ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರದಲ್ಲಿ 100 ಮಕ್ಕಳ ಸಾವಿಗೆ ಕಾರಣವಾದ ಎಇಎಸ್ ಸೋಂಕು ಎಂದರೇನು?

|
Google Oneindia Kannada News

ಪಾಟ್ನಾ, ಜೂನ್ 17: ಬಿಹಾರದ ಮುಜಾಫರ್‌ಪುರದಲ್ಲಿ 100 ಮಕ್ಕಳ ಸಾವಿಗೆ ಕಾರಣವಾದ ಅಕ್ಯೂಟ್ ಎನ್ಸೆಫಾಲಿಟೀಸ್ ಸಿಂಡ್ರೋಮ್ ಸೋಂಕು ಎಂದರೇನು?. ಲಕ್ಷಣಗಳೇನು ಎನ್ನುವುದನ್ನು ನೋಡೋಣ.

ಅಕ್ಯೂಟ್ ಎನ್ಸೆಫಾಲಿಟೀಸ್ ಸಿಂಡ್ರೋಮ್ ಅನ್ನು ಎಇಎಸ್ ಸೋಂಕು ಎಂದು ಕರೆಯತ್ತಾರೆ, ಬಿಹಾರದ ಮಂದಿ ಇದಕ್ಕೆ 'ಚಮ್ಕಿ ಭೂಕಾರ್' ಎಂದೇ ನಾಮಾಂಕಿತ ಮಾಡಿದ್ದಾರೆ.

ಬಿಹಾರದಲ್ಲಿ ಮೆದುಳು ಜ್ವರದಿಂದ ಒಂದೇ ತಿಂಗಳಲ್ಲಿ 57 ಮಕ್ಕಳ ಸಾವು ಬಿಹಾರದಲ್ಲಿ ಮೆದುಳು ಜ್ವರದಿಂದ ಒಂದೇ ತಿಂಗಳಲ್ಲಿ 57 ಮಕ್ಕಳ ಸಾವು

ಇದು 1ರಿಂದ 10 ವರ್ಷದೊಳಗಿನ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಈಗಾಗಲೇ ಬಿಹಾರದಲ್ಲಿ ಈ ಜ್ವರದಿಂದ 100 ಮಂದಿ ಮಕ್ಕಳು ಮೃತಪಟ್ಟಿದ್ದಾರೆ. ಮುಜಾಫರ್‌ಪುರ, ವೈಶಾಲಿ, ಚಂಪಾರಣ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹರಡಿದೆ.

whats is AES and symptoms

ಎಇಎಸ್ ಎನ್ನುವುದು ಗಂಭೀರ ಆರೋಗ್ಯ ಸಮಸ್ಯೆಯಾಗಿದೆ. ಅತಿಯಾದ ಜ್ವರವು ಮೆದುಳನ್ನೇ ನಿಷ್ಕ್ರಿಯಗೊಳಿಸಿಬಿಡುವಷ್ಟು ಹಾನಿಕಾರಕವಾಗಿದೆ. ಮಾನಸಿಕ ಸಮಸ್ಯೆ ಆರಂಭವಾಗಿ ಕೋಮಾ ಸ್ಥಿತಿ ತಲುಪಿಬಿಡುತ್ತಾರೆ.

-1-10 ವರ್ಷದೊಳಗಿನ ಮಕ್ಕಳಲ್ಲಿ ಯಾವಾಗ ಬೇಕಾದರೂ ಈ ರೋಗ ಕಾಣಿಸಿಕೊಳ್ಳಬಹುದು. ಅತಿ ಹೆಚ್ಚು ಬಿಸಿಲಿರುವ ಅಂದರೆ ಏಪ್ರಿಲ್ ನಿಂದ ಜೂನ್ ತಿಂಗಳಲ್ಲಿ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ.

-ಎಸಿಎಸ್ ಪ್ರಕರಣದಲ್ಲಿ ವೈರಸ್ ಮುಖ್ಯಪಾತ್ರವಹಿಸುತ್ತದೆ. ಅದನ್ನು ಹೊರತುಪಡಿಸಿ, ಬ್ಯಾಕ್ಟೀರಿಯಾ, ಫಂಗಸ್, ಕೆಮಿಕಲ್ಸ್, ಟಾಕ್ಸಿನ್ಸ್‌ ಇಂದಲೂ ಇದು ಹರಡಬಹುದು.
- ಎಇಎಸ್ ಜ್ವರವು ಝೀಕಾ, ನಿಪಾಹ್ ವೈರಸ್‌ಗೂ ಕೂಡ ತಿರುಗುವ ಸಾಧ್ಯತೆ ಇರುತ್ತದೆ
ಜ್ವರದ ಲಕ್ಷಣಗಳೇನು?
-ಹೆಚ್ಚು ಜ್ವರ
-ತಲೆನೋವು
- ಬೆನ್ನುಹುರಿ ಕುತ್ತಿಗೆ ಹಿಡಿದುಕೊಂಡಂತಾಗುವುದು
-ವಾಂತಿ
-ಗೊಂದಲ
-ಕೆಲವು ಪ್ರಕರಣಗಳಲ್ಲಿ ಪಾರ್ಶ್ವವಾಯು, ಕೋಮಾ ಸ್ಥಿತಿಗೆ ಕೂಡ ತಲುಪಬಹುದು
ತಕ್ಷಣವೇ ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ಐಸಿಯುನಲ್ಲಿರಿಸಿ ಚಿಕಿತ್ಎ ನೀಡಿದರೆ ಗುಣಮುಖವಾಗುವ ಸಾಧ್ಯತೆ ಇರುತ್ತದೆ ಇಲ್ಲವಾದಲ್ಲಿ ಪ್ರಾಣಕ್ಕೆ ಅಪಾಯ ಸಂಭವಿಸಬಹುದು.

English summary
What is Acute Encephalitis Syndrome what are the symtoms of the Fever. Already 100 childrens are died. AES has taken around 12 districts of the state in its grip which includes Muzaffarpur, Vaishali and East Champaran. However, Muzaffarpur has been declared as the worst hit zone .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X