ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಲು ಪ್ರಸಾದ್‌ ಒತ್ತೆಯಾಳು?: ತೇಜಸ್ವಿ ಯಾದವ್‌ ಹೇಳಿದ್ದಿಷ್ಟು..

|
Google Oneindia Kannada News

ಪಟ್ನಾ, ಅಕ್ಟೋಬರ್‌ 03: ತನ್ನ ತಂದೆ, ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ ಯಾದವ್‌ರನ್ನು ದೆಹಲಿಯಲ್ಲಿ ಒತ್ತೆಯಾಳಾಗಿ ಇರಿಸಲಾಗಿದೆ ಎಂಬ ತನ್ನ ತಮ್ಮ, ಬಿಹಾರ ಸಚಿವ ತೇಜ್‌ ಪ್ರತಾಪ್‌ ಯಾದವ್‌ರ ಹೇಳಿಕೆಗೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಪ್ರತಿಕ್ರಿಯೆ ನೀಡಿದ್ದಾರೆ.

ತಮ್ಮ ತಂದೆಯನ್ನು ದಿಲ್ಲಿಯಲ್ಲಿ ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿದೆ ಮತ್ತು ಪಕ್ಷದ ಅಧ್ಯಕ್ಷ ಸ್ಥಾನವನ್ನು ಆಕ್ರಮಿಸಿಕೊಳ್ಳಲು ಯಾರೋ ಪ್ರಯತ್ನಿಸುತ್ತಿದ್ದಾರೆ ಎಂದು ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಹಿರಿ ಮಗ ತೇಜ್ ಪ್ರತಾಪ್ ಯಾದವ್ ಆರೋಪ ಮಾಡಿದ್ದಾರೆ.

 ಜಾತಿ ಆಧಾರಿತ ಜನಗಣತಿಗಾಗಿ ಪ್ರಧಾನಿ ಮೋದಿಯನ್ನು ಒತ್ತಾಯಿಸಿದ ನಿತೀಶ್, ತೇಜಸ್ವಿ ಜಾತಿ ಆಧಾರಿತ ಜನಗಣತಿಗಾಗಿ ಪ್ರಧಾನಿ ಮೋದಿಯನ್ನು ಒತ್ತಾಯಿಸಿದ ನಿತೀಶ್, ತೇಜಸ್ವಿ

ಇತ್ತೀಚೆಗಷ್ಟೇ ಕಿರಿಯ ಸಹೋದರ ತೇಜಸ್ವಿ ಯಾದವ್‌ ವಿರುದ್ದ ತೇಜ್‌ ಪ್ರತಾಪ್‌ ಯಾದವ್‌ ಈ ಹೇಳಿಕೆಯನ್ನು ತಮ್ಮ ತೇಜಸ್ವಿ ಯಾದವ್‌ ವಿರುದ್ಧವೇ ಈ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗಿದೆ. ಈ ನಿಟ್ಟಿನಲ್ಲಿ ತೇಜಸ್ವಿ ಯಾದವ್‌ ಪ್ರತಿಕ್ರಿಯೆ ನೀಡಿದ್ದಾರೆ.

"ಲಾಲು ಜಿ ಬಿಹಾರದಲ್ಲಿ ಮುಖ್ಯಮಂತ್ರಿ ಆಗಿ ಹಲವಾರು ವರ್ಷಗಳ ಕಾಲ ಇದ್ದರು. ಎಲ್‌ ಕೆ ಅಡ್ವಾನಿಯನ್ನು ಬಂಧನ ಮಾಡುವ ಕಾರ್ಯ ಇವರು ಮಾಡಿಸಿದ್ದಾರೆ. ಅವರ ಘನತೆಗೆ ಇದು ಸರಿಯಲ್ಲ," ಎಂದು ಹೇಳಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಮೇವು ಹಗರಣದ ಆರೋಪಿ ಲಾಲು ಪ್ರಸಾದ್ ಅವರಿಗೆ ರಾಂಚಿ ನ್ಯಾಯಾಲಯ ಜಾಮೀನು ನೀಡಿದ ಬಳಿಕ ಅವರು ದಿಲ್ಲಿಗೆ ಸ್ಥಳಾಂತರಗೊಂಡಿದ್ದರು. ಈ ಹಿನ್ನೆಲೆ, ಮಾತನಾಡಿದ್ದ ಬಿಹಾರ ಸಚಿವ ತೇಜ್‌ ಪ್ರತಾಪ್‌ ಯಾದವ್‌, "ನನ್ನ ತಂದೆಗೆ ಅನಾರೋಗ್ಯವಿದೆ. 4-5 ಜನರು ರಾಷ್ಟ್ರೀಯ ಜನತಾ ದಳದ ರಾಷ್ಟ್ರೀಯ ಮುಖ್ಯಸ್ಥರಾಗುವ ಕನಸು ಕಾಣುತ್ತಿದ್ದಾರೆ. ಜೈಲಿನಿಂದ ಒಂದು ವರ್ಷದ ಹಿಂದೆ ಬಿಡುಗಡೆ ಮಾಡಲಾಗಿದೆ, ಆದರೆ ಬಳಿಕ ಲಾಲು ಪ್ರಸಾದ್‌ರನ್ನು ದೆಹಲಿಯಲ್ಲಿ ಒತ್ತೆಯಾಳು ಮಾಡಲಾಗಿದೆ," ಎಂದು ತಿಳಿಸಿದ್ದಾರೆ.

ಲಾಲು ಪ್ರಸಾದ್ ಯಾದವ್‌ರನ್ನು ದೆಹಲಿಯಲ್ಲಿ ಬಂಧಿಸಿಡಲಾಗಿದೆ ಎಂಬ ತೇಜ್ ಪ್ರತಾಪ್ ಆರೋಪದಿಂದ ಉಂಟಾಗಿರುವ ಅನುಮಾನಗಳಿಗೆ ವಿವರಣೆ ನೀಡಿ ಎಂದು ತೇಜಸ್ವಿ ಯಾದವ್ ಆಡಳಿತಾರೂಢ ಜೆಡಿಯು ಆಗ್ರಹಿಸಿದೆ. "ಇದು ಆರ್‌ಜೆಡಿ ಆಂತರಿಕ ವಿಚಾರ. ಲಾಲು ಪ್ರಸಾದ್ ಯಾದವ್ ಜೊತೆ ನಾವು ರಾಜಕೀಯ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿದ್ದೇವೆ. ಆದರೆ ಅವರನ್ನು ಬಂಧನದಲ್ಲಿ ಇರಿಸಲಾಗಿದೆ ಎಂಬ ಆರೋಪವು ಗಂಭೀರವಾಗಿದೆ. ಹಾಗಾಗಿ ಈ ಬಗ್ಗೆ ತೇಜಸ್ವಿ ಯಾದವ್ ಪ್ರತಿಕ್ರಿಯೆ ನೀಡಬೇಕು," ಎಂದು ಜೆಡಿಯು ಎಂಎಲ್‌ಸಿ ನೀರಜ್‌ ಕುಮಾರ್‌ ಆಗ್ರಹಿಸಿದ್ದರು.

(ಒನ್‌ಇಂಡಿಯಾ ಸುದ್ದಿ)

English summary
Tejashwi Yadav responds to his brother’s claim that Lalu Prasad Yadav is being held hostage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X