ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ: ಮಾವೋವಾದಿ ನಾಯಕ ಸಂದೀಪ್ ಯಾದವ್ ಶವ ಪತ್ತೆ

|
Google Oneindia Kannada News

ಪಟ್ನಾ: ಹಲವು ರಾಜ್ಯಗಳ ಪೊಲೀಸರಿಗೆ ಬೇಕಾಗಿದ್ದ ಮಾವೋವಾದಿ ಸಂಘಟನೆಯ ಪ್ರಮುಖ ನಾಯಕ ಸಂದೀಪ್ ಯಾದವ್ ಅಲಿಯಾಸ್ ವಿಜಯ್ ಯಾದವ್ ಮೃತದೇಹದ ಬಿಹಾರದ ಗಯಾ ಜಿಲ್ಲೆಯ ಲುತುವಾ ಕಾಡಿನಲ್ಲಿ ಬುಧವಾ ರಾತ್ರಿ ಪತ್ತೆಯಾಗಿದೆ.

ಸಂದೀಪ್ ಯಾದವ್(56) ಬಿಹಾರ, ಜಾರ್ಖಂಡ್, ಚತ್ತೀಸಘಡ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ ಸೇರಿದಂತೆ ಒಟ್ಟು ಐದು ರಾಜ್ಯಗಳ ಪೊಲೀಸರಿಗೆ ಬೇಕಾಗಿದ್ದ. 1990 ರಿಂದ ಮಾವೋವಾದಿ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಈತ ಸಂಘಟನೆಯ ಕೇಂದ್ರ ವಲಯದ ಉಸ್ತುವರಿಯಾಗಿದ್ದ.

ಕುಪ್ವಾರದಲ್ಲಿ ಎನ್‌ಕೌಂಟರ್; ಮೂವರು ಲಷ್ಕರ್‌ ಉಗ್ರರ ಹತ್ಯೆಕುಪ್ವಾರದಲ್ಲಿ ಎನ್‌ಕೌಂಟರ್; ಮೂವರು ಲಷ್ಕರ್‌ ಉಗ್ರರ ಹತ್ಯೆ

"ಸಂದೀಪ್ ಯಾದವ್ ಮೃತದೇಹ ಗಯಾದ ಲುತುವಾ ಕಾಡಿನಲ್ಲಿ ಸಿಆರ್ ಪಿಎಫ್ ಪೊಲೀಸರಿಗೆ ದೊರೆತಿದೆ. ನಂತರ ಮೃತದೇಹವನ್ನು ಗಯಾದ ಅನುಗ್ರಹ ನಾರಾಯಣ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸಾಗಿಸಲಾಯಿತು. ಈತನ ಕುಟುಂಬಸ್ಥರು ಶವವನ್ನು ಗುರುತಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ,'' ಎಂದು ಗಯಾ ಹಿರಿಯ ಎಸ್ಪಿ ಹರ್ ಪೀತ್ ಕೌರ್ ಮಾಹಿತಿ ನೀಡಿದ್ದಾರೆ.

Top Maoist leader Sandeep Yadav found dead

ಸಂದೀಪ್ ಯಾದವ್ ಕಳೆದ 27 ವರ್ಷಗಳಿಂದ ಪೊಲೀಸರ ಕೈಗೆ ಸಿಗದೇ ತಪ್ಪಿಸಿಕೊಂಡಿದ್ದ. ಈತನ ವಿರುದ್ಧ 24ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಉಗ್ರರ ಜೊತೆ ನಂಟು; ಮೂವರು ಸರಕಾರಿ ನೌಕರರು ಸೇವೆಯಿಂದ ವಜಾಉಗ್ರರ ಜೊತೆ ನಂಟು; ಮೂವರು ಸರಕಾರಿ ನೌಕರರು ಸೇವೆಯಿಂದ ವಜಾ

ಬಿಹಾರ ಸರಕಾರ ಸಂದೀಪ್ ಯಾದವ್ ತಲೆಗೆ ಐದು ಲಕ್ಷ ರು. ಬಹುಮಾನ ಘೋಷಿಸಿತ್ತು. ಅಲ್ಲದೇ ಜಾರ್ಖಂಡ್ ಸರಕಾರ ಈತನನ್ನು ಜೀವಂತವಾಗಿ ಅಥವಾ ಮರಣವಾಗಿ ಹಿಡಿದುಕೊಟ್ಟರೆ 25 ಲಕ್ಷ ರು. ಬಹುಮಾನ ನೀಡುವುದಾಗಿ ಘೋಷಿಸಿತ್ತು.

Top Maoist leader Sandeep Yadav found dead

ಹಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಸಂದೀಪ್ ಯಾದವ್, ಔಷಧಗಳ ಅಡ್ಡ ಪರಿಣಾಮದಿಂದ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಬಿಹಾರ ಪೊಲೀಸ್ ಮೂಲಗಳು ತಿಳಿಸಿವೆ.

ಗಯಾದ ಲುತುವಾ ಗ್ರಾಮ ಮೂಲದ ಸಂದೀಪ್ ಯಾದವ್ ಪತ್ನಿ ಶಿಕ್ಷಕಿಯಾಗಿದ್ದಾರೆ. ದಂಪತಿಯ ಪುತ್ರಿ ಮತ್ತು ಅಳಿಯ ದೆಹಲಿಯಲ್ಲಿ ವಾಸವಾಗಿದ್ದಾರೆ ಎಂದು ವರದಿಯಾಗಿದೆ.

(ಒನ್ಇಂಡಿಯಾ ಸುದ್ದಿ)

English summary
A top Maoist leader Sandeep or Vijay Yadav was found dead in the Lutua forests of Gaya on Wednesday evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X