ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರಕ್ಕೆ ಘೋಷಿಸಿದ 1.25 ಲಕ್ಷ ಕೋಟಿ ಅನುದಾನ ಎಲ್ಲಿ: ತೇಜಸ್ವಿ ಯಾದವ್

|
Google Oneindia Kannada News

ಪಾಟ್ನಾ, ನವೆಂಬರ್.03: ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆ ಇದೀಗ ರಾಜ್ಯದಲ್ಲಿ ಪ್ರಚಾರಕ್ಕೆ ಆಗಮಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮಹಾಘಟಬಂಧನ್ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಪತ್ರ ಬರೆದಿದ್ದಾರೆ.

ಕಳೆದ ಐದು ವರ್ಷಗಳ ಹಿಂದೆ ಬಿಹಾರದ ಪ್ರಜೆಗಳಿಗೆ ಎನ್ ಡಿಎ ಮೈತ್ರಿಕೂಟದ ಸರ್ಕಾರವು ನೀಡಿದ್ದ ಭರವಸೆಗಳು ಇಂದು ಏನಾಗಿವೆ ಎಂದು ಪತ್ರದಲ್ಲಿ ಪ್ರಶ್ನಿಸಲಾಗಿದೆ. ಎರಡು ನವೆಂಬರ್.01ರಂದು ಹಿಂದಿಯಲ್ಲಿ ಬರೆದ ಎರಡು ಪುಟಗಳ ಪತ್ರ ಇದಾಗಿದೆ.

ಪ್ರಜಾಪ್ರಭುತ್ವದ ಶಕ್ತಿ, ಬಿಹಾರಿಗಳ ಭಕ್ತಿಗೆ ಚುನಾವಣೆ ಸಾಕ್ಷಿ: ಮೋದಿಪ್ರಜಾಪ್ರಭುತ್ವದ ಶಕ್ತಿ, ಬಿಹಾರಿಗಳ ಭಕ್ತಿಗೆ ಚುನಾವಣೆ ಸಾಕ್ಷಿ: ಮೋದಿ

ಬಿಹಾರದ ಪ್ರಜೆಗಳಿಗೆ ಆರು ವರ್ಷಗಳ ಹಿಂದೆ ನೀವು ನೀಡಿದ್ದ ಭರವಸೆ ಮತ್ತು ಆಶ್ವಾಸನೆಗಳನ್ನು ಮರೆತಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಉಲ್ಲೇಖಿಸಿದ ಪತ್ರದ ಪ್ರತಿಯನ್ನು ರಾಷ್ಟ್ರೀಯ ಜನತಾ ಪಕ್ಷವು ಈ ಪತ್ರವನ್ನು ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.

1.25 ಲಕ್ಷ ಕೋಟಿ ಅನುದಾನ ಎಲ್ಲಿದೆ?

1.25 ಲಕ್ಷ ಕೋಟಿ ಅನುದಾನ ಎಲ್ಲಿದೆ?

2015ರ ಬಿಹಾರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜ್ಯಕ್ಕೆ ವಿಶೇಷ ಆರ್ಥಿಕ ಅನುದಾನ ನೀಡುವುದಾಗಿ ಘೋಷಿಸಿದ್ದರು. ಬಿಹಾರದ ಅಭಿವೃದ್ಧಿಗೆ 1.25 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ನೀಡುವುದಾಗಿ ಆಶ್ವಾಸನೆ ನೀಡಿದ್ದರು. ಅಂದು ಆರ್ ಜೆಡಿ, ಕಾಂಗ್ರೆಸ್ ಮತ್ತು ಜೆಡಿಯು ಮೈತ್ರಿಕೂಟವು ಗೆಲುವು ದಾಖಲಿಸಿ ಸರ್ಕಾರವನ್ನು ರಚಿಸಿತು. ತದನಂತರದ ರಾಜಕೀಯ ಬೆಳವಣಿಗೆಯಲ್ಲಿ ಜೆಡಿಯು ಪಕ್ಷವು ಬಿಜೆಪಿ ಜೊತೆಗೆ ಕೈ ಜೋಡಿಸಿತು.

ಪದೇ ಪದೆ ಕೊಟ್ಟ ಮಾತು ತಪ್ಪುವುದೇಕೆ ಎನ್ ಡಿಎ?

ಪದೇ ಪದೆ ಕೊಟ್ಟ ಮಾತು ತಪ್ಪುವುದೇಕೆ ಎನ್ ಡಿಎ?

"ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ರಾಜ್ಯಕ್ಕೆ ವಿಶೇಷ ಅನುದಾನ ನೀಡುವುದಾಗಿ ಆಶ್ವಾಸನೆ ನೀಡಿದ್ದರು. ಅದನ್ನು ನೆಚ್ಚಿಕೊಂಡ ರಾಜ್ಯದ ಜನರು 40ರ ಪೈಕಿ 39 ಸ್ಥಾನಗಳನ್ನು ಗೆಲ್ಲಿಸಿದರು. ಆದರೆ ಕೇಂದ್ರ ಸರ್ಕಾರ ಯಾವುದೇ ಆರ್ಥಿಕ ಪ್ಯಾಕೇಜ್ ಘೋಷಿಸಲಿಲ್ಲವೇಕೆ" ಎಂದು ತೇಜಸ್ವಿ ಯಾದವ್ ಪ್ರಶ್ನಿಸಿದ್ದಾರೆ.

ಎನ್ಆರ್ಐಗಳಿಗೆ ಇರುವ ಮಾನ್ಯತೆ ವಲಸೆ ಕಾರ್ಮಿಕರಿಗಿಲ್ಲ

ಎನ್ಆರ್ಐಗಳಿಗೆ ಇರುವ ಮಾನ್ಯತೆ ವಲಸೆ ಕಾರ್ಮಿಕರಿಗಿಲ್ಲ

ಕೊರೊನಾವೈರಸ್ ಸೋಂಕು ಹರಡುವಿಕೆ ಅಪಾಯ. ಭಾರತ ಲಾಕ್ ಡೌನ್ ಸಂದರ್ಭದಲ್ಲಿ ವಿದೇಶಗಳಲ್ಲಿ ಸಿಲುಕಿದ ಎನ್ಆರ್ಐಗಳನ್ನು ಸುರಕ್ಷಿತವಾಗಿ ಬೋಟ್ ಮತ್ತು ವಿಮಾನಗಳಲ್ಲಿ ಸ್ವದೇಶಕ್ಕೆ ಕರೆ ತರಲಾಯಿತು. ಆದರೆ ದೇಶದಲ್ಲೇ ಬೇರೆ ರಾಜ್ಯಗಳಿಗೆ ವಲಸೆ ಹೋಗಿದ್ದ ಬಿಹಾರದ ಕಾರ್ಮಿಕರನ್ನು ಸ್ವಗ್ರಾಮಗಳಿಗೆ ತಲುಪಿಸುವಲ್ಲಿ ನಿರ್ಲಕ್ಷ್ಯ ತೋರಿದ್ದು ಏಕೆ. ಕೇಂದ್ರ ಸರ್ಕಾರವು ಈ ರೀತಿ ಮಲತಾಯಿ ಧೋರಣೆ ಪ್ರದರ್ಶಿಸುತ್ತಿರುವುದು ಏಕೆ ಎಂದು ತೇಜಸ್ವಿ ಯಾದವ್ ಪ್ರಶ್ನೆ ಮಾಡಿದ್ದಾರೆ.

ಬಿಹಾರ ಬದಲಾವಣೆ ಗಾಳಿ ಬಗ್ಗೆ ತೇಜಸ್ವಿ ಯಾದವ್ ವಿಶ್ವಾಸ

ಬಿಹಾರ ಬದಲಾವಣೆ ಗಾಳಿ ಬಗ್ಗೆ ತೇಜಸ್ವಿ ಯಾದವ್ ವಿಶ್ವಾಸ

ಬಿಹಾರದ 94 ವಿಧಾನಸಭಾ ಕ್ಷೇತ್ರಗಳ ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಜೆಗಳು ಭಾಗವಹಿಸುವ ಬಗ್ಗೆ ಮಹಾಘಟಬಂಧನ್ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಾಟ್ನಾದ 160ನೇ ಮತಗಟ್ಟೆಗೆ ತೆರಳಿದ ಆರ್ ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ತಮ್ಮ ಹಕ್ಕು ಚಲಾಯಿಸಿದರು. ಈ ವೇಳೆ ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ತೇಜಸ್ವಿ ಯಾದವ್ ಅವರ ತಾಯಿ ರಾಬ್ರಿ ದೇವಿ ಸಹ ಜೊತೆಗಿದ್ದರು. ಬಿಹಾರದಲ್ಲಿ ಬದಲಾವಣೆ ಬಯಸುತ್ತಿರುವ ಮತದಾರರು ಈ ನಿಟ್ಟಿನಲ್ಲಿ ತಮ್ಮ ಮತದಾನದ ಮೂಲಕ ಬದಲಾವಣೆ ತರುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಈ ಬಾರಿ ದಾಖಲೆ ಸಂಖ್ಯೆಯಲ್ಲಿ ಮತದಾನ ಮಾಡಲಿದ್ದಾರೆ ಎಂದರು.

English summary
Where Is 1.25 Lakh Crore Of Package For Bihar: Tejaswi Yadav Questioned PM Modi In Letter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X