• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗಂಗಾ ನದಿಯಲ್ಲಿ ಅಕ್ರಮ ಮದ್ಯ ಪತ್ತೆ ಹಚ್ಚಿದ ಅಧಿಕಾರಿಗಳು

|
Google Oneindia Kannada News

ಪಾಟ್ನಾ ಮೇ 15: ಗಂಗಾನದಿಯನ್ನು ಅಕ್ರಮವಾಗಿ ಮದ್ಯ ಸಾಗಾಟ ಮಾಡಲು ಬಳಸಲಾಗುತ್ತಿದೆ. ಬಿಹಾರದಲ್ಲಿ ಮದ್ಯ ನಿಷೇಧವಿದ್ದರೂ ಅಕ್ರಮ ಮದ್ಯದ ದಂಧೆ ನಿಂತಿಲ್ಲ. ಪೋಲಿಸರು ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳ ಕಣ್ಣು ತಪ್ಪಿಸಿ ಗಂಗಾನದಿಯಲ್ಲಿ ಮದ್ಯವನ್ನು ಸಾಗಿಸಲಾಗಿದೆ.

ಬಿಹಾರದಲ್ಲಿ ಮದ್ಯ ನಿಷೇಧ ತಿದ್ದುಪಡಿ ಕಾಯ್ದೆಗೆ ಜಾರಿಗೆ ಬಂದ ಬಳಿಕ ಅಕ್ರಮ ಮದ್ಯ ದಂಧೆಕೋರರು ಹೊಸ ತಂತ್ರಗಳನ್ನು ಅಳವಡಿಸಿಕೊಂಡಿದ್ದಾರೆ. ಆದರೂ ಸಹ ಅಬಕಾರಿ ಇಲಾಖೆಯ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದು, ನದಿಯಲ್ಲಿ ಮೀನುಗಳನ್ನು ಹಿಡಿದ ಹಾಗೆ ಭಾರಿ ಪ್ರಮಾಣದ ಮದ್ಯವನ್ನು ಅಧಿಕಾರಿಗಳು ದಾಳಿ ಮಾಡಿ ನಾಶ ಪಡಿಸಿದ್ದಾರೆ.

ಬಿಹಾರದ ಸರನ್ ಜಿಲ್ಲೆಯ ಛಾಪ್ರಾದಲ್ಲಿ ಗಂಗಾ ನದಿಯಿಂದ ಮೀನಿನ ಬದಲು ಮದ್ಯ ಸಿಗುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಇತ್ತೀಚಿನ ದಿನಗಳಲ್ಲಿ ಅಬಕಾರಿ ಇಲಾಖೆಯು ಅಕ್ರಮ ಮದ್ಯದ ದಂಧೆಕೋರರು ಮತ್ತು ಅವರ ತಾಣಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದೆ. ಹೀಗಾಗಿ ಕಳ್ಳಸಾಗಣೆದಾರರು ದಾಳಿ ತಪ್ಪಿಸಲು ಹೊಸ ಮಾರ್ಗಗಳನ್ನು ಆವಿಷ್ಕರಿಸುತ್ತಿದ್ದಾರೆ.

ಅಬಕಾರಿ ಇಲಾಖೆಯ ಅಧಿಕಾರಿಗಳು ಅವತಾರ್ ನಗರದಲ್ಲಿ ಅಪಾರ ಪ್ರಮಾಣದ ದೇಶೀ ಮದ್ಯವನ್ನು ವಶಪಡಿಸಿಕೊಂಡು ನಾಶಪಡಿಸಿದ್ದಾರೆ. ಸ್ಥಳೀಯವಾಗಿ ತಯಾರಿಸಿದ ಮದ್ಯವನ್ನು ಗಂಗಾನದಿಯಲ್ಲಿ ನೀರಿನಲ್ಲಿ ಬಚ್ಚಿಟ್ಟಿದ್ದು, ದೋಣಿ ಮೂಲಕ ದಾಳಿ ಬಂದು ದಾಳಿ ಮಾಡಿರುವ ಅಬಕಾರಿ ಇಲಾಖೆ ಅಧಿಕಾರಿಗಳ ತಂಡ ಮದ್ಯವನ್ನು ನಾಶಪಡಿಸಿದೆ.

ನದಿಯಲ್ಲಿ ಬಚ್ಚಿಟ್ಟಿರುವ ಮದ್ಯ ಪತ್ತೆಗೆ ಇಲಾಖೆ ಹರಸಾಹಸ ಪಡುತ್ತಿದೆ. ಡ್ರೋನ್‌ಗಳ ಮೂಲಕ ಅಧಿಕಾರಿಗಳು ಪತ್ತೆ ಹಚ್ಚಬಾರದು ಎಂದು ಗಂಗಾ ನದಿಯಲ್ಲಿ ಮದ್ಯವನ್ನು ಬಚ್ಚಿಡುತ್ತಿದ್ದಾರೆ. ನದಿಯಲ್ಲಿ ಬಚ್ಚಿಟ್ಟಿದ್ದ ಮದ್ಯವನ್ನು ಪತ್ತೆ ಹಚ್ಚಲು ಅಬಕಾರಿಗಳು ದೋಣಿ ಬಳಸಿತು. ಗಂಗಾನದಿಯಲ್ಲಿ ನೀಲಿ ಗೋಣಿ ಚೀಲಗಳಲ್ಲಿ ಬಚ್ಚಿಟ್ಟಿದ್ದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.

Thousands of liters of illegal liquor kept hidden in the Ganga river recovered

ಅನುಮಾನದ ಆಧಾರದ ಮೇಲೆ ತಂಡ ದಾಳಿ ಮಾಡಿದೆ. ಅಬಕಾರಿ ಸೂಪರಿಂಟೆಂಡೆಂಟ್ ರಜನೀಶ್ ಕುಮಾರ್ ಪ್ರಕಾರ ಡ್ರೋನ್‌ಗಳ ಮೂಲಕ ಶೋಧ ಆರಂಭಿಸಿದಾಗ ನದಿಯೊಳಗೆ ಮದ್ಯವನ್ನು ಬಚ್ಚಿಟ್ಟಿರುವ ಸಾಧ್ಯತೆ ಇದೆ. ನಂತರ ಇಲಾಖೆಯ ತಂಡವು ಸೂಕ್ತ ಮಾಹಿತಿ ಮೇಲೆ ದಾಳಿ ನಡೆಸಿದಾಗ ಮದ್ಯ ಪತ್ತೆಯಾಗಿದೆ.

ದಾಳಿ ವೇಳೆ ಮದ್ಯ ಕಳ್ಳಸಾಗಣೆದಾರರು ಪರಾರಿಯಾಗಿದ್ದರೂ ಗಂಗಾನದಿಯೊಳಗಿಂದ ನೂರಾರು ಗೋಣಿ ಚೀಲಗಳಲ್ಲಿದ್ದ ಸಾವಿರಾರು ಲೀಟರ್ ಮದ್ಯ ಹಾಗೂ ಮದ್ಯ ತಯಾರಿಕೆಯ ಸಾಮಗ್ರಿಗಳು ಪತ್ತೆಯಾಗಿದ್ದು, ಅವುಗಳನ್ನು ಸ್ಥಳದಲ್ಲೇ ನಾಶಪಡಿಸಲಾಗಿದೆ.

English summary
There is a complete liquor ban in Bihar. Illegal liquor business continues. Thousands of liters of illegal liquor kept hidden in the Ganga river recovered by excise department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X