ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಲ್ ಖೈದಾ ಉಗ್ರರ ಸೆರೆ ಬೆನ್ನಲ್ಲೇ ಬಿಹಾರದಲ್ಲಿ ಹೈಅಲರ್ಟ್

|
Google Oneindia Kannada News

ಪಾಟ್ನಾ, ಜುಲೈ 12: ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಅಲ್ ಖೈದಾ ಉಗ್ರ ಸಂಘಟನೆ ಜೊತೆ ನಂಟು ಹೊಂದಿರುವ ಇಬ್ಬರು ಶಂಕಿತರನ್ನು ಬಂಧಿಸಿರುವ ಬೆನ್ನಲ್ಲೇ ಬಿಹಾರದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳು ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ತೀವ್ರ ನಿಗಾ ವಹಿಸಲಾಗಿದೆ.

"ಬಿಹಾರದ ಎಲ್ಲಾ ಸೂಕ್ಷ್ಮ ಪ್ರದೇಶಗಳು ಹಾಗೂ ರಾಜ್ಯದ ಗಡಿ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸುವಂತೆ," ಬಿಹಾರ ಪೊಲೀಸ್ ಮತ್ತು ಸಿಐಡಿ ವಿಶೇಷ ತಂಡದ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಉತ್ತರ ಪ್ರದೇಶದಲ್ಲಿ ಉಗ್ರರ ಬಂಧನದ ಹಿನ್ನೆಲೆ ರಾಜ್ಯದಲ್ಲೂ ಶಂಕಿತರ ಮೇಲೆ ಹದ್ದಿನ ಕಣ್ಣು ಇರಿಸಲಾಗಿದೆ. ಭಾನುವಾರವಷ್ಟೇ ಉತ್ತರ ಪ್ರದೇಶದಲ್ಲಿ ಆತ್ಮಾಹುತಿ ಬಾಂದ್ ದಾಳಿಗೆ ಸಂಚು ರೂಪಿಸಿದ್ದರು ಎನ್ನಲಾದ ಇಬ್ಬರು ಅಲ್ ಖೈದಾ ಸಂಘಟನೆ ಶಂಕಿತರನ್ನು ಭಯೋತ್ಪಾದನಾ ನಿಗ್ರಹ ಪಡೆ ಬಂಧಿಸುವಲ್ಲಿ ಯಶಸ್ವಿಯಾಗಿತ್ತು.

ಅಲ್ ಖೈದಾ ಸಂಚು ವಿಫಲ, ಯುಪಿಯಲ್ಲಿ ಹೈ ಅಲರ್ಟ್ ಘೋಷಣೆಅಲ್ ಖೈದಾ ಸಂಚು ವಿಫಲ, ಯುಪಿಯಲ್ಲಿ ಹೈ ಅಲರ್ಟ್ ಘೋಷಣೆ

ಉತ್ತರ ಪ್ರದೇಶದಲ್ಲಿ ಉಗ್ರ ದಾಳಿ ಸುಳಿವು ಸಿಕ್ಕ ಹಿನ್ನೆಲೆ ಭಯೋತ್ಪಾದನಾ ನಿಗ್ರಹ ದಳದ ಸಿಬ್ಬಂದಿ ಲಕ್ನೋದ ಹಲವು ಪ್ರದೇಶಗಳಲ್ಲಿ ಒಂದು ವಾರದಿಂದ ತೀವ್ರ ತಪಾಸಣೆ ನಡೆಸಿದ್ದರು. ಎಟಿಎಸ್ ಐಜಿ ಜಿ ಕೆ ಗೋಸ್ವಾಮಿ ನೇತೃತ್ವದ ತಂಡವು ಕಕೋರಿ ಪ್ರದೇಶದ ನಿವಾಸದಲ್ಲಿ ಅಡಗಿ ಕುಳಿತಿದ್ದ ಇಬ್ಬರು ಶಂಕಿತರನ್ನು ಬಂಧಿಸಿದ್ದು, ಸಜೀವ ಬಾಂಬ್ ಅನ್ನು ನಿಷ್ಕ್ರಿಯಗೊಳಿಸಿದ್ದರು. 6 ರಿಂದ 7 ಕೆಜಿ ಸ್ಫೋಟಕಗಳನ್ನು ವಶಕ್ಕೆ ಪಡೆದುಕೊಂಡಿದ್ದರು.

Two Al Qaeda Terrorists Arrest In Uttar Pradesh; Bihar Govt Announces High Alert At Border Area

ಬಂಧಿತ ಉಗ್ರರ ಕುರಿತು ಮಾಹಿತಿ:

"ಮಿನಾಜ್ ಅಹ್ಮದ್ ಮತ್ತು ನಾಸಿರುದ್ದೀನ್ ಎಂದು ಬಂಧಿತರನ್ನು ಗುರುತಿಸಲಾಗಿದೆ. ಇಬ್ಬರೂ ಲಕ್ನೋದ ಕಕೋರಿ ಪ್ರದೇಶದ ನಿವಾಸಿಗಳಾಗಿದ್ದು, ಅಲ್ ಖೈದಾ ಅನ್ಸಾರ್ ಖಜ್ವಾತ್ ಉಲ್ ಹಿಂದ್ ಸಂಘಟನೆಯ ಆತ್ಮಾಹುತಿ ದಾಳಿಯ ಸದಸ್ಯರಾಗಿದ್ದಾರೆ, ಉಳಿದ ಉಗ್ರರ ಸೆರೆಗೆ ಬಲೆ ಬೀಸಲಾಗಿದೆ,'' ಎಂದು ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಹೈಅಲರ್ಟ್ ಜಾರಿ:

ಉತ್ತರ ಪ್ರದೇಶದ ಲಕ್ನೋ ಸೇರಿದಂತೆ ಪ್ರಮುಖ ನಗರಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಹರ್ದೋಯಿ, ಸೀತಾಪುರ್, ಬಾರಾಬಂಕಿ, ಉನ್ನಾವೋ ಹಾಗೂ ರಾಯ್ ಬರೇಲಿ ಜಿಲ್ಲೆಗಳಲ್ಲಿ ತೀವ್ರ ನಿಗಾವಹಿಸಲಾಗಿದ್ದು, ಭದ್ರತೆಯನ್ನು ಹೆಚ್ಚಿಸಲಾಗಿದೆ.

English summary
Two Al Qaeda Terrorists Arrest In Uttar Pradesh; Bihar Govt Announces High Alert At Border Area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X