟಾಗಿ ಕೆಲಸ ಮಾಡಬಹುದಿತ್ತು. ಈ ಪಾಪವು ಎಲ್ಲಿದ್ದರೂ ಸಂತೋಷದಿಂದ ಇರಲು ಬಿಡದು ಎಂದು ನನಗೆ ಖಾತ್ರಿಯಿದೆ," ಎಂದು ಕೂಡಾ ನುಡಿದಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
Why he was Hanuman to PM modi? explained chirag paswan. Read more..
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X