ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುರುಷನಿಗೆ ಮಕ್ಕಳು ಆಗಲು ಸಾಧ್ಯವೇ: ನಿತೀಶ್ ಕುಮಾರ್‌

|
Google Oneindia Kannada News

ಪಟ್ನಾ ಮೇ 25: "ಒಬ್ಬ ಪುರುಷ ಮತ್ತೊಬ್ಬ ಪುರುಷನನ್ನು ಮದುವೆಯಾದರೆ ಮಕ್ಕಳು ಆಗಲು ಸಾಧ್ಯವೆ?. ಮಹಿಳೆಯರಿಗೆ ಮಾತ್ರ ಮಕ್ಕಳು ಆಗಲು ಸಾಧ್ಯ" ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್‌ ಹೇಳಿದರು.

ಪಟ್ನಾದಲ್ಲಿ ನೂತನವಾಗಿ ನಿರ್ಮಿಸಿರುವ ಬಾಲಕಿಯರ ಹಾಸ್ಟೆಲ್ ಉದ್ಘಾಟಿಸಿ ಅವರು ಮಾತನಾಡಿದರು. "ಮದುವೆ ಮಾಡಿಕೊಳ್ಳಲು ವರದಕ್ಷಿಣೆ ತೆಗೆದುಕೊಳ್ಳುವುದು ನಿಷ್ಪ್ರಯೋಜಕ ಕ್ರಿಯೆಯಾಗಿದೆ. ಮಕ್ಕಳನ್ನು ಪಡೆಯಲು ಒಬ್ಬ ಪುರುಷನು ಮಹಿಳೆಯನ್ನೇ ಮದುವೆಯಾಗಬೇಕಿದೆ. ಒಬ್ಬ ಪುರುಷ ಮತ್ತೊಬ್ಬ ಪುರುಷನನ್ನು ಮದುವೆಯಾದರೆ ಸಂತಾನ ಹೊಂದಲು ಸಾಧ್ಯವೆ?" ಎಂದು ಪ್ರಶ್ನಿಸಿದರು.

ವರದಕ್ಷಿಣೆ ಪಿಡುಗು ನಿವಾರಿಸಲು ಮುಂದಾಗಿ
"ವರದಕ್ಷಿಣೆ ಎಂಬುದು ಒಂದು ಸಾಮಾಜಿಕ ಪಿಡುಗಾಗಿದೆ. ವರದಕ್ಷಿಣೆ ವ್ಯವಸ್ಥೆಯು ಇಂದಿನ ಸಮಾಜದಲ್ಲಿ ಅತ್ಯಂತ ಕೆಟ್ಟ ಅಭ್ಯಾಸಗಳಲ್ಲಿ ಒಂದಾಗಿದೆ. ಇದಕ್ಕೆ ಕಡಿವಾಣ ಹಾಕುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇದನ್ನು ತಡೆಯಲು ಜನರು ಮುಂದಾಗಬೇಕು. ಆಗ ಮಾತ್ರ ಸಮಾಜದಲ್ಲಿ ಸುಧಾರಣೆ ಸಾಧ್ಯ,'' ಎಂದರು.

What Will Happen to Child Birth if a Man Gets Married to Another Man?: Nitesh Kumar

"ಭಾರತ ಸರಕಾರದ ಅಪರಾಧ ಅಂಕಿ-ಅಂಶಗಳ ಪ್ರಕಾರ, ವರದಕ್ಷಿಣೆ ಸಂಬಂಧಿತ ಪ್ರಕರಣಗಳಲ್ಲಿ ನೆರೆಯ ಉತ್ತರ ಪ್ರದೇಶದ ನಂತರ ಬಿಹಾರವು ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ. 1961ರ ವರದಕ್ಷಿಣೆ ನಿಷೇಧ ಕಾಯಿದೆ ಜಾರಿಯಲ್ಲಿದ್ದರೂ ಸಹ ಇದೇ ಪರಿಸ್ಥಿತಿ ಮುಂದುವರಿದಿದೆ,'' ಎಂದು ಬೇಸರ ವ್ಯಕ್ತಪಡಿಸಿದರು.

ವರದಕ್ಷಿಣೆ ರಹಿತ ವಿವಾಹಗಳಲ್ಲಿ ಮಾತ್ರ ಭಾಗಿ
ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ 'ವರದಕ್ಷಿಣೆ ಬೇಡ' ಎಂದು ನಮೂದಿಸಿರುವ ವಿವಾಹ ಸಮಾರಂಭಗಳಲ್ಲಿ ಮಾತ್ರ ತಾವು ಭಾಗವಹಿಸುವುದಾಗಿ ನಿತೀಶ್ ಕುಮಾರ್‌ ಹೇಳಿದರು.

What Will Happen to Child Birth if a Man Gets Married to Another Man?: Nitesh Kumar

"ವರದಕ್ಷಿಣೆ ರಹಿತ ವಿವಾಹ ನಡೆಸಲಾಗುತ್ತಿದೆ ಎಂದು ಸಂಬಂಧಪಟ್ಟ ಕುಟುಂಬದಿಂದ ಸ್ಪಷ್ಟವಾದ ಘೋಷಣೆ ಮಾಡದಿದ್ದರೆ ಯಾವುದೇ ಮದುವೆಗೂ ಹಾಜರಾಗುವುದಿಲ್ಲ,'' ಎಂದರು.

"ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ 'ಇದು ವರದಕ್ಷಿಣೆ ಪಡೆಯದ ಮದುವೆ' ಎಂಬ ಘೋಷಣೆಯನ್ನು ಹೊಂದಿರದಿದ್ದರೆ ನನ್ನ ಆಪ್ತರು, ಕುಟುಂಬದವರು ಸೇರಿದಂತೆ ನಾನು ಯಾವುದೇ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳುವುದಿಲ್ಲ. ಸಮಾಜವನ್ನು ದೀರ್ಘಕಾಲ ಕಾಡುತ್ತಿರುವ ವರದಕ್ಷಿಣೆ ಮತ್ತು ಬಾಲ್ಯ ವಿವಾಹದಂತಹ ಸಾಮಾಜಿಕ ಅನಿಷ್ಟಗಳನ್ನು ನಿವಾರಿಸಲು ಈ ನಿರ್ಧಾರಕ್ಕೆ ಬಂದಿದ್ದಾನೆ," ಎಂದು ಹೇಳಿದರು.

What Will Happen to Child Birth if a Man Gets Married to Another Man?: Nitesh Kumar

ಸಾಮಾಜಿಕ ಸುಧಾರಣಾ ಅಭಿಯಾನ ತೀವ್ರಗೊಳಿಸಿ
"ಸಾಮಾಜಿಕ ಸುಧಾರಣೆಗಳಿಲ್ಲದೇ ಅಭಿವೃದ್ಧಿಯ ಹಿಂದಿನ ಉದ್ದೇಶವು ನಿಷ್ಪ್ರಯೋಜಕವಾಗಿದೆ. ಹಾಗಾಗಿ ಜವಾಬ್ದಾರಿ ವಹಿಸಿಕೊಂಡ ದಿನದಿಂದಲೂ ನಿರಂತರವಾಗಿ ಇದಕ್ಕಾಗಿ ಶ್ರಮಿಸುತ್ತಿದ್ದೇನೆ. ಜನಸಾಮಾನ್ಯರ ಹಿತಾಸಕ್ತಿಗಾಗಿ ಸಾಮಾಜಿಕ ಅನಿಷ್ಟಗಳನ್ನು ತೊಡೆದುಹಾಕುವ ಗುರಿಯನ್ನು ಹೊಂದಿರುವ ಸಾಮಾಜಿಕ ಸುಧಾರಣಾ ಅಭಿಯಾನವನ್ನು ತೀವ್ರಗೊಳಿಸಲು ಪ್ರತಿಯೊಬ್ಬರು ಸಹಕರಿಸಬೇಕು,'' ಎಂದು ನಿತೀಶ್ ಕುಮಾರ್‌ ಮನವಿ ಮಾಡಿದರು.

ವರದಕ್ಷಿಣೆ ಮತ್ತು ಬಾಲ್ಯ ವಿವಾಹದಂತಹ ಸಾಮಾಜಿಕ ಪಿಡುಗುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಬಿಹಾರದಾದ್ಯಂತ 2017ರಲ್ಲಿ ನಿತೀಶ್ ಕುಮಾರ್ ಅಭಿಯಾನ ಪ್ರಾರಂಭಿಸಿದರು.

English summary
What will happen to child birth if a man gets married to another man?: Nitesh Kumar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X