ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ ಶಂಕಿತ ಭಯೋತ್ಪಾದನ ಘಟಕ ಭೇದಿಸಲು ಎರಡು ತಂಡ

|
Google Oneindia Kannada News

ಪಾಟ್ನಾ,ಜು.14: ಬಿಹಾರ ಪೊಲೀಸರು ಭೇದಿಸಿರುವ ಸಂಭಾವ್ಯ ಭಯೋತ್ಪಾದನಾ ಘಟಕದ ತನಿಖೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಬಿಹಾರದ ಹೆಚ್ಚುವರಿ ಮಹಾನಿರ್ದೇಶಕ ಜೆ. ಎಸ್. ಗಂಗ್ವಾರ್ ಗುರುವಾರ ತಿಳಿಸಿದ್ದಾರೆ.

ಈ ಸಂಬಂಧ ಪಾಟ್ನಾದಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಪೊಲೀಸರ ವಿವಿಧ ತಂಡಗಳು ಅವರೊಂದಿಗೆ ವಿಚಾರಣೆ ನಡೆಸುತ್ತಿವೆ.

ಮೋದಿ ಮೇಲೆ ದಾಳಿ ಸಂಚು ರೂಪಿಸಿದ್ದ ಇಬ್ಬರು ಉಗ್ರರ ಬಂಧನಮೋದಿ ಮೇಲೆ ದಾಳಿ ಸಂಚು ರೂಪಿಸಿದ್ದ ಇಬ್ಬರು ಉಗ್ರರ ಬಂಧನ

ಅವರ ಬಳಿಯಿದ್ದ ಪೋಸ್ಟರ್ ಬ್ಯಾನರ್‌ಗಳು, ಪಿಎಫ್‌ಐ ದಾಖಲೆಗಳು, ಮೊಬೈಲ್ ಫೋನ್‌ಗಳು ಮುಂತಾದ ವಿವಿಧ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣವನ್ನು ದಾಖಲಿಸಿರುವುದರಿಂದ, ಬಂಧನವನ್ನು ಮಾಡಲಾಗಿದೆ. ವಿಚಾರಣೆಯ ಸಮಯದಲ್ಲಿ ವಿಷಯಗಳು ಮುಂಚೂಣಿಗೆ ಬರುತ್ತವೆ. ಇನ್ನಷ್ಟು ಜನರ ಬಂಧನವೂ ಸಹ ಸಾಧ್ಯವಿದೆ ಎಂದು ಗಂಗ್ವಾರ್ ತಿಳಿಸಿದ್ದಾರೆ.

"ನಾವು ಸಾಕ್ಷ್ಯಗಳ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ನಮ್ಮ ತನಿಖೆಯ ಪ್ರಕಾರ ನಾವು ಎಲ್ಲಾ ಆಯಾಮಗಳಲ್ಲಿ ಕೆಲಸ ಮಾಡುತ್ತೇವೆ. ನಾವು ಪಾಟ್ನಾ ಪೊಲೀಸರೊಂದಿಗೆ ಸಮನ್ವಯ ಸಾಧಿಸುತ್ತಿದ್ದೇವೆ. ಬಂಧಿತರಿಂದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದಾಖಲೆಗಳು ಸೇರಿದಂತೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ಗಂಗ್ವಾರ್ ತಿಳಿಸಿದ್ದಾರೆ.

ಬಂಧಿತ ವ್ಯಕ್ತಿಗಳ ಸಂಭಾವ್ಯ ಗುರಿಗಳ ಬಗ್ಗೆ ಕೇಳಿದಾಗ, ಈ ವಿಷಯದ ತನಿಖೆಯ ನಂತರವೇ ಅವರ ಮುಂದಿನ ಯೋಜನೆಗಳ ಬಗ್ಗೆ ಏನನ್ನೂ ಹೇಳಬಹುದು. ಅವರ ಗುರಿಗಳ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ತನಿಖೆ ನಡೆಯುತ್ತಿದೆ. ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಹೇಳಿದರು.

ವಿಚಾರಣೆಯ ನಂತರ ಮಾಹಿತಿ ಲಭ್ಯ

ವಿಚಾರಣೆಯ ನಂತರ ಮಾಹಿತಿ ಲಭ್ಯ

ಜುಲೈ 12 ರಂದು ಬಿಹಾರ ಮತ್ತು ಪಾಟ್ನಾಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿಯನ್ನು ಉಲ್ಲೇಖಿಸಿದ ಅಧಿಕಾರಿ, ವಿಚಾರಣೆಯ ನಂತರ ಬಂಧಿತ ವ್ಯಕ್ತಿಗಳ ಉದ್ದೇಶಗಳನ್ನು ಸ್ಪಷ್ಟಪಡಿಸಬಹುದು. ನನಗೆ ಸದ್ಯಕ್ಕೆ ಅಂತಹ ಯಾವುದೇ ಮಾಹಿತಿ ಇಲ್ಲ, ಅವರ ಸಂಪರ್ಕಗಳು, ಉದ್ದೇಶಗಳು ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ವಿಚಾರಣೆ ನಡೆಸಿದ ನಂತರ ಮಾತ್ರ ಏನನ್ನೂ ಹೇಳಲು ಸಾಧ್ಯವಾಗುತ್ತದೆ ಎಂದರು.

ಬಂಧಿತರಾಗಿರುವ ಇಬ್ಬರನ್ನು ಕೂಲಂಕುಷವಾಗಿ ತನಿಖೆ ಮಾಡಲಾಗುವುದು. ಭಾರತ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು, ಸಮುದಾಯಗಳ ನಡುವೆ ದ್ವೇಷವನ್ನು ಹರಡಲು ಪ್ರಯತ್ನಿಸುವುದು ಮತ್ತು ಪಿತೂರಿಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಜೆ. ಎಸ್. ಗಂಗ್ವಾರ್ ತಿಳಿಸಿದ್ದಾರೆ.

ಪಾಕ್‌ ಭಯೋತ್ಪಾದಕ ಗುಂಪಿನ ಭಾರೀ ಸಂಚಿನ ವರದಿ ಬಿಡುಗಡೆ ಮಾಡಿದ ಭಾರತೀಯ ಸೇನೆಪಾಕ್‌ ಭಯೋತ್ಪಾದಕ ಗುಂಪಿನ ಭಾರೀ ಸಂಚಿನ ವರದಿ ಬಿಡುಗಡೆ ಮಾಡಿದ ಭಾರತೀಯ ಸೇನೆ

ಸೂಕ್ಷ್ಮವಾಗಿ ತನಿಖೆ ಮಾಡಲು ಆರಂಭ

ಸೂಕ್ಷ್ಮವಾಗಿ ತನಿಖೆ ಮಾಡಲು ಆರಂಭ

ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) (ಬಿಹಾರ), ಮನೀಶ್ ಕುಮಾರ್ ಮಾತನಾಡಿ, ಘಟನೆ ಸಂಬಂಧ ಒಟ್ಟು 26 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, 3 ಜನರನ್ನು ಬಂಧಿಸಲಾಗಿದೆ. ನಾವು ನಿತ್ಯದ ಕೆಲಸದ ಮೇಲೆ ಇಂತಹ ಸಂಸ್ಥೆಗಳ ಮೇಲೆ ನಿಗಾ ಇಡುತ್ತೇವೆ. ಪ್ರಧಾನಿ ಬರುತ್ತಿದ್ದರಿಂದ ನಾವು ಎಚ್ಚರಗೊಂಡಿದ್ದೇವೆ. ಈ ನಡುವೆ ನಮಗೆ ಈ ಜನರ ಕಚೇರಿಯ ಬಗ್ಗೆ ತಿಳಿದು ನಾವು ಅದನ್ನು ಸೂಕ್ಷ್ಮವಾಗಿ ತನಿಖೆ ಮಾಡಲು ಪ್ರಾರಂಭಿಸಿದ್ದೇವೆ ಎಂದು ತಿಳಿಸಿದ್ದಾರೆ.

ಇಬ್ಬರು ಆರೋಪಿಗಳ ಬಂಧನ

ಇಬ್ಬರು ಆರೋಪಿಗಳ ಬಂಧನ

ಉಗ್ರಗಾಮಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ನೊಂದಿಗೆ ಕೆಲವು ಸಂಪರ್ಕ ಹೊಂದಿರುವ ಸಂಭಾವ್ಯ ಭಯೋತ್ಪಾದನಾ ಘಟಕವನ್ನು ಪೊಲೀಸರು ಬುಧವಾರ ಪತ್ತೆ ಹಚ್ಚಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇಬ್ಬರಲ್ಲಿ ಜಾರ್ಖಂಡ್‌ನ ನಿವೃತ್ತ ಪೊಲೀಸ್ ಅಧಿಕಾರಿ ಮೊಹಮ್ಮದ್ ಜಲಾವುದ್ದೀನ್ ಮತ್ತು ಅಥರ್ ಪರ್ವೇಜ್ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾದ ಮಾಜಿ ಸದಸ್ಯ, ಅವರು ಪಿಎಫ್‌ಐ ಮತ್ತು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI)ಯ ಪ್ರಸ್ತುತ ಸದಸ್ಯರೂ ಆಗಿದ್ದಾರೆ.

ಇಸ್ಲಾಮಿಕ್‌ ರಾಷ್ಟ್ರ ನಿರ್ಮಾಣ

ಇಸ್ಲಾಮಿಕ್‌ ರಾಷ್ಟ್ರ ನಿರ್ಮಾಣ

ಆರೋಪಿಯಿಂದ ವಶಪಡಿಸಿಕೊಂಡ ಎಂಟು ಪುಟಗಳ ಸುದೀರ್ಘ ದಾಖಲೆಯ 'ಇಂಡಿಯಾ ವಿಷನ್ 2047' ಶೀರ್ಷಿಕೆಯ ಆಯ್ದ ಭಾಗವು ಇಸ್ಲಾಮಿಕ್‌ ರಾಷ್ಟ್ರ ನಿರ್ಮಾಣದ ಕುರಿತು ಮಾತನಾಡುತ್ತದೆ ಎಂದು ಕುಮಾರ್ ಹೇಳಿದ್ದಾರೆ.

2001-02ರಲ್ಲಿ ಸಿಮಿಯನ್ನು ನಿಷೇಧಿಸಿದ ನಂತರ ಬಿಹಾರ ರಾಜ್ಯದಲ್ಲಿ ನಡೆದ ಬಾಂಬ್ ಸ್ಫೋಟಗಳಲ್ಲಿ ಪರ್ವೇಜ್ ಅವರ ಕಿರಿಯ ಸಹೋದರ ಜೈಲಿಗೆ ಹೋಗಿದ್ದರು. ಪರ್ವೇಜ್ ಕೂಡ ಲಕ್ಷಗಟ್ಟಲೆ ಹಣ ಸಂಗ್ರಹಿಸಿದ್ದಾರೆ. ಸಮರ ಕಲೆಗಳ ಹೆಸರಿನಲ್ಲಿ ಸ್ಥಳೀಯರಿಗೆ ಕತ್ತಿ ಮತ್ತು ಚಾಕುಗಳನ್ನು ಬಳಸಲು ಕಲಿಸಲಾಯಿತು ಮತ್ತು ಆರೋಪಿಗಳು ಧಾರ್ಮಿಕ ಹಿಂಸಾಚಾರಕ್ಕೆ ಇತರರನ್ನು ಪ್ರಚೋದಿಸುತ್ತಿದ್ದರು ಎಂದು ಎಎಸ್‌ಪಿ ಮನೀಶ್‌ ಕುಮಾರ್‌ ಹೇಳಿದರು.

English summary
Bihar Additional Director General J.S. Gangwar has said that special teams have been formed to investigate the possible terror unit busted by the Bihar Police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X