ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನಸಭೆ ಚುನಾವಣೆ; ಬಿಹಾರಕ್ಕೆ ಕೊಡುಗೆ ಕೊಟ್ಟ ಕೇಂದ್ರ ಸರ್ಕಾರ

|
Google Oneindia Kannada News

ಪಾಟ್ನಾ, ಸೆಪ್ಟೆಂಬರ್ 15: ಬಿಹಾರದ ದರ್ಭಾಂಗ್‌ನಲ್ಲಿ ಹೊಸ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಸ್ಥಾಪನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಬಿಹಾರ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಾಗ ಯೋಜನೆಗೆ ಒಪ್ಪಿಗೆ ಸಿಕ್ಕಿದೆ.

ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಏಮ್ಸ್ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಗೆ ಸುಮಾರು 1,264 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ ಮತ್ತು 48 ತಿಂಗಳ ಅವಧಿಯಲ್ಲಿ ಯೋಜನೆ ಪೂರ್ಣಗೊಳ್ಳಲಿದೆ.

ಬಿಹಾರ ಮುಖ್ಯಮಂತ್ರಿ ಎದೆಯಲ್ಲಿ ಢವಢವ ಹೆಚ್ಚಿಸಿದ ಜಾಹೀರಾತು! ಬಿಹಾರ ಮುಖ್ಯಮಂತ್ರಿ ಎದೆಯಲ್ಲಿ ಢವಢವ ಹೆಚ್ಚಿಸಿದ ಜಾಹೀರಾತು!

ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ ಅಡಿಯಲ್ಲಿ ಏಮ್ಸ್ ಸ್ಥಾಪನೆ ಮಾಡಲಾಗುತ್ತದೆ. ಏಮ್ಸ್ ಗಾಗಿ ಎನ್‌ಪಿಎ ಜೊತೆಗೆ 2,25,000 ರೂ. ಮೂಲ ವೇತನದಲ್ಲಿ (ವೇತನ ಮತ್ತು ಎನ್‌ಪಿಎ 2,37,500 ರೂ. ಮೀರದಂತೆ) ನಿರ್ದೇಶಕರ ಹುದ್ದೆಯನ್ನು ಸೃಷ್ಟಿಸಲು ಸಹ ಒಪ್ಪಿಗೆ ಕೊಡಲಾಗಿದೆ.

ಬಿಹಾರ ವಿಧಾನಸಭೆ ಮತ್ತು 65 ಕ್ಷೇತ್ರಗಳ ಉಪ ಚುನಾವಣೆ ಒಂದೇ ಸಮಯಕ್ಕೆ: ಆಯೋಗ ಬಿಹಾರ ವಿಧಾನಸಭೆ ಮತ್ತು 65 ಕ್ಷೇತ್ರಗಳ ಉಪ ಚುನಾವಣೆ ಒಂದೇ ಸಮಯಕ್ಕೆ: ಆಯೋಗ

Union Govt Approved To Set Up AIIMS At Darbhanga In Bihar

ನವದೆಹಲಿಯ ಏಮ್ಸ್ ಮತ್ತು ಇತರ ಆರು ಹೊಸ ಏಮ್ಸ್ ಮಾದರಿಯಲ್ಲಿ ಪಿಎಂಎಸ್‌ಎಸ್‌ವೈ ಹಂತ -1ರ ಅಡಿಯಲ್ಲಿ ದರ್ಭಾಂಗ್‌ನಲ್ಲಿ ಏಮ್ಸ್ ನಿರ್ಮಾಣ ಮಾಡಲಾಗುತ್ತದೆ.

ಜೆಡಿಯು-ಎಲ್‌ಜೆಪಿ ಕಿತ್ತಾಟ ಬಿಹಾರ ರಾಜಕೀಯವನ್ನು ಬದಲಿಸುತ್ತದೆಯೇ?ಜೆಡಿಯು-ಎಲ್‌ಜೆಪಿ ಕಿತ್ತಾಟ ಬಿಹಾರ ರಾಜಕೀಯವನ್ನು ಬದಲಿಸುತ್ತದೆಯೇ?

750 ಹಾಸಿಗೆಗಳ ಸಾಮರ್ಥ್ಯ : ಹೊಸ ಏಮ್ಸ್ ಆಸ್ಪತ್ರೆಯೂ ವೈದ್ಯಕೀಯ ಮತ್ತು ಶುಶ್ರೂಷಾ ಕೋರ್ಸ್‌ಗಳಿಗೆ ಬೋಧನಾ ಕಟ್ಟಡ, ವಸತಿ ಸಂಕೀರ್ಣ ಮತ್ತು ಸಂಬಂಧಿತ ಸೌಲಭ್ಯಗಳನ್ನು ಒಳಗೊಂಡಿರುತ್ತದೆ.

750 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯನ್ನು ಹೊಂದಿರುತ್ತದೆ. ಇವುಗಳಲ್ಲಿ ತುರ್ತು ಮತ್ತು ಅಪಘಾತ ಸೇವೆ, ಐಸಿಯು, ಆಯುಷ್, ವಿಶೇಷ ವಾರ್ಡ್‌ಗಳು ಸೇರಿವೆ. ವೈದ್ಯಕೀಯ ಕಾಲೇಜು, ಆಯುಷ್ ಬ್ಲಾಕ್, ಸಭಾಂಗಣ, ಅತಿಥಿ ಗೃಹ, ವಸತಿ ನಿಲಯಗಳನ್ನು ಒಳಗೊಂಡಿರಲಿದೆ.

ಏಮ್ಸ್ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಅಗತ್ಯವಾದ ಸಿಬ್ಭಂದಿಗಳ ನೇಮಕಾತಿ ನಡೆಯಲಿದೆ. ಇವುಗಳ ವೆಚ್ಚವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪಿಎಂಎಸ್ಎಸ್ವೈ ಯೋಜನಾ ಬಜೆಟ್ ಅನುದಾನದಿಂದ ಒದಗಿಸಲಾಗುತ್ತದೆ.

ಮೆಡಿಕಲ್ ಸೀಟುಗಳು : ಹೊಸ ಏಮ್ಸ್‌ನಲ್ಲಿ 100 ಸ್ನಾತಕೋತ್ತರ ಸೀಟು ಮತ್ತು 60 ಬಿಎಸ್ಸಿ (ನರ್ಸಿಂಗ್) ಸೀಟುಗಳು ಲಭ್ಯವಿರುತ್ತದೆ. 15 ರಿಂದ 20 ಸೂಪರ್ ಸ್ಪೆಷಾಲಿಟಿ ವಿಭಾಗಗಳನ್ನು ಇದು ಹೊಂದಿರುತ್ತದೆ. ಪ್ರತಿದಿನ ಸುಮಾರು 2000 ಹೊರ ರೋಗಿಗಳು ಮತ್ತು ತಿಂಗಳಿಗೆ ಸುಮಾರು 1000 ಒಳರೋಗಿಗಳಿಗೆ ಚಿಕಿತ್ಸೆ ಒದಗಿಸುವ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.

English summary
Union cabinet chaired by PM Narendra Modi has approved to set up new All India Institute of Medical Sciences (AIIMS) at Darbhanga in Bihar. It will be built under the Pradhan Mantri Swasthya Suraksha Yojana (PMSSY).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X